ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ – ಖಾತಾ ʼಬೆಂಗಳೂರು ಒನ್ ಕೇಂದ್ರʼಗಳಲ್ಲೂ ಶೀಘ್ರವೇ ಲಭ್ಯವಾಗಲಿದೆ. ಇ – ಖಾತಾಗಳನ್ನು ಒದಗಿಸಲು ಪಾಲಿಕೆಯ ಪ್ರತಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ನಾಗರಿಕರು ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆ ಸಲ್ಲಿಸಿ ಇ – ಖಾತಾ ಪಡೆಯಬಹುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ – ಖಾತಾ ʼಬೆಂಗಳೂರು ಒನ್ ಕೇಂದ್ರʼಗಳಲ್ಲೂ ಶೀಘ್ರವೇ ಲಭ್ಯವಾಗಲಿದೆ. ಇ – ಖಾತಾಗಳನ್ನು ಒದಗಿಸಲು ಪಾಲಿಕೆಯ ಪ್ರತಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ನಾಗರಿಕರು ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆ ಸಲ್ಲಿಸಿ ಇ – ಖಾತಾ ಪಡೆಯಬಹುದು ಎಂದು ಬಿಬಿಎಂಪಿ… pic.twitter.com/kUmk1vptCw
— DIPR Karnataka (@KarnatakaVarthe) October 10, 2024
ಬಿಬಿಎಂಪಿ ಇಆಸ್ತಿ ವ್ಯವಸ್ಥೆಯಲ್ಲಿ ನಿಮ್ಮ ಡ್ರಾಫ್ಟ್ ಇ-ಖಾತಾ ಅನ್ನು ಆನ್ ಲೈನ್ ನಲ್ಲಿ ವೀಕ್ಷಿಸಲು ಹೀಗೆ ಮಾಡಿ
(1) ಎಲ್ಲಾ ಕರಡು ಇ-ಖಾತಾಗಳನ್ನು(ಸುಮಾರು 22 ಲಕ್ಷ) ವಾರ್ಡ್ ವಾರು BBMPeAasthi.karnataka.gov.in ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
(2) ನಿಮ್ಮ ಸ್ವತ್ತಿನ ಆಸ್ತಿ ತೆರಿಗೆಯ ರಶೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸಂಖ್ಯೆಯನ್ನು ನೀವು ತಿಳಿದುಕೊಳ್ಳಬಹುದು.
(3) ಆನ್‌ಲೈನ್‌ನಲ್ಲಿ ಒಮ್ಮೆ ನೀವು ನಿಮ್ಮ ವಾರ್ಡ್ ಗೆ ಭೇಟಿ ನೀಡಿದರೆ, ಆ ವಾರ್ಡ್ ನ ಎಲ್ಲಾ ಡ್ರಾಫ್ಟ್ ಇ-ಖಾತಾ ಪಟ್ಟಿಮಾಡಲಾಗಿದ್ದು, ಇದು ನಿಮಗೆ ಲಭ್ಯವಿರುತ್ತದೆ.
(4) ಮೊದಲಬಾರಿಗೆ ಡಿಜಿಟಲೀಕರಣಗೊಂಡಿರುವುದರಿಂದ ಇ-ಪ್ರಾಪರ್ಟಿ ಐಡಿಯನ್ನು ಈಗ ರಚಿಸಲಾಗಿದೆ. ಆದ್ದರಿಂದ ಮಾಲೀಕರ ಹೆಸರನ್ನು ಹೊರತುಪಡಿಸಿ, ಆಸ್ತಿಯನ್ನು ಹುಡುಕಲು ಬೇರೆ ಆಯ್ಕೆ ಇರುವುದಿಲ್ಲ.
(5) ಆದ್ದರಿಂದ “ಹೆಸರು ಹುಡುಕಾಟ”ವನ್ನು ನೀಡಲಾಗಿದ್ದು, ಆಸ್ತಿಗಳನ್ನು ವಾರ್ಡ್ ವಾರು ಪಟ್ಟಿಯಲ್ಲಿ ವರ್ಣಮಾಲೆಯಂತೆ ಪಟ್ಟಿ ಮಾಡಲಾಗಿದೆ(ಇಂಗ್ಲಿಷ್ ವರ್ಣಮಾಲೆಯಂತೆ).
ಬಿಬಿಎಂಪಿಯು ನಿರಂತರವಾಗಿ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಇ-ಖಾತಾ ನಾಗರೀಕರಿಗೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ತಲುಪಲು ಪ್ರಯತ್ನಿಸುತ್ತಿದೆ. ಯಾವುದೇ ಪಾಲಿಕೆ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ಭೇಟಿ ಮಾಡದೆಯೇ ಪ್ರಕ್ರಿಯೆಯನ್ನು ಎಲ್ಲರಿಗೂ ಸಾಧ್ಯವಾದಷ್ಟು ಸುಗಮಗೊಳಿಸಲಾಗುತ್ತಿದೆ.
ಗಮನಿಸಿ: ಪ್ರತಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಜೊತೆಗೆ ಶೀಘ್ರದಲ್ಲೇ ಇ-ಖಾತಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಲಭ್ಯವಿರುತ್ತದೆ.
BREAKING: ಕನ್ನಡ ಚಲನಚಿತ್ರ ನಿರ್ಮಾಪಕ, ಉದಯ ಟಿವಿ ಅಧ್ಯಕ್ಷ ಸೆಲ್ವಂ ಇನ್ನಿಲ್ಲ
BREAKING : ದಸರಾ ಹಬ್ಬಕ್ಕೂ ನಟ ದರ್ಶನ್ ಗೆ ಇಲ್ಲ ಬಿಡುಗಡೆ ಭಾಗ್ಯ : ಅ.14 ರಂದು ಆದೇಶ ಕಾಯ್ದಿರಿಸಿದ ಕೋರ್ಟ್!