ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ದುರಂತದ ಬಳಿಕವೂ ಐಪಿಎಲ್ ಮ್ಯಾಚ್ ಆಯೋಜನೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಂಗಳೂರಲ್ಲಿ ಆರ್ ಸಿ ಬಿ ಕಾಲ್ತುಳಿತ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಢಾಂಗಣದಲ್ಲಿ ಐಪಿಎಲ್ ಮ್ಯಾಚ್ ಆಯೋಜನೆ ಬಗ್ಗೆ ತೊಡಕು ಉಂಟಾಗಿತ್ತು. ಅಲ್ಲದೇ ಬೆಂಗಳೂರಲ್ಲಿ ಪಂದ್ಯ ಆಡಲು ಆರ್ ಸಿ ಬಿಗೆ ಕಂಡೀಷನ್ ಅಪ್ಲೈ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಕೆ ಎಸ್ ಸಿ ಎ ಗೆ ಕಂಡೀಷನ್ ಹಾಕಿ ಆರ್ ಸಿ ಬಿ ಮ್ಯಾನೇಜ್ಮೆಂಟ್ ಚಿನ್ನಸ್ವಾಮಿ ಕ್ರೀಢಾಂಗಣದಲ್ಲೇ ಆಯೋಜಿಸೋದಕ್ಕೆ ಅನುಮತಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕ್ರೀಡಾಂಗಣದ ಸುತ್ತ ಎಐ ಕ್ಯಾಮೆರಾ ಅಳವಡಿಸಬೇಕು. ಆರ್ ಸಿ ಬಿ ಪ್ರೇಕ್ಷಕರ ಸುರಕ್ಷತೆಗೆ ಮಹತ್ವ ಕೊಡಬೇಕು. 300ರಿಂದ 350 ಎಐ ಕ್ಯಾಮೆರಾ ಅಳವಡಿಸೋದು ಕಡ್ಡಾಯ. ಪ್ರೇಕ್ಷಕರ ಸರತಿಸಾಲು ಶಿಸ್ತುಬದ್ಧವಾಗಿ ನಿರ್ವಹಿಸಬೇಕು ಎಂಬುದಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಆರ್ ಸಿ ಬಿಗೆ ಷರತ್ತು ವಿಧಿಸೋ ಸಾಧ್ಯತೆ ಇದೆ.
ಸಾಗರದ ಬಿ.ಹೆಚ್ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!








