ಬೆಂಗಳೂರು : ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನೇಮಕಗೊಂಡು ಅನುದಾನಕ್ಕೆ ಒಳಪಟ್ಟಿರುವ ಬಿ.ಇಡಿ ಪದವಿಯನ್ನು ಹೊಂದಿಲ್ಲದ ಉಪನ್ಯಾಸಕರುಗಳನ್ನು ಬಿ.ಇಡಿ ಪದವಿ ವ್ಯಾಸಂಗಕ್ಕಾಗಿ ನಿಯೋಜಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ (1) ರ ಅಧಿಸೂಚನೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ/ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ: 04-02-2008 ರ ನಂತರಆಯ್ಕೆಯಾಗಿರುವ ವಿವಿಧ ವಿಷಯಗಳ ಉಪನ್ಯಾಸಕರುಗಳಿಗೆ ಬಿ.ಇಡಿ ವ್ಯಾಸಂಗವನ್ನು ಕಡ್ಡಾಯಗೊಳಿಸಲಾಗಿರುತ್ತದೆ.
ລຳ ជជ (2) Karnataka General Service (Pre-University Education) (Recruitment) (Rules) ಬಿ.ಇಡಿ ಅಥವಾ ಸಮಾನ ಅರ್ಹತೆಯಲ್ಲಿ ಉತ್ತೀರ್ಣರಾಗದ ಮತ್ತು ನೇಮಕಾತಿಗೆ ಪರಿಗಣಿಸಲಾದ ಅಭ್ಯರ್ಥಿಗಳು, ಅವರ ನೇಮಕಾತಿ ದಿನಾಂಕದಿಂದ ಏಳು ವರ್ಷಗಳ ಅವಧಿಯೊಳಗೆ ಅವರ ಸ್ವಂತ ವೆಚ್ಚದಲ್ಲಿ ಬಿ.ಇಡಿ ಪದವಿ ಅಥವಾ ಅದರ ಸಮನಾಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅನುಮತಿಸಲಾಗಿರುತ್ತದೆ. ಈ ಅವಧಿಯೊಳಗಾಗಿ ಬಿ.ಇಡಿ ಪದವಿ ಅಥವಾ ಸಮನಾಂತರ ಅರ್ಹತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ, ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿರುತ್ತದೆ.
ಮೇಲೆ ಓದಲಾದ (3) ರ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪುರ್ವ) ಇವರ ಪ್ರಸ್ತಾವನೆಯಲ್ಲಿ, ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ: 04-02-2008 ರ ಪೂರ್ವದಲ್ಲಿ ನೇಮಕಗೊಂಡು ಒಟ್ಟು 876 ಉಪನ್ಯಾಸಕರು ಅನುದಾನಕ್ಕೆ ಒಳಪಟ್ಟಿದ್ದು, ಸರ್ಕಾರದ ಪತ್ರ ಸಂಖ್ಯೆ: ಇಪಿ 37 ಡಿಜಿಡಿ 2021 ದಿನಾಂಕ: 22-10-2021 ರ ಪ್ರಕಾರ 450 ಉಪನ್ಯಾಸಕರು ಬಿ.ಇಡಿ ಪದವಿಯಿಂದ ವಿನಾಯ್ತಿ ಪಡೆದಿರುತ್ತಾರೆ. 62 ಉಪನ್ಯಾಸಕರ ಹುದ್ದೆಗಳು ನಿವೃತ್ತಿ/ ನಿಧನ/ರಾಜೀನಾಮ ಇತ್ಯಾದಿ ಕಾರಣಗಳಿಂದ ತೆರವಾಗಿರುತ್ತದೆ. ಬಾಕಿ 364 ಉಪನ್ಯಾಸಕರು ಬಿ.ಇಡಿ ಪದವಿಯನ್ನು ಪಡೆಯದೇ ಹಾಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬಿ.ಇಡಿ ಪದವಿಯನ್ನು ಹೊಂದಿಲ್ಲದ ಉಪನ್ಯಾಸಕರುಗಳು ಬಿ.ಇಡಿ ಪದವಿ ಹೊಂದಲು ಸೂಕ್ತ ಆದೇಶ ಹೊರಡಿಸಲು ಕೋರಿರುವುದನ್ನು ನಿಯಮಾನುಸಾರ ಪರಿಶೀಲಿಸಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಬಿ.ಇಡಿ ಪದವಿ ವ್ಯಾಸಂಗಕ್ಕೆ ವೇತನ ಸಹಿತವಾಗಿ ನಿಯೋಜನೆ ಮಾಡಲು ಹಾಗೂ ನಿಯೋಜನೆಯಿಂದ ತೆರವಾಗುವ ಹುದ್ದೆಗಳಿಗೆ ನೇಮಕಗೊಳಿಸಲಾಗುವ ಅಧಿತಿ ಉಪನ್ಯಾಸಕರುಗಳಿಗೆ ವೇತನವನ್ನು ನಿಯೋಜನೆಗೊಳ್ಳುವ ಉಪನ್ಯಾಸಕರ ವೇತನದಲ್ಲಿಯೇ ಭರಿಸುವ ಕುರಿತು ತೀರ್ಮಾನಿಸಲಾಗಿರುತ್ತದೆ. ಅದರಂತೆ ಈ ಕೆಳಕಂಡ ಆದೇಶ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ: 04-02-2008 ರ ನಂತರದಲ್ಲಿ ನೇಮಕಗೊಂಡು, ಅನುದಾನಕ್ಕೆ ಒಳಪಟ್ಟಿರುವ ಉಪನ್ಯಾಸಕರುಗಳ ಪೈಕಿ ಬಿ.ಇಡಿ ಪದವಿಯನ್ನು ಹೊಂದಿರದ 364 ಉಪನ್ಯಾಸಕರುಗಳಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ಬಿ.ಇಡಿ ಪದವಿ ವ್ಯಾಸಂಗಕ್ಕೆ ವೇತನ ಸಹಿತವಾಗಿ ನಿಯೋಜನೆ ಮಾಡಲು ಹಾಗೂ ನಿಯೋಜನೆಯಿಂದ ತೆರವಾಗುವ ಹುದ್ದೆಗಳಿಗೆ ನೇಮಕಗೊಳಿಸಲಾಗುವ ಅಥಿತಿ ಉಪನ್ಯಾಸಕರುಗಳಿಗೆ ವೇತನವನ್ನು ನಿಯೋಜನೆಗೊಳ್ಳುವ ಉಪನ್ಯಾಸಕರ ವೇತನದಲ್ಲಿಯೇ ಭರಿಸಲು ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಸರ್ಕಾರವು ಅನುಮತಿ ನೀಡಿ ಆದೇಶಿಸಿದ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 197 ವೆಚ್ಚ-8/2024 ದಿನಾಂಕ: 13-06-2025 ರ ಸಹಮತಿಯನ್ವಯ ಹೊರಡಿಸಲಾಗಿದೆ.
ಷರತ್ತುಗಳು
DPUE-1. ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರ ಪತ್ರ ಸಂಖ್ಯೆ: EST3/3/2023-PLCY(e-993359) D: 05-03-2025 ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರುಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳತಕ್ಕದ್ದು. 364
2. ಬಿ.ಇಡಿ ವ್ಯಾಸಂಗಕ್ಕೆ ನಿಯೋಜನಗೊಳಪಡುವ ಉಪನ್ಯಾಸಕರ ಕಾರ್ಯಭಾರದ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು, ಸದರಿ ನಿಯೋಜನೆಗೊಂಡ ಉಪನ್ಯಾಸಕರ ವೇತನದಲ್ಲಿಯೇ ಅತಿಥಿ ಉಪನ್ಯಾಸಕರ ವೇತನವನ್ನು ಭರಿಸತಕ್ಕದ್ದು. ಇದಕ್ಕೆ ನಿಯೋಜನೆ ಮೇಲೆ ತೆರಳುವ ಉಪನ್ಯಾಸಕರಿಂದ ಒಪ್ಪಿಗೆ / ಮುಚ್ಚಳಿಕೆ ಪತ್ರವನ್ನು ಪಡೆಯತಕ್ಕದ್ದು.
3. ಪ್ರಸ್ತಾಪಿತ ಬಿ.ಇಡಿ ವ್ಯಾಸಂಗಕ್ಕೆ ನಿಯೋಜನೆ ಮೇಲೆ ತೆರಳಲಿರುವ ಉಪನ್ಯಾಸಕರುಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಬಿ.ಇಡಿ ವ್ಯಾಸಂಗವನ್ನು ಪೂರೈಸತಕ್ಕದ್ದು. ಇಲಾಖೆಯಿಂದ ಸದರಿ ವ್ಯಾಸಂಗಕ್ಕೆ ತಗಲುವ ಶುಲ್ಕ ಹಾಗೂ ಇತರೆ ಯಾವುದೇ ವೆಚ್ಚವನ್ನು ಭರಿಸುವುದಿಲ್ಲ.
4. ಸದರಿ ಬಿ.ಇಡಿ ವ್ಯಾಸಂಗವನ್ನು ನಿಗಧಿತ 2 ವರ್ಷಗಳ ಅಥವಾ ಬಿ.ಇಡಿ ವ್ಯಾಸಂಗ ಪೂರ್ಣಗೊಳ್ಳುವ ಅವಧಿಯೊಳಗೆ ಯಾವುದೂ ಮೊದಲು ಅದರೊಳಗಾಗಿ ಪೂರ್ಣಗೊಳಿಸತಕ್ಕದ್ದು ಇಲ್ಲವಾದಲ್ಲಿ ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 78 ಟಿವಿಇ 2014 ದಿನಾಂಕ: 18-07-2017 ರನ್ನಯ ಸೇವೆಯಿಂದ ವಿಮುಕ್ತಿಗೊಳಿಸಲು ನಿಯಮಾನುಸಾರ ಕ್ರಮವಹಿಸಲಾಗುವುದು.