ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸಿಹಿಸುದ್ದಿಯನ್ನು ನೀಡಲಾಗಿದೆ. ಅದೇನೆಂದರೇ, ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೂ ಆರೋಗ್ಯ ಯೋಜನೆಯಡಿಯಲ್ಲಿ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಈ ಕುರಿತಂತೆ ಐಜಿಪಿ ಡಾ.ಬಿಆರ್ ರವಿಕಾಂತೇಗೌಡ ಅವರು ಆದೇಶ ಹೊರಡಿಸಿದ್ದು, ಅದರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ. ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಅವರ ಪತಿ/ಪತ್ನಿ ರವರಿಗೆ ಚಿಕಿತ್ಸೆ ಒದಗಿಸುವ ಸಂಬಂಧ ಈ ಕೆಳಕಂಡ ಆಸ್ಪತ್ರೆಯನ್ನು ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ನಿವೃತ್ತ ಆರೋಗ್ಯ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
1. K.S. Health Care, Hosapete Road, Koppal dist
ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಸೇವಾನಿರತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸಿ.ಜಿ.ಹೆಚ್.ಎಸ್ ದರದಲ್ಲಿ ಚಿಕಿತ್ಸೆ ಒದಗಿಸುತ್ತಿದ್ದೀರಿ. ಅದೇ ರೀತಿ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಅವರ ಪತಿ/ಪತ್ನಿ ರವರಿಗೆ ಚಿಕಿತ್ಸೆ ಒದಗಿಸುವ ಬಗ್ಗೆ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ಪ್ರಕ್ರಿಯೆಗೆ ಗುಷ್ಟ ಮಿತಿ ಒಂದು ವರ್ಷಕ್ಕೆ ಓರ್ವ ಸದಸ್ಯನ ಕುಟುಂಬಕ್ಕೆ ರೂ.1.00 ಲಕ್ಷ, ವಿಶೇಷ ಹಾಗೂ ಸಂಕೀರ್ಣ ನಸ್ತ್ರ ಚಿಕಿತ್ಸೆಗಳಲ್ಲಿ (ಇಂಪ್ಲಾಂಟ್, ಸ್ಟಂಟ್ ಸೇರಿ) ಹೆಚ್ಚಿನ ರೂ.1.00 ಲಕ್ಷ (ಒಟ್ಟಾಗಿ ರೂ.2.00 ಲಕ್ಷಗಳು) ಗರಿಷ್ಟ ಮಿತಿ ಇದ್ದು, ಸದರಿ ಮೊತ್ತವನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತದೆ, ಚಿಕಿತ್ಸೆ ನೀಡಲು ಸಂಬಂಧಪಟ್ಟ ಘಟಕಾಧಿಕಾರಿ ರವರಿಂದ ದೃಢೀಕರಣ ಪತ್ರವಿದ್ದಲ್ಲಿ (Annexure-G) ಮಾತ್ರ ಚಿಕಿತ್ಸೆಯನ್ನು ನೀಡಲು ಕೋರಿದ್ದಾರೆ ಎಂದು ಹೇಳಿದ್ದಾರೆ.
‘ಗೌರಿ ಹಾಗೂ ಗಣೇಶ ಹಬ್ಬ’ ಆಚರಣೆ ಕುರಿತು ಸಾರ್ವಜನಿಕರಿಗೆ ಮಹತ್ವದ ಮಾಹಿತಿ | Ganesh Chaturthi 2024
Job Alert : ಭಾರತೀಯ ರೈಲ್ವೆ ಇಲಾಖೆಯಲ್ಲಿ 14,298 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | RRB Recruitment 2024