ಬೆಂಗಳೂರು: ಸಕಲೇಶಪುರ ಟು ಬಾಳ್ಳುಪೇಟೆ ಮಾರ್ಗಮಧ್ಯದ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಇಂದು ಭೂ ಕುಸಿತದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಸಂಚಾರ ಸುರಕ್ಷತೆಯ ಪರೀಕ್ಷೆಯನ್ನು ನಡೆಸಲಾಗಿದೆ. ಹೀಗಾಗಿ ನಾಳೆಯಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಪುನರಾರಂಭಗೊಳಿಸಲಾಗುತ್ತಿದೆ.
ಈ ಕುರಿತಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಮಾಹಿತಿ ನೀಡಿದ್ದು, ಸಕಲೇಶಪುರ-ಬಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತಕ್ಕೆ ಸಂಬಂಧಿಸಿದಂತೆ, ಹಳಿಯನ್ನು ಪುನಃಸ್ಥಾಪಿಸಲಾಗಿದೆ ಮತ್ತು ರೈಲು ಕಾರ್ಯಾಚರಣೆಗೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಲಾಗಿದೆ ಎಂದು ತಿಳಿಸಿದೆ.
ಯಾವೆಲ್ಲಾ ರೈಲುಗಳ ಸಂಚಾರ ರದ್ದುಪಡಿಸಲಾಗಿತ್ತು.?
ದಿನಾಂಕ 11.08.2024ರ ನೈರುತ್ಯ ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಬಿಡುಗಡೆ ಮಾಡಿದ್ದಂತ ಬುಲೆಟಿನ್ ಸಂಖ್ಯೆ-7 ರಲ್ಲಿ ಈ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಇದೀಗ ನಾಳೆಯಿಂದ ಪುನರಾರಂಭಗೊಳಿಸಲಾಗುತ್ತಿದೆ ಅಂತ ತಿಳಿಸಿದೆ. ಆದರೇ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ಪ್ರೆಸ್ ವಿಶೇಷ ರೈಲು ದಿನಾಂಕ 14.08.2024 ರಂದು ರದ್ದಾಗಿದೆ ಎಂದು ಹೇಳಿದೆ.
1. ರೈಲು ಸಂಖ್ಯೆ 16595 ಕೆಎಸ್ಆರ್ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ಮತ್ತು 13.08.2024 ರಂದು ರದ್ದಾಗಿತ್ತು.
2. ರೈಲು ಸಂಖ್ಯೆ 16596 ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ದಿನಾಂಕ 13.08.2024 ರಂದು ರದ್ದಾಗಿತ್ತು.
3. ರೈಲು ಸಂಖ್ಯೆ 16585 ಎಸ್ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ ರೈಲು 12.08.2024 ಮತ್ತು 13.08.2024 ರಂದು ರದ್ದಾಗಿತ್ತು.
4. ರೈಲು ಸಂಖ್ಯೆ 16586 ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ಮತ್ತು 13.08.2024 ರಂದು ರದ್ದಾಗಿತ್ತು.
5. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲು 12.08.2024 ಮತ್ತು 13.08.2024 ರಂದು ರದ್ದಾಗಿತ್ತು.
6. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ಪ್ರೆಸ್ ವಿಶೇಷ ರೈಲು ದಿನಾಂಕ 13.08.2024 ಮತ್ತು 14.08.2024 ರಂದು ರದ್ದಾಗಿತ್ತು.
7. ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ ರೈಲು ದಿನಾಂಕ 13.08.2024 ರಂದು ರದ್ದಾಗಿತ್ತು.
8. ರೈಲು ಸಂಖ್ಯೆ 16575 ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ದಿನಾಂಕ 13.08.2024 ರಂದು ರದ್ದಾಗಿತ್ತು.
9. ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು 12.08.2024 ಮತ್ತು 13.08.2024 ರಂದು ರದ್ದಾಗಿತ್ತು.
10. ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ಮತ್ತು 13.08.2024 ರಂದು ರದ್ದಾಗಿತ್ತು.
ಈ ಮೇಲ್ಕಂಡ ರೈಲುಗಳ ಸಂಚಾರವನ್ನು ನಾಳೆಯಿಂದ ಅವುಗಳ ನಿಗದಿತ ದಿನಾಂಕಗಳು ಮತ್ತು ಸಮಯದ ಪ್ರಕಾರ ಪುನರಾರಂಭಿಸಲಾಗುವುದು ಎಂದು ನೈರುತ್ಯ ರೈಲ್ವೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 45 ಕಾಲೇಜುಗಳಲ್ಲಿ ‘4 ಹೊಸ ಕೋರ್ಸ್’ ಆರಂಭ
BREAKING: ಶಿರೂರು ಬಳಿಯ ಗುಡ್ಡ ಕುಸಿತ ಕೇಸ್: ಗಂಗಾವಳಿ ನದಿಯಲ್ಲಿ ಲಾರಿಯ ಹಲವು ಬಿಡಿಭಾಗಗಳು ಪತ್ತೆ