ಬೆಂಗಳೂರು: 2023-24 ಮತ್ತು 2024-25ನೇ ಸಾಲಿನಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ, ನಿವೃತ್ತಿ ಹೊಂದಿರುವ ಶಿಕ್ಷಕ, ಸಿಬ್ಬಂದಿಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗಧೀಕರಣಕ್ಕಾಗಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ಶಾಲಾ ಶಿಕ್ಷಣ ಇಲಾಖೆಯಲ್ಲಿ 2023-24 ರಿಂದ 2024-25 ನೇ ಸಾಲಿನವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗಧೀಕರಣಕ್ಕಾಗಿ ಅಗತ್ಯವಾದ ಅನುದಾನವನ್ನು ಲೆಕ್ಕಶೀರ್ಷಿಕೆ:2071-01-109-1-02 ಯ ಉದ್ದೇಶಿತ ಶೀರ್ಷಿಕೆ:251 ರಡಿ ಉಲ್ಲೇಖ(1) ರ ಸರ್ಕಾರದ ಪತ್ರದನ್ವಯ ಬಿಡುಗಡೆ ಮಾಡಲಾಗಿರುತ್ತದೆ ಎಂದಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು/ಸಿಬ್ಬಂದಿಗಳ ಮಾಹಿತಿಗಳನ್ನು ತಾಲ್ಲೂಕು ಕಛೇರಿಗಳಿಂದ ಪಡೆದು ಕ್ರೋಢಿಕರಿಸಿ ಕ್ರೋಢೀಕೃತ ಮಾಹಿತಿಯನ್ನು ಈ ಕಛೇರಿಗೆ ಪರಿಶೀಲನೆಗಾಗಿ ದಿ:11.02.2025 ರ ಒಳಗಾಗಿ ಒದಗಿಸುವಂತೆ ಜಿಲ್ಲಾ ಕಛೇರಿಗಳಿಗೆ ಉಲ್ಲೇಖ(2)ರಲ್ಲಿ ಸೂಚಿಸಲಾಗಿರುತ್ತದೆ. ಅದಗ್ಯೂ ಮೂರು ದಿನಗಳು ಹೆಚ್ಚುವರಿಯಾಗಿ ವಿಸ್ತರಿಸಿ ಜಿಲ್ಲಾ ಕಛೇರಿಯಿಂದ ಒದಗಿಸಿರುವ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಲಾಗಿರುತ್ತದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ 29 ಜಿಲ್ಲಾ ಕಛೇರಿಗಳಿಂದ ಮಾತ್ರ ಮಾಹಿತಿಯು ಈ ಕಛೇರಿಗೆ ಸ್ವೀಕೃತಗೊಂಡಿದ್ದು, ಸದರಿ ಜಿಲ್ಲಾ ಕಛೇರಿಗಳಿಂದ ಒದಗಿಸಿರುವ ಮಾಹಿತಿಯಂತೆ ಪರಿಶೀಲಿಸಿ ಸದರಿ ಮಾಹಿತಿ ಒದಗಿಸಿರುವ 29 ಜಿಲ್ಲೆಗಳಿಗೆ ಮಾತ್ರ ಉಲ್ಲೇಖ(3) ರ ಜ್ಞಾಪನದನ್ವಯ ಒಟ್ಟು ರೂ.8701.40ಲಕ್ಷಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿರುತ್ತದೆ. ಇನ್ನುಳಿದ ಆರು ಜಿಲ್ಲೆಗಳಿಂದ ಮಾಹಿತಿ ಒದಗಿಸದ ಕಾರಣ ಸದರಿ ಆರು ಜಿಲ್ಲೆಗಳಿಗೆ ಅನುದಾನ ಬಿಡುಗಡೆಯನ್ನು ತಡೆಹಿಡಿದು ಉಲ್ಲೇಖ(4) ರಲ್ಲಿ ಗೈರು ಹಾಜರಾದ ಜಿಲ್ಲೆಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿ ಸೂಕ್ತ ವಿವರಣೆಯೊಂದಿಗೆ ಮಾಹಿತಿಯನ್ನು ಒದಗಿಸುವಂತೆ ಆರು ಉಪನಿರ್ದೇಶಕರಿಗೆ ತಿಳಿಸಲಾಗಿರುತ್ತದೆ.
ಸದರಿ ಗೈರು ಹಾಜರಾದ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಚಿಕ್ಕಮಗಳೂರು, ಬಾಗಲಕೋಟೆ, ಶಿರಸಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ ಹಿನ್ನಲೆಯಲ್ಲಿ ಜಿಲ್ಲೆಗಳಿಂದ ಈ ಕಛೇರಿಗೆ ಪ್ರಸ್ತುತ ದಿನದವೆರೆಗೂ ಹಾಜರಾಗಿ ಮಾಹಿತಿಯನ್ನು ಒದಗಿಸಿದ್ದು, ಸದರಿ ಜಿಲ್ಲಾ ಕಛೇರಿಗಳಿಂದ ಒದಗಿಸಿರುವ ಮಾಹಿತಿಯಂತೆ ಪರಿಶೀಲಿಸಿ ಲಭ್ಯ ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ.
2024-25 ನೇ ಸಾಲಿನಲ್ಲಿ ಆರ್ಥಿಕ ಇಲಾಖೆಯಿಂದ ಬಿಡುಗಡೆ ಆದ ಅನುದಾನದಲ್ಲಿ ಬಾಕಿ ಮಾಹಿತಿಗಳನ್ನು ಒದಗಿಸಿದ ಆರು ಜಿಲ್ಲೆಗಳಿಗೆ ಹಾಗೂ ಪೂರ್ಣ ಮಾಹಿತಿಯನ್ನು ಪ್ರಸ್ತುತ ಒದಗಿಸಿರುವ ಹಿಂದಿನ 29 ಜಿಲ್ಲೆಗಳು ಒಳಗೊಂಡಂತೆ ಉಲ್ಲೇಖ-3ರ ಜ್ಞಾಪನದಂತೆ ಬಿಡುಗಡೆಯಾದ ಅನುದಾನದಲ್ಲಿ ನಿರ್ದಿಷ್ಟ ದಿನಾಂಕದಿಂದ ವೆಚ್ಚ ಭರಿಸದಂತಹ ತಾಲ್ಲೂಕುಗಳಲ್ಲಿನ ಅನುದಾನವನ್ನು ಹಿಂಪಡೆದಿದ್ದು, ಅಗತ್ಯವಿರುವ ತಾಲ್ಲೂಕು/ಜಿಲ್ಲೆಗಳಿಗೆ ಲಭ್ಯವಿರುವ ಅನುದಾನ ಹಾಗೂ ಹಿಂಪಡೆದಂತಹ ಅನುದಾನವನ್ನು ಒಳಗೊಂಡಂತೆ ಒಟ್ಟು ರೂ2133.12ಲಕ್ಷಗಳನ್ನು ಅನುಬಂಧದಲ್ಲಿರುವಂತೆ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಅನುದಾನವನ್ನು ದಿ:15.03.2025 ರ ಒಳಗಾಗಿ ಭರಿಸುವುದು. ಒಂದು ವೇಳೆ ಒದಗಿಸಿರುವ ಅನುದಾನವನ್ನು ವ್ಯಪಗತವಾಗದಂತೆ ವೆಚ್ಚ ವ್ಯಪಗತಗೊಳಿಸಿದ್ದಲ್ಲಿ ಸಂಬಂಧಿಸಿದ ಡಿಡಿಓಗಳನ್ನು ನೇರ ಹೊಣೆ ಮಾಡಲಾಗುವುದು.
ಬಿಡುಗಡೆ ಮಾಡಲಾದ ಅನುದಾನವನ್ನು ಜೇಷ್ಠತೆ ಆಧಾರದ ಮೇಲೆ ವೆಚ್ಚ ಭರಿಸತಕ್ಕದ್ದು, ಅಂದರೆ 2023-24 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ನೌಕರರುಗಳಿಗೆ ಪ್ರಥಮ ಆದ್ಯತೆ ಮೇರೆಗೆ ವೆಚ್ಚ ಭರಿಸತಕ್ಕದ್ದು, ನಂತರದಲ್ಲಿ 2024-25ನೇ ಸಾಲಿನಲ್ಲಿ ನಿವೃತ್ತರಾದ ನೌಕರರುಗಳ ಪೈಕಿ ಕ್ಯಾಲೆಂಡರ್ ಮಾಹೆಯವಾರು ಅಂದರೆ ಏಪ್ರಿಲ್- 2023ರಿಂದ ಜನವರಿ-2025 ರಂತೆ ಮಾಹೆವಾರು ನಿವೃತ್ತರಾದ ನೌಕರರುಗಳ ಜೇಷ್ಠತಾ ಪಟ್ಟಿ ಸಿದ್ದಪಡಿಸಿಕೊಂಡು ಅದರಂತೆ ಗಳಿಕೆ ರಜೆ ನಗಧೀಕರಣ ಸೌಲಭ್ಯದ ವೆಚ್ಚ ಭರಿಸುವುದು.
ಮೇಲೆ ವಿವರಿಸಲಾದ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಸದರಿ ಅನುದಾನ ಬಿಡುಗಡೆಗೊಳಿಸುತ್ತಿರುವ ತಾಲ್ಲೂಕು ಡಿಡಿಓಗಳು ಜೇಷ್ಠತೆ ಮೇರೆಗೆ ಶಿಕ್ಷಕರು/ಸಿಬ್ಬಂದಿಗಳ ಸೇವಾಪುಸ್ತಕದಲ್ಲಿ ದೃಢೀಕರಿಸಿರುವಂತೆ ನಿವೃತ್ತಿ ದಿನಾಂಕಕ್ಕೆ ಲಭ್ಯವಿರುವ ಆಖೈರು ಶಿಲ್ಕಿನ ಗಳಿಕೆ ರಜೆಯ ತಃಖೆಯನ್ನು ಮತ್ತೊಮ್ಮೆ ಮರುಪರಿಶೀಲಿಸಿ ಸೇವಾ ಪುಸ್ತಕದಲ್ಲಿ ನಮೂದಿಸಿರುವ ಗಳಿಕೆ ರಜೆ ಮಾಹಿತಿಯು ಕ್ರಮವಾಗಿರುವ ಬಗ್ಗೆ ಕಡ್ಡಾಯವಾಗಿ ದೃಢಪಡಿಸಿಕೊಳ್ಳುವುದು ಹಾಗೂ ಅದರಂತೆ ಲೆಕ್ಕಾಚಾರ ಮಾಡಿ ಅನುದಾನ ಬಿಡುಗಡೆ ಮಾಡುವುದು. ಈ ಕುರಿತು ಮೇಲು ಸಹಿ ಪ್ರಾಧಿಕಾರವು ಸಹ ಮೇಲೆ ವಿವರಿಸಿದಂತೆ ಗಳಿಕೆ ರಜೆ ಲೆಕ್ಕಾಚಾರ ಹಾಗೂ ಆಖೈರು ಉಳಿಕೆ ರಜೆ ಲೆಕ್ಕ ಕ್ರಮವಾಗಿರುವ ಬಗ್ಗೆ ದೃಢಪಡಿಸಿಕೊಂಡು ಮೇಲು ಸಹಿ ಮಾಡುವುದು. ಅನುದಾನ ಸೆಳೆಯುವ ಸಂಬಂಧ ಮೇಲು ರುಜು ಮಾಡಲು ವಿಳಂಬವಾಗದಂತೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಆಯಾ ಡಿಡಿಓಗಳಿಗೆ ಸಕಾಲದಲ್ಲಿ ಬಿಲ್ ಸಲ್ಲಿಸುವಂತೆ ಸೂಚಿಸುವುದು.
ಒಂದು ವೇಳೆ ಬಿಡುಗಡೆಯಾದ ಅನುದಾನ ವ್ಯಪಗತವಾದಲ್ಲಿ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿ ಮತ್ತು ಮೇಲು ಸಹಿ ಪ್ರಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುವ ಷರತ್ತಿನ ಮೇರೆಗೆ ಅನುದಾನ ಬಿಡುಗಡೆ ಮಾಡಲಾಗಿದೆ.
GOOD NEWS: ರಾಜ್ಯದ ‘ಸಾರಿಗೆ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಎಲ್ಲರಿಗೂ ‘ನಗದು ರಹಿತ ವೈದ್ಯಕೀಯ ಚಿಕಿತ್ಸೆ’