ಶಿವಮೊಗ್ಗ: ನಗರದಲ್ಲಿ ಧಾರ್ಮಿಕ, ಮದುವೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮ ಮಾಡೋರಿಗೆ ಗುಡ್ ನ್ಯೂಸ್ ಎನ್ನುವಂತೆ, ಪೇಪರ್ ಕಪ್, ಪ್ಲೇಟ್ ಇತ್ಯಾದಿ ತ್ಯಾಜ್ಯ ವಸ್ತು ಬಳಸದೇ, ಪ್ಲಾಸ್ಟಿಕ್ ತಟ್ಟೆ, ಲೋಟ ಬಳಕೆ ಮಾಡೋದಕ್ಕೆ ಉಚಿತವಾಗಿ ನೀಡಲಾಗುತ್ತದೆ. ಇದೇ ಏಪ್ರಿಲ್.12ರಂದು ಮಧ್ಯಾಹ್ನ 4 ಗಂಟೆಗೆ ಅನಂತ ಪ್ಲೇಟ್ ಬ್ಯಾಂಕ್ ಉದ್ಘಾಟನೆಯಾಗಲಿದೆ.
ಈ ಕುರಿತಂತೆ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಗರದ ಶೃಂಗೇರಿ ಶಂಕರಮಠದ ಅಶ್ವಿನಿ ಕುಮಾರ್ ಅವರು, 25 ವರ್ಷ ಸಾಗರದ ಶೃಂಗೇರಿ ಶಂಕರ ಮಠ ಸ್ಥಾಪನೆಯಾಗಿ ಆಗಿದೆ. ಈ ನೆನಪಿಗಾಗಿ ಸುವರ್ಣ ಭಾರತಿ, ವಜ್ರಮಹೋತ್ಸವ ಭಾರತಿಯಂತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಾಮಾಜಿಕ ಕೆಲಸ ಮಾಡುವ ಪ್ರಯತ್ನವನ್ನು ಶೃಂಗೇರಿಯ ಶಂಕರ ಮಠ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಇಸ್ಕಾನ್ ಬಿಟ್ಟರೇ ಶಾಲಾ ಮಕ್ಕಳಿಗೆ ಉಚಿತವಾಗಿ ಊಟ ಸರಬರಾಜು ಮಾಡುತ್ತಿರುವುದು ಶೃಂಗೇರಿಯ ಶಂಕರ ಮಠವಾಗಿದೆ. ಈ ಮೂಲಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಅದಮ್ಯ ಚೇತನಾ ಸಂಸ್ಥೆಯ ಆಶ್ರಯದಲ್ಲಿ ಇದೇ ಏಪ್ರಿಲ್.12, 2025ರಂದು ಸಂಜೆ 4 ಗಂಟೆಗೆ ಅನಂತ ಪ್ಲೇಟ್ ಬ್ಯಾಂಕ್ ಅನ್ನು ಸಾಗರದಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಜೊತೆ ಜೊತೆಗೆ ಹಸಿರು ಅಡಿಗೆ ಮನೆ, ನಿಸರ್ಗ ರಕ್ಷಣೆ ಬಗ್ಗೆಯೂ ಸಂವಾದವನ್ನು ಸಾಗರದ ಶೃಂಗೇರಿ ಶಂಕರಮಠದಲ್ಲಿ ನಡೆಯಲಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅದಮ್ಯ ಚೇತನಾ ಸಂಸ್ಥೆಯ ಅಧ್ಯಕ್ಷರಾದಂತ ತೇಜಸ್ವಿನಿ ಅನಂತಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗೆಡೆ ಅಶೀಸರ, ಬೆಂಗಳೂರಿನ ಉದ್ಯಮಿ ಪ್ರದೀಪ್ ಓಕ್, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿಆರ್ ಜಯಂತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಾಂತಾ ನಾಯಕ್ ಭಾಗವಹಿಸಲಿದ್ದಾರೆ ಎಂದರು.
ಏನಿದು ಅನಂತ ಪ್ಲೇಟ್ ಬ್ಯಾಂಕ್? ಸಭೆ ಸಮಾರಂಭಗಳಿಗೆ ಸ್ಟೀಲ್ ಪ್ಲೇಟ್, ಲೋಟ ಉಚಿತವಾಗಿ ಪಡೆಯೋದು ಹೇಗೆ.?
ಕವಲಕೋಡು ಕೆ ವೆಂಕಟೇಶ ಮಾತನಾಡಿ, ಈಗಾಗಲೇ ಅನಂತ ಪ್ಲೇಟ್ ಬ್ಯಾಂಕ್ ಶಿರಸಿ ಸೇರಿದಂತೆ ವಿವಿಧ ಭಾಗಗಳಲ್ಲಿ ಉದ್ಘಾಟನೆಗೊಂಡಿದೆ. ಸಾಗರ ನಗರದಲ್ಲೂ ಶೃಂಗೇರಿ ಶಂಕರಮಠದಲ್ಲಿ ಏಪ್ರಿಲ್.12ರಂದು ಉದ್ಘಾಟನೆಗೊಳ್ಳುತ್ತಿದೆ ಎಂದರು.
ಪ್ಲಾಸ್ಟಿಕ್ ಬಳಕೆ ತಪ್ಪಿಸಲು, ಧಾರ್ಮಿಕ, ಮದುವೆ ಇನ್ನಿತರ ಸಾಮಾಜಿಕ ಸಮಾರಂಭಗಳಲ್ಲಿ ಪೇಪರ್ ಕಪ್, ಪ್ಲೇಟ್ ಇತ್ಯಾದಿ ತ್ಯಾಜ್ಯ ವಸ್ತುಗಳ ರಾಶಿ ಇಲ್ಲದಂತೆ ಮಾಡಿ, ಭೂಮಿ ಮತ್ತು ಮನುಕುಲ ಕಾಪಾಡಲು ಸ್ಟೀಲ್ ಪ್ಲೇಟ್ ಮತ್ತು ಲೋಟದ ಬಳಕೆಗೆ ಅನುಕೂಲವಾಗಲು ಉಚಿತ ಪ್ಲೇಟ್ ಬ್ಯಾಂಕ್ ಯೋಜನೆಯನ್ನು ಬೆಂಗಳೂರಿನ ಅದಮ್ಯಚೇತನ ಸ್ವಯಂ ಸೇವಾ ಸಂಸ್ಥೆ ಎಲ್ಲೆಡೆ ಪ್ರಚುರಪಡಿಸುತ್ತಿದೆ ಎಂದು ತಿಳಿಸಿದರು.
ಸಾಗರ ನಗರದಲ್ಲಿ ಧಾರ್ಮಿಕ ಸಭೆ, ಮದುವೆ ಸೇರಿದಂತೆ ಇನ್ನಿತರೆ ಸಾಮಾಜಿಕ ಸಮಾರಂಭಗಳನ್ನು ಮಾಡುವವರು ಪೇಪರ್ ಪ್ಲೇಟ್, ಕಪ್ ಬದಲಾಗಿ ಸ್ಟೀಲ್ ಪ್ಲೇಟ್, ಕಪ್ ಬಳಕೆ ಪ್ರಚೋದನೆ ಪಡೆಸುವುದೇ ಅನಂತ ಪ್ಲೇಟ್ ಬ್ಯಾಂಕ್ ಉದ್ದೇಶವಾಗಿದೆ. ಸಾಗರ ಶೃಂಗೇರಿ ಶಂಕರಮಠಕ್ಕೆ ಬಂದು ಉಚಿತವಾಗಿ 100, 200, 500ರವರೆಗೆ ಸ್ಟೀಲ್ ಪ್ಲೇಟ್, ಪೋಟಗಳನ್ನು ಇಂತಿಷ್ಟು ಡೆಪಾಸಿಟ್ ಮಾಡಿ ಉಚಿತವಾಗಿ ಕೊಂಡೊಯ್ಯಬಹುದಾಗಿದೆ ಎಂದರು.
ಪಿಎ ಮುರಳಿ, ಆಡಳಿತಾಧಿಕಾರಿ ಇವರ ಮಾರ್ಗದರ್ಶನದಲ್ಲಿ ಶೃಂಗೇರಿ ಶಂಕರಮಠ, ಸಾಗರ ಶಾಕೆ ಮತ್ತು ಅದಮ್ಯಚೇತನ ಸಂಸ್ಥೆ ಸಹಯೋಗದಲ್ಲಿ ಸಾಗರದಲ್ಲಿ ಪ್ಲೇಟ್ ಬ್ಯಾಂಕ್ ನಡೆಸಿಕೊಂಡು ಬರುತ್ತಾರೆ. ಸುಂದರ ಪರಿಸರ ನದಿ, ಕೊಳ್ಳ, ಕೆರೆ, ಭೂಮಿಯನ್ನು ತ್ಯಾಜ್ಯದಿಂದ ಕಾಪಾಡಲು ನಮ್ಮ ಜೊತೆ ಕೈಜೋಡಿಸಿ ಉಪಯೋಗ ಪಡೆದು, ಸುಂದ ಸ್ವಚ್ಛ ಸಾಗರವನ್ನಾಗಿಸಿ ಎಂಬುದಾಗಿ ಕೋರಿದರು.
ಉಚಿತ ಸ್ಟೀಲ್ ಪ್ಲೇಟ್, ಲೋಟಗಳು ಸಭೆ-ಸಮಾರಂಭಗಳಿಗೆ ಉಚಿತವಾಗಿ ಕೊಂಡೊಯ್ಯಲು ಏಪ್ರಿಲ್.12ರ ನಂತ್ರ ಲಭ್ಯವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಾಗರದ ಶೃಂಗೇರಿ ಶಂಕರಮಠದ ಮ್ಯಾನೇಜರ್ ಮೊಬೈಲ್-9449049484 ಗೆ ಸಂಪರ್ಕಿಸಬಹುದಾಗಿದೆ.
ಈ ಸುದ್ದಿಗೋಷ್ಠಿಯ ವೇಳೆ ಕಾರ್ಯಕ್ರಮದ ಪ್ರಧಾನ ಸಂಚಾಲಕರಾದಂತ ಮಾ.ಸ ನಂಜುಂಡಸ್ವಾಮಿ, ಸಂಚಾಲಕರಾದಂತ ಸವಿತಾ ಶ್ರೀಕಾಂತ್, ಜಾಹ್ನವಿ ರಾಮಚಂದ್ರ, ಮೀರಾ ಉಡುಪ, ಕಸ್ತೂರಿ ಕೃಷ್ಣಮೂರ್ತಿ, ಪ್ರಭಾ ವೆಂಕಟೇಶ್, ಗಿರಿಜಾ ರಾಮಚಂದ್ರ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
GOOD NEWS: ಹಾಜರಾತಿ ಕೊರತೆಯಿಂದ ‘ದ್ವಿತೀಯ ಪಿಯುಸಿ ಪರೀಕ್ಷೆ-1’ಕ್ಕೆ ಹಾಜರಾಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
BREAKING : ಬೆಳಗಾವಿಯಲ್ಲಿ ಘೋರ ಘಟನೆ :ಕಾಲೇಜಿಗೆ ಹೋಗು ಅಂದಿದಕ್ಕೆ ನೇಣಿಗೆ ಶರಣಾದ ಯುವಕ!