ಬೆಂಗಳೂರು: ರಾಜ್ಯ ಸರ್ಕಾರದಿಂದ ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್ ಎನ್ನುವಂತೆ ವಿದ್ಯುತ್ ದರವನ್ನು ಇಳಿಕೆ ಮಾಡಲಾಗಿದೆ. ಈ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ಅಧಿಕೃತ ವಿದ್ಯುತ್ ದರ ಇಳಿಕೆಯ ಅಧಿಕೃತ ಪರಿಷ್ಕರಣೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಇಂದು ವಿದ್ಯುತ್ ಪರಿಷ್ಕರಣೆಯ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕ.ವಿ.ನಿ.ಆ)ವು ಆರ್ಥಿಕ ವರ್ಷ 2024-25ನೇ ಸಾಲಿಗೆ ಎಲ್ಲಾ ವಿತರಣಾ ಪರವಾನಿಗೆದಾರರ ವ್ಯಾಪ್ತಿಯ ಗ್ರಾಹಕರಿಗೆ ಅನ್ವಯವಾಗುವಂತೆ ವಿದ್ಯುಚ್ಛಕ್ತಿ ದರಗಳ ಪರಿಷ್ಕರಣೆಯನ್ನು ಅನುಮೋದಿಸಿದೆ ಎಂದಿದೆ.
ದರ ಆದೇಶದ ಪ್ರಮುಖ ಅಂಶಗಳು
* ಆರ್ಥಿಕ ವರ್ಷ 2024-25ರಲ್ಲಿ ಅಲ್ಪ ಪ್ರಮಾಣದ ಹೆಚ್ಚಳವನ್ನು ಎಲ್ಲಾ ಪವರ್ಗಗಳ ಗ್ರಾಹಕರಿಗೆ ದರ ಮರುಹೊಂದಾಣಿಕೆ ಮಾಡಲು ಉಪಯೋಗಿಸಲಾಗಿದೆ.
* ವಾಣಿಜ್ಯ, ಕೈಗಾರಿಕಾ ಮತ್ತು ಗೃಹ ಬಳಕೆ ಗ್ರಾಹಕರ ವಿದ್ಯುತ್ ದರದಲ್ಲಿ ಗಣನೀಯ ಇಳಿಕೆ. (ಪ್ರತಿ ತಿಂಗಳು 100 ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಗೆ)
* ಎಲ್.ಟಿ. ಗೃಹ ಬಳಕೆ ವಿದ್ಯುತ್ ದೀಪ: 100 ಯೂನಿಟ್ ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‌ಗೆ 110 ಪೈಸೆ ಇಳಿಕೆ.
* ಹೆಚ್.ಟಿ ವಾಣಿಜ್ಯ: ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 125 ಪ್ರೊಸೆ ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ. 10/- ಇಳಿಕೆ.
* ಹೆಚ್.ಟಿ ಕೈಗಾರಿಕೆ: ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 50 ಪೈಸೆ ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ. 10/- ಇಳಿಕೆ.
* ಹೆಚ್.ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು: ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 40 ಪೈಸೆ; ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ. 10/- ಇಳಿಕೆ.
* ಹೆಚ್.ಟಿ ಖಾಸಗಿ ಏತ ನೀರಾವರಿ: ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 200 ಪೈಸೆ ಇಳಿಕೆ.
* ಹೆಚ್.ಟಿ ನಿವಾಸ ಅಪಾರ್ಟ್‌ಮೆಂಟ್ ಗಳು: ಇಂಧನ ಬಳಕೆ ಶುಲ್ಕ ಪ್ರತಿ ಕೆವಿಎಗೆ ಡಿಮಾಂಡ್ ಶುಲ್ಕವನ್ನು ರೂ 10ರಷ್ಟು ಇಳಿಕೆ ಮಾಡಲಾಗಿದೆ.
* ಎಲ್.ಟಿ. ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು: ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ.
* ಎಲ್.ಟಿ. ಕೈಗಾರಿಕಾ ಸ್ಮಾವರಗಳು: ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 100 ಪೈಸೆ ಇಳಿಕೆ.
* ಎಲ್.ಟಿ. ವಾಣಿಜ್ಯ ಸ್ಥಾವರಗಳು: ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ.
* ಈಗ ಚಾಲ್ತಿಯಲ್ಲಿರುವ ಸಂಜೆ 6.00 ರಿಂದ 10.00 ರವರೆಗಿನ ಗರಿಷ್ಠ ಬೇಡಿಕೆಗೆ ಸಮಯಾಧಿರಿತ ದರ (ಟಿ.ಒ.ಡಿ)ವನ್ನು ಬೆಳಿಗ್ಗೆ 6 ರಿಂದ 9 ಗಂಟೆಯವರೆಗಿನ ಗರಿಷ್ಠ ಬೇಡಿಕೆಗೆ ಸಹಾ ಪ್ರಾರಂಭಿಸಲಾಗಿದೆ.
* ಪ್ರೋತ್ಸಾಹಕ ದರವನ್ನು ಪ್ರತಿ ಯೂನಿಟ್‌ಗೆ ರೂ.2ರಿಂದ,ಪ್ರತಿ ಯೂನಿಟ್‌ಗೆ ರೂ.1ಕ್ಕೆ ಇಳಿಸಿ ವಿಶೇಷ ಪ್ರೋತ್ಸಾಹ ಯೋಜನೆ (ಎಸ್.ಐ.ಎಸ್)ಅನ್ನು ಆರ್ಥಿಕ ವರ್ಷ 25ಕ್ಕೆ ಮುಂದುವರೆಸಿದೆ. ಆರ್ಥಿಕ ವರ್ಷ 26ರಿಂದ ಸದರಿ ಯೋಜನೆಯು ಮುಂದುವರೆಯುವುದಿಲ್ಲ.
* ಕ್ರಾಸ್ ಸಬ್ಸಿಡಿ ಶುಲ್ಕಗಳನ್ನು ಕಡಿಮೆಮಾಡಲಾಗಿದೆ.
* ಮಾಪಕವನ್ನು ಸ್ವಯಂ ಓದುವುದನ್ನು ಎಲ್ಲಾ ಎಲ್.ಟಿ. ಸ್ಥಾವರಗಳಿಗೆ ಐಚ್ಛಿಕವಾಗಿ ಪರಿಚಯಿಸಲಾಗಿದೆ.
* ಇಂಧನ ಬಳಕೆ ಶುಲ್ಕಗಳಿಗೆ ಒಂದೇ ಸ್ಲಾಬ್ (ಹಂತ) ಪರಿಚಯಿಸಿರುವುದರಿಂದ, ಎಲ್.ಟಿ. ಗ್ರಾಹಕರು ತಮ್ಮ ಆವರಣದಲ್ಲಿ ಒಂದಕ್ಕಿಂತ ಹೆಚ್ಚಿನ ಸ್ಥಾವರಗಳಿಗೆ ವಿದ್ಯುಚ್ಛಕ್ತಿ ಪಡೆಯಬಹುದು.
ವಿ.ಸ.ಕಂ ಗಳ ಪರಿಷ್ಕೃತ ದರಗಳ ಪ್ರಮುಖ ಅಂಶಗಳು
ಆರ್ಥಿಕ ವರ್ಷ 25ರ ವಾರ್ಷಿಕ ಕಂದಾಯ ಅಗತ್ಯತೆಯ ಅನುಮೋದನೆಗಾಗಿ ವಿ.ಸ.ಕಂಗಳ ಪ್ರಸ್ತಾವನೆ:
• ಆರ್ಥಿಕ ವರ್ಷ 2024-25 ಕ್ಕೆ ವಿ.ಸ.ಕಂ ಗಳು ಒಟ್ಟು ಮೊತ್ತ ರೂ. 69,474.75 ಕೋಟಿಗಳ ವಾರ್ಷಿಕ ಕಂದಾಯ ಅಗತ್ಯತೆ (ARR) ಯನ್ನು ಅನುಮೋದಿಸುವಂತೆ ಕೋರಿರುತ್ತವೆ. ಸದರಿ ಮೊತ್ತವು ರೂ. 4,863.85 ಕೋಟಿಗಳ ಕಂದಾಯದಲ್ಲಿನ ಕೊರತೆಯನ್ನು ಒಳಗೊಂಡಿರುತ್ತದೆ. ವಿ.ಸ.ಕಂ ಗಳು ಒಟ್ಟು, ಕಂದಾಯ ಕೊರತೆಯನ್ನು ಸರಿದೂಗಿಸಲು ಪ್ರತಿ ಯೂನಿಟ್‌ಗೆ ಸರಾಸರಿ 66 ಪೈಸೆಗಳಷ್ಟು (ಪ್ರತಿ ಯೂನಿಟ್ ಗೆ 49 ರಿಂದ 163 ಪೈಸೆಗಳವರೆಗೆ) ಹೆಚ್ಚಿಸುವಂತೆ ಕೋರಿರುತ್ತವೆ. ಸದರಿ ಕೊರತೆಯು ವಾರ್ಷಿಕ ಕಾರ್ಯನಿರ್ವಹಣೆ ಪುನರ್ಮನನ (APR)ದ ಅನುಸಾರ ಆರ್ಥಿಕ ವರ್ಷ 2022-23 ರಲ್ಲಿ ಉಂಟಾಗಿರುವ ಕಂದಾಯದ ಕೊರತೆ ಮೊತ್ತ ರೂ. 723.06 ಕೋಟಿಗಳನ್ನು ಒಳಗೊಂಡಿರುತ್ತದೆ.
ವಿ.ಸ.ಕಂ ಗಳು ಶೇಕಡಾ 7.53 ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವಿಸಿರುತ್ತವೆ.
ಆವ 25ರ ವಾರ್ಷಿಕ ಕಂದಾಯ ಅಗತ್ಯತೆಗೆ ಆಯೋಗದ ಅನುಮೋದನೆ:
ವಿ.ಸ.ಕಂ ಗಳು ತಮ್ಮ ದರ ಪರಿಷ್ಕರಣೆ ಅರ್ಜಿಯಲ್ಲಿ ಒಟ್ಟು ಮೊತ್ತ ರೂ. 69,474,75 ಕೋಟಿಗಳಿಗೆ ಅನುಮೋದಿಸುವಂತೆ ಕೋರಿರುವುದಕ್ಕೆ ಪ್ರತಿಯಾಗಿ ಆಯೋಗವು, ಸದರಿ ಅರ್ಜಿಗಳ ಪರಿಶೀಲನೆಯ ನಂತರ ಒಟ್ಟು ವಾರ್ಷಿಕ ಕಂದಾಯ ಅಗತ್ಯತೆ (ARR) ಮೊತ್ತ ರೂ. 64,944.54 ಕೋಟಿಗಳನ್ನು ಅನುಮೋದಿಸಿರುತ್ತದೆ.
• ಆರ್ಥಿಕ ವರ್ಷ 2024-25 ಕ್ಕೆ ಆಯೋಗವು ನಿವ್ವಳ ಕಂದಾಯ ಹೆಚ್ಚಳ ರೂ. 290.76 ಕೋಟಿ ಗಳನ್ನು ಅನುಮೋದಿಸಿರುತ್ತದೆ. ಸದರಿ ಮೊತ್ತವು ಆರ್ಥಿಕ ವರ್ಷ 2022-23ರ ವಾರ್ಷಿಕ ಕಾರ್ಯನಿರ್ವಹಣಾ ಪುನರ್ಮನನ (APR) (ಟೂಯಿಂಗ್ ಅಪ್) ಪುಕಾರ ಕಂದಾಯಲ್ಲಿನ ಹೆಚ್ಚಳ ಮೊತ್ತ ರೂ. 565.39 ಕೋಟಿಗಳನ್ನು ಒಳಗೊಂಡಿದೆ.
ಆರ್ಥಿಕ ವರ್ಷ 250 ಒಟ್ಟಾರೆ ಹೆಚ್ಚಳವನ್ನು ಆರ್ಥಿಕ ವರ್ಷ 250 ಮರುಹೊಂದಾಣಿಕೆ/ತರ್ಕಬದ್ಧಗೊಳಿಸುವಿಕೆಗೆ ಉಪಯೋಗಿಸಲಾಗಿದೆ.
ಅನುಮೋದಿಸಲಾದ ಇತರೆ ಕ್ರಮಗಳು:
* ವಿದ್ಯುತ್ ಸರಬರಾಜು ಕಂಪನಿಗಳು ಭರಿಸುವ ನಿಗದಿತ ವೆಚ್ಚಗಳನ್ನು ತಕ್ಕದಾಗಿ ವಸೂಲಾತಿ ಮಾಡಲು, ಆಯೋಗವು ಹೆಚ್.ಟಿ ಗ್ರಾಹಕರ ಬಿಲ್ಲಿಂಗ್ ಡಿಮಾಂಡ್ / ಕೆಲವು ಎಲ್.ಟಿ ಗ್ರಾಹಕರ ನಿಗದಿತ ಶುಲ್ಕಗಳ ಅಲ್ಪಪ್ರಮಾಣದ ಹೆಚ್ಚಳವನ್ನು ಪರಿಗಣಿಸಿದೆ ಹಾಗೂ ಸದರಿ ಪವರ್ಗಗಳಿಗೆ ಇಂಧನ ಬಳಕೆ ಶುಲ್ಕಗಳನ್ನು ಕಡಿಮೆಮಾಡಿದೆ.
• ಎಲೆಕ್ನಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ಇವಿ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಪ್ರತಿ ಯೂನಿಟ್‌ಗೆ ರೂ.4.50 ರಂತೆ ಇಳಿಕೆಯಾಗಿದ್ದ ವಿದ್ಯುತ್ ಬಳಕೆ ಶುಲ್ಕವನ್ನು ಮುಂದುವರೆಸಲಾಗಿದೆ.
* ರಾಜ್ಯದಲ್ಲಿ ದತ್ತಾಂಶ ಕೇಂದ್ರಗಳ ಸ್ಥಾಪನೆ (ಡೇಟಾ ಸೆಂಟರ್) ಯನ್ನು ಉತ್ತೇಜಿಸಲು, ಕೈಗಾರಿಕಾ ದರವನ್ನು ದತ್ತಾಂಶ ಕೇಂದ್ರಗಳಿಗೆ ಮುಂದುವರೆಸಲಾಗಿದೆ.
ಎಲ್.ಟಿ ಕೈಗಾರಿಕೆಗಳಿಗೆ ದರ ಇಳಿಕೆಯಾಗಿರುವುದರಿಂದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 50 ರಿಯಾಯಿತಿಯನ್ನು ಮುಂದುವರಿಸಿರುವುದಿಲ್ಲ.
ಈ ಹಿಂದಿನ ಆದೇಶದಲ್ಲಿ ನಗರ ಮತ್ತು ಗ್ರಾಮೀಣ ಪವರ್ಗಗಳನ್ನು ಒಂದೇ ಪವರ್ಗಕ್ಕೆ ವಿಲೀನಗೊಳಿಸಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್.ಟಿ.ವಾಣಿಜ್ಯ, ಎಲ್.ಟಿ. ಕೈಗಾರಿಕೆ,ಎಲ್.ಟಿ. ಖಾಸಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಪ್ರತಿ ಯೂನಿಟ್‌ಗೆ 30 ಪೈಸೆ ರಿಯಾಯಿತಿಯನ್ನು ಅನುಮತಿಸಲಾಗಿದೆ.
* ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಖರೀದಿ ಮತ್ತು ಬಳಕೆಯನ್ನು ಉತ್ತೇಜಿಸಲು, ಹೆಚ್.ಟಿ ಕೈಗಾರಿಕೆಗಳು ಮತ್ತು ಹೆಚ್.ಟಿ ವಾಣಿಜ್ಯ ಗ್ರಾಹಕರಿಗೆ ಅವರ ಆಯ್ಕೆಯಂತೆ,ಅನ್ವಯವಾಗುವ ವಿದ್ಯುತ್ ದರಕ್ಕಿಂತ ಪತಿ ಯೂನಿಟ್‌ಗೆ 50 ಪೈಸೆಯಷ್ಟು ಹೆಚ್ಚಿನ ಹಸಿರು ದರವನ್ನು ಮುಂದುವರಿಸಲಾಗಿದೆ.
* ಬಿ.ಎಂ.ಆರ್.ಸಿ.ಎಲ್ ಮತ್ತು ರೈಲ್ವೆ ಟ್ರ್ಯಾಕ್ಷನ್‌ಗಳಿಗೆ ರಿಯಾಯಿತಿ ದರವನ್ನು ಮುಂದುವರೆಸಲಾಗಿದೆ.
*ದರದ ತರ್ಕಬದ್ದತೆಯ ಭಾಗವಾಗಿ ಎಲ್ಲಾ ಗ್ರಾಹಕ ಪ್ರವರ್ಗಗಳಿಗೆ ಒಂದೇ ಸ್ನಾಬ್‌ನ್ನು ಪರಿಚಯಿಸಲಾಗಿದೆ.
* ಪರಿಷ್ಕೃತ ದರಗಳು 2024 ಏಪ್ರಿಲ್ ಒಂದನೇ ತಾರೀಖಿನಿಂದ ಜಾರಿಗೆ ಬರುತ್ತವೆ.
ಪಾಕಿಸ್ತಾನ ಪರ ಘೋಷಣೆ ಆರೋಪ : ತುಮಕೂರಲ್ಲಿ ‘ಬಿಜೆಪಿ ಕಾರ್ಯಕರ್ತರ’ ಪ್ರತಿಭಟನೆ ವೇಳೆ ‘Dysp’ ಮೇಲೆ ಹಲ್ಲೆ
ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹರಾಡೂನ್: 8ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ