ಬೆಂಗಳೂರು: ನಗರದ ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಸರ್ಕಾರದ ವತಿಯಿಂದ ಒಂದು ಬಾರಿ ಪರಿಹಾರ(OTS) ಯೋಜನೆಯನ್ನು ಬಿಬಿಎಂಪಿಯಲ್ಲಿ ದಿನಾಂಕ:30-9-2024 ರವರೆಗೆ ವಿಸ್ತರಿಸಲಾಗಿದೆ.
ಈ ಕುರಿತಂತೆ ಬಿಬಿಎಂಪಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಒಂದು ಬಾರಿ ಪರಿಹಾರ ಯೋಜನೆಯನ್ನು ವಿಸ್ತರಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರಕ್ಕೆ ಬಿಬಿಎಂಪಿ ಕೃತಜ್ಞತೆ ಸಲ್ಲಿಸುತ್ತದೆ ಮತ್ತು ನಾಗರೀಕರ ಮನವಿಗಳ ಮೇರೆಗೆ ಒಂದು ಬಾರಿ ಪರಿಹಾರ ಯೋಜನೆಯನ್ನು ದಿನಾಂಕ:30-9-2024ರವರೆಗೆ ವಿಸ್ತರಿಸಲಾಗಿದೆ ಎಂದಿದೆ.
ಒಂದು ಬಾರಿ ಪರಿಹಾರ ಯೋಜನೆ & ಅದರ ಪ್ರಮುಖಾಂಶಗಳು:
* ಸಂಪೂರ್ಣ ಬಡ್ಡಿ ಮನ್ನಾ
* ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ.
* ವಸತಿ ಮತ್ತು ಮಿಶ್ರ ಬಳಕೆಯ ಆಸ್ತಿಗಳ ಆಸ್ತಿ ತೆರಿಗೆ ಬಾಕಿ ವಸೂಲಾತಿ ಪರಿಷ್ಕರಣೆ ಮತ್ತು ಮೌಲ್ಯಮಾಪನ ಮಾಡದ ಆಸ್ತಿಗಳಿಗೆ 5-ವರ್ಷಗಳಿಗೆ ಸೀಮಿತವಾಗಿರುತ್ತದೆ.
ಎಲ್ಲಾ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸುವ ಮೂಲಕ ಮುಖ್ಯಧಾರೆಗೆ ಸೇರಲು ಈ ಐತಿಹಾಸಿಕ ಕೊನೆಯ ಅವಕಾಶದ ಪ್ರಯೋಜನವನ್ನು ಪಡೆದುಕೊಳ್ಳಲು ಎಲ್ಲರಿಗೂ ವಿನಂತಿಸಲಾಗಿದೆ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
RBI ನಿಂದ ಮಹತ್ವದ ತೀರ್ಮಾನ: ಈಗ ನಿಮ್ಮ ಚೆಕ್ ಅನ್ನು ಶೀಘ್ರದಲ್ಲೇ ಬ್ಯಾಂಕಿನಿಂದ ಕ್ಲೀಯರ್…!
ಶುಭ ದಿನ, ಗಳಿಗೆ, ನಕ್ಷೆತ್ರ ನೋಡಿ ಕುಮಾರಸ್ವಾಮಿ ಸಹೋದರನ ಆಸ್ತಿ ದಾಖಲೆ ಬಿಡುಗಡೆ: ಡಿಸಿಎಂ ಡಿ.ಕೆ ಶಿವಕುಮಾರ್