ಬೆಂಗಳೂರು: ಯಾತ್ರಾರ್ಥಿಗಳ ಕನಸು ನನಸಾಗಿಸೋ ಸಲುವಾಗಿ ಕರ್ನಾಟಕ್ ಭಾರತ್ ಗೌರವ್ ದಕ್ಷಿಣ ಯಾತ್ರಾವನ್ನು ಆಯೋಜಿಸಲಾಗಿದೆ. ಈ ಯೋಜನೆಯಡಿ ರಾಮೇಶ್ವರ, ಕನ್ಯಾಕುಮಾರಿ, ಮದುರೈ, ತಿರುವನಂತಪುರಕ್ಕೆ ಯಾತ್ರೆಯನ್ನು ಆಯೋಜಿಸಲಾಗಿದೆ. ಇಲ್ಲಿಗೆ ತೆರಳೋರಿಗೆ ರಾಜ್ಯ ಸರ್ಕಾರದಿಂದಲೇ 5000 ಸಹಾಯಧನವನ್ನು ನೀಡಲಾಗುತ್ತಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ ರಾಮೇಶ್ವರ, ಕನ್ನಯಾಕುಮಾರಿ, ಮದುರೈ, ತಿರುವನಂತಪುರಕ್ಕೆ ಆಯೋಜಿಸಲಾಗಿದೆ. ಯಾತ್ರೆಯು ದಿನಾಂಕ 18-01-2024ರಿಂದ ಐಆರ್ ಸಿಟಿಸಿ, ಐಟಿಎಂಎಸ್ ವೆಬ್ ಸೈಟ್ ಮೂಲಕ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಈ ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15,000 ರೂ ಆಗಿದೆ. ಕರ್ನಾಟಕ ಸ್ರಕಾರದಿಂದ ರೂ.5000 ಸಹಾಯಧನ ನೀಡಲಾಗುತ್ತದೆ. ಯಾತ್ರಿಯು ಕೇವಲ 10000 ಮಾತ್ರವೇ ಪಾವತಿಸಬೇಕಾಗಿದೆ ಅಂತ ತಿಳಿಸಿದ್ದಾರೆ.
ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾಗೆ ರೈಲು ಹತ್ತೋದಕ್ಕೆ, ಇಳಿಯೋದಕ್ಕೆ ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ ಹಾಗೂ ಯಶವಂತಪುರ ನಿಲ್ದಾಣಗಳಲ್ಲಿ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ವಿಶೇಷ ರೈಲು ದಿನಾಂಕ 18-01-2024, 30-01-2024ರಂದು ನಿರ್ಗಮನಿಸಲಿದೆ. ದಿನಾಂಕ 23-01-2024, 04-02-2024ರಂದು ಆಗಮಿಸಲಿದೆ ಅಂತ ಹೇಳಿದ್ದಾರೆ.
ಈ ಯಾತ್ರೆಗೆ https://www.irctctourism.com ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 8595931291, 8595931292, 8595931294ಗೆ ಕರೆ ಮಾಡಿ ಪಡೆಯಬಹುದಾಗಿದೆ.