ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿಮೆ ಮೊತ್ತ 20 ರಿಂದ 50 ಲಕ್ಷಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಮೇಲೆ ಓದಲಾದ (1)ರ ಆದೇಶದಲ್ಲಿ ಫಾಲೋಯರ್ ಹುದ್ದೆಯಿಂದ ಪೊಲೀಸ್ ಇನ್ಸ್ ಪೆಕ್ಟರ್ ಹುದ್ದೆಯವರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 92,841 ಅಧಿಕಾರಿ/ಸಿಬ್ಬಂದಿ (ಫಾಲೋಯರ್, ಪಿ.ಸಿ. ಹೆಚ್.ಸಿ, ಎ.ಎಸ್.ಐ. ಪಿ.ಎಸ್.ಐ ಮತ್ತು ಪಿ.ಐ)ಗಳಿಗೆ ಕರ್ತವ್ಯದ ಮೇಲಿರುವಾಗ 24X7 ಆಕಸ್ಮಿಕವಾಗಿ/ಅಪಘಾತಕ್ಕೆ ಒಳಗಾಗಿ ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ ರೂ.20.00 ಲಕ್ಷಗಳ ವಿಮೆ ಪಾವತಿಸುವ ಸಂಬಂಧ ಮೆ: ಯುನೈಟೆಡ್ ಇಂಡಿಯಾ ಇನ್‌ಶೂರೆನ್ಸ್ ಕಂಪನಿ, ಲಿಮಿಟೆಡ್, ಬೆಂಗಳೂರು ರವರಿಗೆ ಪ್ರೀಮಿಯಂ ಮೊತ್ತ ರೂ.8,21,64,285/-ಗಳನ್ನು (ಜಿ.ಎಸ್.ಟಿ) ಸೇವಾ ತೆರಿಗೆ ಸೇರಿ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ.
ಮೇಲೆ ಓದಲಾದ (2)ರ ಪತ್ರಗಳಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮಾನ್ಯ ಮುಖ್ಯಮಂತ್ರಿಗಳು ದಿನಾಂಕ: 21-10-2023ರಂದು ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಕರ್ತವ್ಯದ ಮೇಲಿದ್ದಾಗ ಹುತಾತ್ಮರಾಗುವ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು ರೂ.20.00 ಲಕ್ಷಗಳಿಂದ ರೂ.50.00 ಲಕ್ಷಗಳಿಗೆ ಏರಿಕೆ ಮಾಡಲಾಗುವುದೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಫಾಲೋಯರ್ ಹುದ್ದೆಯಿಂದ ಪೊಲೀಸ್ ಇನ್ಸ್ ಪೆಕ್ಟರ್ ಹುದ್ದೆಯವರೆಗೆ ಒಟ್ಟು 92.841 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದಿನಾಂಕ: 01-02-2024 ರಿಂದ 10-10-2024ರವರೆಗಿನ ಬಾಕಿ ಅವಧಿಗೆ (ಒಟ್ಟು 253 ದಿನಗಳು) ಪ್ರಸ್ತುತ ನೀಡುತ್ತಿರುವ ರೂ.20.00 ಲಕ್ಷಗಳ ಜೊತೆಗೆ ಹೆಚ್ಚುವರಿಯಾಗಿ ರೂ.30.00 ಲಕ್ಷಗಳನ್ನು ಸೇರಿ ಒಟ್ಟು . 2.50.00 ಲಕ್ಷಗಳನ್ನು ಪಾವತಿಸಲು ವಿಮಾ ಕಂಪನಿಯವರು ಈಗಾಗಲೇ ನೀಡಿರುವ ದರದಂತೆ ಪ್ರತಿ ಅಧಿಕಾರಿ/ಸಿಬ್ಬಂದಿಯವರಿಗೆ ನೀಡಿರುವ ವಾರ್ಷಿಕ ಪ್ರೀಮಿಯಂ ಮೊತ್ತ (ರೂ.777.722+ 18% ಜಿ.ಎಸ್.ಟಿ ಮೊತ್ತ ರೂ.139.98 ಸೇರಿ ಒಟ್ಟು ರೂ.917.702/-) ರೂ.8,52,00,371/-ಗಳಾಗುತ್ತದೆಂದು ತಿಳಿಸಿರುತ್ತಾರೆ.
ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪಾಧೀಕ್ಷಕರು (ಡಿ.ವೈ.ಎಸ್.ಪಿ) ಹುದ್ದೆಯಿಂದ ಡಿ.ಜಿ ಮತ್ತು ಐ.ಜಿ.ಪಿ ಹುದ್ದೆಯವರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಒಟ್ಟು ಸಂಖ್ಯೆ 608 ಇದ್ದು, ಸದರಿ ಅಧಿಕಾರಿಗಳಿಗೆ ವಿಶೇಷ ಗುಂಪು ವಿಮಾ ಯೋಜನೆಯನ್ನು ಜಾರಿಗೊಳಿಸಲು ವಿಮಾ ಕಂಪನಿಯವರು ಈಗಾಗಲೇ ನೀಡಿರುವ ದರದಂತೆ ವಿಶೇಷ ಗುಂಪು ವಿಮಾ ಮೊತ್ತ ರೂ.50.00 ಲಕ್ಷಗಳಿಗೆ ದಿನಾಂಕ: 01-02-2024 ರಿಂದ 10-10-2024ರವರೆಗಿನ (ಒಟ್ಟು 253 ದಿನಗಳು) ಅವಧಿಗೆ ಪ್ರತಿ ಅಧಿಕಾರಿಯವರಿಗೆ ವಾರ್ಷಿಕ ಪ್ರೀಮಿಯಂ ಮೊತ್ತ (ರೂ.1290.996 + 18% ಜಿ.ಎಸ್.ಟಿ ಮೊತ್ತ ರೂ. 232 379 ಸೇರಿ ಒಟ್ಟು ರೂ.1523.38/-) ರೂ.9.26,212/-ಗಳಾಗುತ್ತದೆಂದು ತಿಳಿಸಿರುತ್ತಾರೆ.
ಆದ್ದರಿಂದ, ಪೊಲೀಸ್ ಇಲಾಖೆಯ ಒಟ್ಟು 93,449 ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಮೇಲಿರುವಾಗ ಆಕಸ್ಮಿಕ/ಅಪಘಾತಕ್ಕೆ ಒಳಗಾಗಿ ಮೃತಪಟ್ನಲ್ಲಿ ಇವರುಗಳ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ๑.50.00 2: 01-02-2024 0໐໖ 10-10-20240 ಗುಂಪು ವಿಮಾ ಯೋಜನೆಯನ್ನು ಒದಗಿಸಲು, ಅಂದಾಜು ಮೊತ್ತ (ರೂ.8,52.00,371 + 9,26,212) ರೂ.8,61,26,583/-ಗಳಿಗೆ ಸರ್ಕಾರದ ಆದೇಶವನ್ನು ಹೊರಡಿಸುವಂತೆ ಹಾಗೂ ಲೆಕ್ಕ ಶೀರ್ಷಿಕೆ 2055-00-102-1-01- 051-ಸಾಮಾನ್ಯ ವೆಚ್ಚಗಳಡಿಯಲ್ಲಿ ಅನುದಾನವನ್ನು ಭರಿಸಲು ಅನುದಾನವನ್ನು ಸಹ ಬಿಡುಗಡೆಗೊಳಿಸುವಂತೆ ಕೋರಿರುತ್ತಾರೆ.
ಮಹಾ ನಿರ್ದೇಶಕರು ಮತ್ತು ಅರಕ್ಷಕ ಮಹಾ ನಿರೀಕ್ಷಕರು ಇವರ ಪುಸ್ತಾವನೆಯನ್ನು ಪರಿಶೀಲಿಸಿ, ಈ ಕಳಕಂಡಂತೆ ಆದೇಶಿಸಿದ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯ ಫಾಲೋಯರ್ ಹುದ್ದೆಯಿಂದ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಹುದ್ದೆಯವರೆಗೆ ಒಟ್ಟು ಸಂಖ್ಯಾ ಬಲ 93,449 ಅಧಿಕಾರಿ/ಸಿಬ್ಬಂದಿಗಳಿಗೆ ವಿಶೇಷ ಗುಂಪು ವಿಮಾ ಮೊತ್ತವನ್ನು ರೂ.20.00 ಲಕ್ಷಗಳಿಂದ ರೂ.50.00 ಲಕ್ಷಗಳಿಗೆ ಪ್ರಸಕ್ತ ಚಾಲ್ತಿಯಲ್ಲಿರುವ ವಿಮಾ ಅವಧಿ ಮುಕ್ತಾಯದ ನಂತರದ ದಿನಾಂಕದಿಂದ ಜಾರಿಗೆ ಬರುವಂತೆ ಹೆಚ್ಚಿಸಿ ಆದೇಶಿಸಿದೆ.
ಈ ಯೋಜನೆಯನ್ನು ವಿಮಾ ಕಂಪನಿಗೆ ವಹಿಸದೇ ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟ ಕರ್ತವ್ಯನಿರತ ಪೊಲೀಸ್ ಇಲಾಖೆಯ ಉದ್ಯೋಗಿಗಳ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯಡಿ ಪಾವತಿ ಮಾಡಲು ಸೂಚಿಸಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: ಆಇ 126 ವೆಚ್ಚ-11/2024, ದಿನಾಂಕ: 02/09/2024ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.