ಬೆಂಗಳೂರು : ಖಾಸಗಿ ಅನುದಾನಿತ ಶಾಲೆಗಳಲ್ಲಿ ದಿನಾಂಕ: 01.04.2006 ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಖಾಸಗಿ ಅನುದಾನಿತ ಶಾಲೆಗಳಲ್ಲಿ ದಿನಾಂಕ: 01.04.2006 ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ಪರಿಶೀಲಿಸಲು ಲಗತ್ತಿಸಿರುವ ಅನುಬಂಧದಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ.
ಉಲ್ಲೇಖಿತ ಸರ್ಕಾರದ ಪತ್ರಗಳು ಮತ್ತು ಅದರೊಂದಿಗಿನ ಅನುಬಂಧವನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸುತ್ತಾ, ಸರ್ಕಾರದ ವತ್ರದಲ್ಲಿ ತಿಳಿಸಿರುವಂತೆ ದಿನಾಂಕ: 01.04.2006 ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ಶಿಕ್ಷಕರು / ಸಿಬ್ಬಂದಿಗಳ ನಿವೃತ್ತಿ ನಂತರ ನಿಗಧಿಪಡಿಸಬೇಕಾದ ಪಿಂಚಣಿ ಲೆಕ್ಕಾಚಾರ ಮಾಡಿ ಪ್ರಾಥಮಿಕ / ಪ್ರೌಢಶಾಲೆಗಳ ಮಾಹಿತಿಯನ್ನು ಪ್ರತ್ಯೇಕವಾಗಿ ಅನುಬಂಧದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದು ಜಿಲ್ಲಾವಾರು ಕ್ರೋಢೀಕರಿಸಿ ಹಾಗೂ ದೃಢೀಕರಿಸಿ ಈ ಕಛೇರಿಯ ಇ-ಮೇಲ್ ವಿಳಾಸ: giaest2@gmail.com ಗೆ ಕಳುಹಿಸಲು ತಿಳಿಸಿದೆ. ಮತ್ತು ಒಂದು ವೇಳೆ ಈ ಮಾಹಿತಿಯಲ್ಲಿ ಯಾವುದೇ ಶಿಕ್ಷಕರು / ಸಿಬ್ಬಂದಿಗಳ ಮಾಹಿತಿ ಬಿಟ್ಟು ಹೋಗಿದ್ದಲ್ಲಿ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರುಗಳೇ ನೇರ ಹೊಣೆಗಾರರೆಂದು ತಿಳಿಸಿದೆ.