ಬೆಂಗಳೂರು: ‘ಗೃಹ ಜ್ಯೋತಿ’ ಯೋಜನೆಯಡಿ ತಿಂಗಳಿಗೆ 48 ಯೂನಿಟ್‌ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಎಲ್‌ಟಿ 2 ಗ್ರಾಹಕರಿಗೆ ಹೆಚ್ಚುವರಿ ಶೇ 10 ಬದಲು ಹೆಚ್ಚುವರಿ 10 ಯೂನಿಟ್‌ಗಳನ್ನು ಅರ್ಹತಾ ಯೂನಿಟ್‌ಗಳನ್ನಾಗಿ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಆದೇಶವನ್ನು ಅಧೀಕೃಥವಾಗಿ ಹೊರಡಿಸಿದೆ.
ಆದೇಶದಲ್ಲಿ ಉಲೇಖ ಮಾಡಿರುವಂತೆ ಪ್ರಸ್ತುತ, ಸರ್ಕಾರದ ಆದೇಶ ಸಂಖ್ಯೆ: ಎನರ್ಜಿ/164/ಪಿಎಸ್ಆರ್/2023 ದಿನಾಂಕ: 05.06.2023 ರಲ್ಲಿ ಈ ಯೋಜನೆಯಡಿಯ ಫಲಾನುಭವಿ ಗ್ರಾಹಕರಿಗೆ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ ಉಚಿತ ವಿದ್ಯುತ್ ಸೌಕರ್ಯ ಒದಗಿಸಲಾಗುತ್ತಿದೆ.
ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 22.11.2023 ರಂದು ನಡೆದ "ಗೃಹ ಜ್ಯೋತಿ" ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ರಾಜ್ಯದ ಗೃಹ ಬಳಕೆದಾರರಲ್ಲಿ ಸುಮಾರು 69.73 ಲಕ್ಷ ಕುಟುಂಬಗಳು ಪ್ರತಿ ಮಾಹೆ 48 ಯುನಿಟ್‌ಗಳಿಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು, ಸುಮಾರು 30 ಯೂನಿಟ್‌ಗಳನ್ನು ಬಳಸುವ ಬಡ ಕುಟುಂಬಗಳಿಗೆ ಅರ್ಹತಾ ಯೂನಿಟ್‌ಗಳು ಕೇವಲ 33 ಯೂನಿಟ್‌ಗಳಾಗಿರುತ್ತದೆ (30 + ಶೇ.10) ಆದ್ದರಿಂದ, ರಾಜ್ಯದ ಸರಾಸರಿ ಬಳಕೆಗಿಂತ ಕಡಿಮೆ ಬಳಸುವ ಕುಟುಂಬಗಳಿಗೆ ಹೆಚ್ಚುವರಿಯಾಗಿ ಶೇ.10 ರ ಬದಲಾಗಿ ಹೆಚ್ಚುವರಿ 10 ಯೂನಿಟ್‌ಗಳನ್ನು ಅನುಮತಿಸಬೇಕೆಂದು ಅಭಿಪ್ರಾಯಿಸಿರುತ್ತಾರೆ. ಇದರಿಂದಾಗಿ, ವಾಸ್ತವವಾಗಿ ಅಗತ್ಯವಿರುವ ಕುಟುಂಬಗಳು ಪ್ರಯೋಜನಗಳನ್ನು ಪಡೆಯಲು ಮತ್ತು ಅವರ ಜೀವನ ಮಟ್ಟವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿ, ದಿನಾಂಕ: 18.01.2024 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಕರಣ ಸಂಖ್ಯೆ: ಸಿ.36/2024 ರಲ್ಲಿ "ಗೃಹ ಜ್ಯೋತಿ" ಯೋಜನೆಯಡಿಯಲ್ಲಿ LT-2 ಪ್ರವರ್ಗದ ಗ್ರಾಹಕರಲ್ಲಿ ಮಾಸಿಕ 48 ಯೂನಿಟ್‌ಗಳಿಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಹೆಚ್ಚುವರಿ ಶೇ.10 ರ ಬದಲಾಗಿ ಹೆಚ್ಚುವರಿ 10 ಯೂನಿಟ್ ಅರ್ಹತಾ ಯೂನಿಟ್‌ಗಳನ್ನು ಒದಗಿಸಲು ಅನುಮೋದಿಸಿದೆ. ಆದ್ದರಿಂದ ಈ ಕೆಳಕಂಡ ಆದೇಶ. ಸರ್ಕಾರಿ ಆದೇಶ ಸಂಖ್ಯೆ: ಎನರ್ಜಿ/164/ಪಿಎಸ್ಆರ್/2023 ದಿನಾಂಕ: 29.01.2024, ಬೆಂಗಳೂರು ಗೃಹ ಜ್ಯೋತಿ& ಯೋಜನೆಯಡಿಯಲ್ಲಿನ LT-2 ಪ್ರವರ್ಗದ ಗ್ರಾಹಕರಲ್ಲಿ ಮಾಸಿಕ 48 ಯೂನಿಟ್‌ಗಳಿಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಹೆಚ್ಚುವರಿ ಶೇ.10 ರಷ್ಟು ಬದಲಾಗಿ ಹೆಚ್ಚುವರಿ 10 ಯೂನಿಟ್ ಅರ್ಹತಾ ಯೂನಿಟ್‌ಗಳನ್ನು ಉಚಿತವಾಗಿ ನೀಡುವುದು ಅಂತ ತಿಳಿಸಿದೆ.