ಬಳ್ಳಾರಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ವತಿಯಿಂದ ಬಳ್ಳಾರಿಯಿಂದ ಹುಬ್ಬಳ್ಳಿಗೆ ಜೂ.27 ರಿಂದ 2 ರಾಜಹಂಸ ಸಾರಿಗೆ ಬಸ್ ಕಾರ್ಯಾಚರಣೆ ಪ್ರಾರಂಭಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ತಿಳಿಸಿದ್ದಾರೆ.
ಬಳ್ಳಾರಿ-ಹುಬ್ಬಳ್ಳಿ ವಯಾ ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗದಲ್ಲಿ ಸೀಮಿತ ನಿಲುಗಡೆ ಕಲ್ಪಿಸಲಾಗಿದೆ.
ಹೀಗಿದೆ ಬಸ್ ಸಂಚಾರದ ವೇಳಾಪಟ್ಟಿ
ಬಳ್ಳಾರಿಯಿಂದ ಬೆಳಿಗ್ಗೆ 5.30 ಮತ್ತು 07 ಗಂಟೆಗೆ ಹೊರಟು, ಹುಬ್ಬಳ್ಳಿಗೆ ಬೆಳಿಗ್ಗೆ 10.30 ಮತ್ತು ಮಧ್ಯಾಹ್ನ 12 ಗಂಟೆಗೆ ತಲುಪಲಿದೆ. ಹುಬ್ಬಳ್ಳಿಯಿಂದ ಬೆಳಿಗ್ಗೆ 11 ಮತ್ತು 01 ಗಂಟೆಗೆ ಹೊರಟು, ಬಳ್ಳಾರಿಗೆ ಸಂಜೆ 04 ಮತ್ತು 06 ಗಂಟೆಗೆ ತಲುಪಲಿದೆ.
ಟಿಕೆಟ್ ದರ ರೂ.430 ಇರಲಿದೆ. ಮುಂಗಡ ಆಸನಗಳನ್ನು ಕಾಯ್ದಿರಿಸಲು www.ksrtc.in ಗೆ ಭೇಟಿ ನೀಡಬಹುದು. ರಾಜಹಂಸ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳೇ ಗಮನಿಸಿ: ಜುಲೈ.13, 14ರಂದು ನಿಗದಿ ಪಡಿಸಿದ್ದ ‘PG CET-2024ರ ಪರೀಕ್ಷೆ’ ಮುಂದೂಡಿಕೆ
ಜಮ್ಮು-ಕಾಶ್ಮೀರದ ದೋಡಾದಲ್ಲಿ ಭದ್ರತಾ ಪಡೆಗಳಿಂದ ಎನ್ಕೌಂಟರ್: ಮೂವರು ಉಗ್ರರ ಹತ್ಯೆ