ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿ ವಿವಿಧ ಶಿಕ್ಷೆಗಳಿಗೆ ಒಳಗಾಗಿ ಜೈಲುಪಾಲಾಗಿರುವಂತ 55 ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೆ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ 55 ಸನ್ನಡತೆ ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯದ ವಿವಿಧ ಜೈಲುಗಳಲ್ಲಿರುವ 55 ಕೈದಿಗಳನ್ನು ಬಿಡುಗಡೆಗೆ ಒಮ್ಮತದ ತೀರ್ಮಾನವನ್ನು ಕೈಗೊಂಡು ಅನುಮೋದಿಸಲಾಗಿದೆ.
‘ಕೋವಿಡ್ ಹಗರಣ’ದ ತನಿಖೆಗೆ ‘SIT ತಂಡ’ ರಚನೆ: ಸಚಿವ ಹೆಚ್.ಕೆ ಪಾಟೀಲ್
ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕೋವಿಡ್ ಸಂಬಂಧಿತ ಪ್ರಕರಣಗಳ ಸಂಪೂರ್ಣ ಆಯಾಮಗಳ ತನಿಖೆಗಾಗಿ ವಿಶೇಷ ಎಸ್ಐಟಿ ರಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ.
ಇಂದು ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು, ಇಂದು 25 ವಿಷಯಗಳನ್ನ ಪರಿಶೀಲಿಸಿದ್ದೇವೆ. ಎರಡುಮೂರು ಬಿಟ್ಟು ಉಳಿದವಕ್ಕೆ ಅನುಮತಿ ನೀಡಲಾಗಿದೆ ಎಂದರು.
ಎಲ್ಲಾ ಸಮಿತಿಗಳನ್ನ ನಿಷ್ಕ್ರಿಯಗೊಳಿಸಿತ್ತು. ಯಾರ ಗಮನಕ್ಕೂ ಬರದಂತೆ ಭ್ರಷ್ಟಾಚಾರ ಮಾಡಿತ್ತು. 200, 300 ಪಿಪಿಎ ಕಿಟ್ ಗೆ 2100 ಕೊಟ್ಟಿದೆ. ಲಕ್ಚಾಂತರ ಕಿಟ್ ಬೇರೆ ದೇಶದಿಂದ ತರಿಸಿದೆ. ಔಷಧಿಗಳನ್ನ ಎರಡು ಪಟ್ಟು ಹೆಚ್ಚು ದರದಲ್ಲಿ ಖರೀದಿ ಮಾಡಲಾಗಿದೆ. ಬ್ಲಾಕ್ ಲೀಸ್ಟ್ ನಲ್ಲಿದ್ದ ಕಂಪನಿಗಳಿಗೆ ಪೇಮೆಂಟ್ ಮಾಡಿದ್ದಾರೆ. ಪಿಎಸಿ ಸಭೆಗಳಲ್ಲಿ ಚರ್ಚೆಯಾದ್ರೂ ಕ್ರಮ ಜರುಗಿಸದಿರುವುದು. ಮಾನವಹಕ್ಕುಗಳಿಗೂ ದೂರುಗಳು ಹೋಗಿದ್ದವು. ಹೀಗಾಗಿ ಕುನ್ಹಾ ಕಮಿಟಿಯನ್ನ ರಚಿಸಿದ್ದೆವು ಎಂದರು.
ಕೋವಿಡ್ ಹಗಣರದ ಚರ್ಚೆ ವಿಚಾರವಾಗಿ ಮಾತನಾಡಿದಂತ ಅವರು, ಜಗತ್ತು ಕೊರೊನಾದಿಂದ ಅಲ್ಲೋಲ ಕಲ್ಲೋಲ ಆಗಿತ್ತು. ದೊಡ್ಡ ದುರಂತವನ್ನ ಜಗತ್ತು ಅನುಭವಿಸಿತ್ತು. ದೇಶ ನಮ್ಮ ರಾಜ್ಯವೂ ದುರಂತ ಅನುಭವಿಸ್ತು. ಆಗಿನ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದೆ. ಭ್ರಷ್ಟಾಚಾರ, ಬೇಜವಾಬ್ದಾರಿ, ಮೋಸ ಮಾಡಿದೆ. ಮಾಹಿತಿಗಳನ್ನಅದುಮಿಟ್ಟುಕೊಳ್ಳುವುದು. ಕಾನೂನುಗಳನ್ನ ಸಿಗದಂತೆ ಮಾಡುವುದು. ಎಲ್ಲವನ್ನು ಆಸಂದರ್ಭದಲ್ಲಿ ಮಾಡಿದ್ದಾರೆ ಎಂದರು.
50 ಸಾವಿರ ಕಡತಗಳನ್ನ ಕಮೀಷನ್ ಪರಿಶೀಲಿಸಿದೆ. ಮಧ್ಯಂತರ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೆ ಕ್ಯಾಬಿನೆಟ್ ಸಬ್ ಕಮಿಟಿ ಮಾಡಲಾಗಿತ್ತು. ಡಿಸಿಎಂ ಇದರ ಅಧ್ಯಕ್ಷರಾಗಿದ್ದರು. ನಾನು ಆಕಮಿಟಿಯ ಸದಸ್ಯನಾಗಿದ್ದೇನೆ. ಸಬ್ ಕಮಿಟಿಯ ಚರ್ಚೆಯ ವಿಷಯ ಇಂದು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯಾಗಿದೆ. ಅಲ್ಲಿ ಕಂಡು ಬಂದ ಭ್ರಷ್ಟಾಚಾರ ನಡುಕ ಹುಟ್ಟಿಸಿವೆ. ಸರ್ಕಾರ ನಡೆದುಕೊಂಡ ರೀತಿ, ಅಂದಿನ ಸಿಎಂ, ಸಚಿವರು, ಅಧಿಕಾರಿಗಳು ನಡೆದುಕೊಂಡ ರೀತಿ, ಎಲ್ಲವೂ ವರದಿಯಲ್ಲಿ ಬಹಿರಂಗವಾಗಿವೆ. ಹಾಗಾಗಿ ಎಸ್ ಐಟಿ ರಚನೆಗೆ ನಿರ್ಧಾರ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಕೋವಿಡ್ ತನಿಖೆಗೆ ಎಸ್ ಐಟಿ ರಚನೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲಾಗುತ್ತದೆ. ಐಜಿ ಲೆವೆಲ್ ಅಧಿಕಾರಿ ನೇತೃತ್ವದ ಇರಲಿದೆ ಎಂದರು.
ಪಿಪಿಎ ಕಿಟ್ ಸಿಂಗಾಪುರದಲ್ಲಿ ಖರೀದಿಸಿದ್ದು ಯಾಕೆ? ನಾವು ಅಲ್ಲಿಗೆ ಹೋಗಿ ಪರಿಶೀಲಿಸಬೇಕಿಲ್ಲ. ಇಲ್ಲಿ ಕುಳಿತೇ ಅದರ ಮಾಹಿತಿ ಪಡೆಯಬಹುದು. ಬೇಸಿಕ್ ಲೆವೆಲ್ ನಲ್ಲಿ ತನಿಖೆ ಅಗತ್ಯವಿದೆ. ಹಾಗಾಗಿ ಎಸ್ ಐಟಿ ರಚನೆಗೆ ಕೊಟ್ಟಿದ್ದೇವೆ ಎಂದರು.
ಡೆತ್ ಆಡಿಟ್ ನಲ್ಲೂ ತಪ್ಪು ಲೆಕ್ಕ ಕೊಟ್ಟಿದ್ದಾರೆ. ಪಬ್ಲಿಕ್ ಅಕೌಂಟ್ ಕಮಿಟಿ ಇದನ್ನ ಎತ್ತಿಹಿಡಿದಿತ್ತು. ಯಾವ ಅಧಿಕಾರಿ ಅನ್ನೋದು ಸಿಎಂ ಮಾಡ್ತಾರೆ. ಕ್ರಿಮಿನಲ್ ಕೇಸ್ ಕೂಡ ದಾಖಲಾಗಲಿದೆ. ಎಸ್ ಐಟಿ ತಂಡವೇ ಇದನ್ನ ಮಾಡಲಿದೆ. ಯಾರು ತಪ್ಪು ಮಾಡಿದ್ದಾರೆಂಬುದು ಇದೆ. ಅವರ ಮೇಲೆ ಎಫ್ ಐಆರ್ ದಾಖಲಾಗಲಿದೆ. ರಿಪೋರ್ಟ್ ಆಧಾರದ ಮೇಲೆ ಎಫ್ ಐಆರ್ ದಾಖಲಾಗಲಿದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಕೋವಿಡ್ ಹಗರಣದ ತನಿಖೆಗೆ SIT ರಚನೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕೋವಿಡ್ ಕಿಟ್, ಔಷಧಿ ಖರೀದಿಯ ವೇಳೆಯಲ್ಲಿ ನಡೆದಿದೆ ಎನ್ನಲಾದಂತ ಹಗರಣಗಳ ಬಗ್ಗೆ ಈ ತಂಡವು ತನಿಖೆ ನಡೆಸಲಿದೆ.
ವರದಿ: ವಸಂತ ಬಿ ಈಶ್ವರಗೆರೆ
BIG NEWS: ನವೆಂಬರ್.20ರಂದು ರಾಜ್ಯಾಧ್ಯಂತ ‘ಎಣ್ಣೆ ಸಿಗಲ್ಲ’: ಅಬಕಾರಿ ಇಲಾಖೆ ಭ್ರಷ್ಟಾಚಾರ ಖಂಡಿಸಿ ‘ಬಾರ್ ಬಂದ್’
ಶಾಸಕರನ್ನು ಖರೀದಿಸೋಕೇ ಅವರೇನು ಕುದುರೆಯೊ, ಕತ್ತೆಯೋ, ಅಥವಾ ದನಾನೋ? : MLC ಸಿಟಿ ರವಿ ಕಿಡಿ