ಬೆಂಗಳೂರು: ರಾಜ್ಯ ಸರ್ಕಾರದಿಂದ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಬೋಧಕ, ಬೋಧಕೇತರ ಅಧಿಕಾರಿ ಹಾಗೂ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಅದೇ ಪರಿಷ್ಕೃತ ವೇತನ ಹಾಗೂ ವೇತನ ಶ್ರೇಣಿಯಲ್ಲಿ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ನಿಗದಿಪಡಿಸಿ ಆದೇಶಿಸಿದೆ.
ಇಂದು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ದಿನಾಂಕ: 01-07-2022 ರಿಂದ 31-07-2024 ರವರೆಗೆ ನಿವೃತ್ತರಾಗಿರುವ ಬೋಧಳ /ಬೋಧಕೇತರ ಅಧಿಕಾರಿ ಹಾಗೂ ನೌಕರರುಗಳಿಗೆ ಪರಿಷ್ಕೃತ ವೇತನ ಹಾಗೂ ವೇತನ ಶ್ರೇಣಿಯಲ್ಲಿ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ನಿಗದಿಪಡಿಸಲಾಗುತ್ತಿದೆ ಎಂದಿದ್ದಾರೆ.
ದಿನಾಂಕ: 01-07-2022 ರಿಂದ 31-07-2024 ರವರೆಗೆ ನಿವೃತ್ತರಾಗಿರುವ ಬೋಧಕ /ಬೋಧಕೇತರ ಅಧಿಕಾರಿ ಹಾಗೂ ನೌಕರರುಗಳಿಗೆ ಪರಿಷ್ಕೃತ ವೇತನ ಹಾಗೂ ವೇತನ ಶ್ರೇಣಿಯಲ್ಲಿ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ನಿಗದಿಪಡಿಸುವ ಸಂಬಂಧ ಉಲ್ಲೇಖಿತ-01 ರ ಸರ್ಕಾರದ ಆದೇಶದಗಳನ್ವಯ ನಿಯಮಾನುಸಾರ ವಿಳಂಬವಿಲ್ಲದಂತೆ ಅಗತ್ಯ ಕ್ರಮವಹಿಸಲು ಎಲ್ಲಾ ಡಿಡಿಓ ಗಳಿಗೆ ಸೂಚಿಸುವಂತೆ ತಿಳಿಸಿದ್ದಾರೆ.
BREAKING NEWS: ಡಿ.5ರಂದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ
BIG NEWS : ಯಾರು ಕಣ್ಣೀರು ಹಾಕಬಾರದು, ನಾವು ಸತ್ತಿಲ್ಲ ಸೋತಿದ್ದೇವೆ ಅಷ್ಟೇ : ನಿಖಿಲ್ ಕುಮಾರಸ್ವಾಮಿ ಹೇಳಿಕೆ