ಕಲಬುರಗಿ : ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮಾದರಿಯಲ್ಲಿ 1,000 ಕೋಟಿ ರು. ವೆಚ್ಚದಲ್ಲಿ 1,166 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಲ್ಯಾಣ ಪಥ ಯೋಜನೆಗೆ ರಾಜ್ಯಸಭೆ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದ್ದಾರೆ.
ಶನಿವಾರ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿಯಲ್ಲಿ ಕಲ್ಯಾಣ ಪಥ ಯೋಜನೆಯ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಹಿಂದುಳಿಯಲು ಇಲ್ಲಿನ ನಾಯಕರೇ ಕಾರಣ: ಹಳೇ ಮೈಸೂರು, ಬೆಂಗಳೂರು ಪ್ರದೇಶಕ್ಕೆ ಹೋಲಿಕೆ ಮಾಡಿದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿರುವುದು ಕಟು ಸತ್ಯ. ಇಲ್ಲಿನ ನಾಯಕರ ಇಚ್ಛಾಸಕ್ತಿ ಕೊರತೆಯೇ ಇದಕ್ಕೆ ಕಾರಣ. ಹಿಂದಿನ ಸರ್ಕಾರದ ಯೋಜನೆಗಳು ಬೆಂಗಳೂರಿನಿಂದ ಶುರುವಾಗಿ ದಾವಣಗೆರೆ ದಾಟುತ್ತಿರಲಿಲ್ಲ. ಅದಕ್ಕೇ ಕಲ್ಯಾಣ ಹಿಂದುಳಿದು ಹೈರಾಣಾಗಿದೆ.
ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ಕೊಟ್ಟಿದ್ದೀವಿ ಎಂದು ಶಿವಕುಮಾರ್‌ಹೇಳಿದ್ದಾರೆ. ನಮ್ಮ ಹಿಂದುಳಿದಿರುವಿಕೆ ಪ್ರಮಾಣ ನೋಡಿದಲ್ಲಿ 75 ಸಾವಿರ ಕೋಟಿ ಏನಕ್ಕೂ ಸಾಲದು, 1 ಲಕ್ಷ ಕೋಟಿ ಕೊಟ್ಟರೂ ಸಾಕಾಗುವುದಿಲ್ಲ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲ್ಯಾಣ ಪಥ ಯೋಜನೆಯಡಿ 1,000 ಕೋಟಿ ರು.ಖರ್ಚು ಮಾಡಿ 1,150 ಕಿ.ಮೀ ಮತ್ತು ರಾಜ್ಯದಾದ್ಯಂತ ಪ್ರಗತಿಪಥ ಯೋಜನೆಯಡಿ 5,190 ಕೋಟಿ ರು.ಮೊತ್ತದಲ್ಲಿ 7,110 ಕಿ.ಮೀ ರಸ್ತೆ ನಿರ್ಮಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ಮುಂದಿನ ದಿನದಲ್ಲಿ ಹಳ್ಳಿಯಲ್ಲಿ ರಸ್ತೆ ಕ್ರಾಂತಿ ನಿರೀಕ್ಷಿಬಹುದಾಗಿದೆ ಎಂದು ಹೇಳಿದರು.