ಬೆಂಗಳೂರು: ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಈ ಕೆಳಗಿನ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲಾಗುತ್ತಿದೆ ಎಂದು ಪೂರ್ವ ಕರಾವಳಿ ರೈಲ್ವೆಯು ಸೂಚಿಸಿದೆ. ಅವುಗಳ ವಿವರ ಈ ಕೆಳಗಿನಂತಿವೆ:
1. ಅಕ್ಟೋಬರ್ 2 ರಿಂದ 11, 2024 ರವರೆಗೆ ಭುವನೇಶ್ವರದಿಂದ ಹೊರಡುವ ರೈಲು ಸಂಖ್ಯೆ 18463 ಭುವನೇಶ್ವರ-ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.
2. ಅಕ್ಟೋಬರ್ 3 ರಿಂದ 12, 2024 ರವರೆಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 18464 ಕೆಎಸ್ಆರ್ ಬೆಂಗಳೂರು-ಭುವನೇಶ್ವರ ಪ್ರಶಾಂತಿ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.
3. ಅಕ್ಟೋಬರ್ 6 ರಿಂದ 17, 2024 ರವರೆಗೆ ಭುವನೇಶ್ವರದಿಂದ ಹೊರಡುವ ರೈಲು ಸಂಖ್ಯೆ 12845 ಭುವನೇಶ್ವರ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿ ಜೋಡಿಸಲಾಗುತ್ತಿದೆ.
4. ಅಕ್ಟೋಬರ್ 7 ರಿಂದ 18, 2024 ರವರೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12846 ಎಸ್ಎಂವಿಟಿ ಬೆಂಗಳೂರು-ಭುವನೇಶ್ವರ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಜೋಡಿಸಲಾಗುತ್ತಿದೆ.
ರೈತರ ಗಮನಕ್ಕೆ: ಶೇ.90ರಷ್ಟು ಸಬ್ಸಿಡಿಯೊಂದಿಗೆ ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
BREAKING : ತಿರುಪತಿ ಲಡ್ಡು ವಿವಾದ : ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್! | Tirupati Laddu Row