ಬೆಂಗಳೂರು: ನಗರದ ಆಸ್ತಿ ಪಾವತಿದಾರರಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯ ಸರ್ಕಾರದಿಂದ ಆಸ್ತಿ ತೆರಿಗೆ ಪಾವತಿಸಲು ಸಮಯವನ್ನು ವಿಸ್ತರಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಕುರಿತಂತೆ ಇಂದು ರಾಜ್ಯ ಸಚಿವ ಸಂಪುಟ ಸಭೆಯ ನಂತ್ರ ಸಂಪುಟದ ನಿರ್ಧಾರಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಂತ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು, ಬೆಂಗಳೂರ ನಾಗರಿಕಕರಿಗೆ ಗುಡ್ ನ್ಯೂಸ್ ಎನ್ನುವಂತೆ ಆಸ್ತಿ ತೆರಿಗೆ ಪಾವತಿಸಲು ಸಮಯ ವಿಸ್ತರಣೆ ಮಾಡುವಂತ ತೀರ್ಮಾನ ಕೈಗೊಳ್ಳಲಾಗಿದೆ. ದಿನಾಂಕ 30-11-2024ರವರೆಗೆ ಸಮಯ ವಿಸ್ತರಣೆಯ ನಿರ್ಧಾರವನ್ನು ಇಂದಿನ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.
ಪೆರಿಪರಲ್ ರಸ್ತೆಗೆ ಬಂಡವಾಳ ಸಂಗ್ರಹ ಮಾಡಲು ಸಮಯ ವಿಸ್ತರಣೆ ಮಾಡಲಾಗಿದೆ. ವಿವಿಧ ಮೂಲಗಳಿಂದ ಸಂಪನ್ಮೂಲ ಸಂಗ್ರಹಕ್ಕೆ ಸಮ್ಮತಿ ನೀಡಲಾಗಿದೆ ಎಂದರು.
ರಾಜ್ಯಪಾಲರು 11 ಬಿಲ್ ವಾಪಸ್ ಕಳಿಸಿದ್ದಾರೆ. 5 ಬಿಲ್‌ಗಳಿಗೆ ನಾವು ಉತ್ತರ ಕೊಟ್ಟಿದ್ದೇವೆ. ಸಂಪೂರ್ಣ ಮಾಹಿತಿಯನ್ನ ಒದಗಿಸಿದ್ದೇವೆ. 6 ಬಿಲ್ ಗಳಿಗೆ ಮಾಹಿತಿ ಸಂಗ್ರಹಿಸಿ ಕಳಿಸಬೇಕಿದೆ ಎಂದು ತಿಳಿಸಿದರು.
ಅನರ್ಹ ‘BPL ಕಾರ್ಡ್’ದಾರರಿಗೆ ಬಿಗ್ ಶಾಕ್: ಶೀಘ್ರವೇ ಕಾನೂನು ಕ್ರಮ- ಸಚಿವ ಕೆ.ಹೆಚ್ ಮುನಿಯಪ್ಪ
ಕೇರಳದ ‘ಹೇಮಾ’ ಸಮಿತಿ ಮಾದರಿ ಸಮಿತಿ ರಚಿಸಿ : ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದ ‘ಫೈರ್’
BIG NEWS: ಭಾಗ್ಯಲಕ್ಷ್ಮಿ ಯೋಜನೆಯಡಿ ‘ಉಚಿತ ಸೀರೆ ಹಂಚಿಕೆ’ಯಲ್ಲಿ 23 ಕೋಟಿ ಹಗರಣ: ರಮೇಶ್ ಬಾಬು ಗಂಭೀರ ಆರೋಪ