ಬೆಂಗಳೂರು : :ಕರ್ನಾಟಕ ಪಬ್ಲಿಕ್ ಶಾಲೆ, (KPS) ಬೆಂಗಳೂರು ಪಬ್ಲಿಕ್ ಶಾಲೆ (BPS) ಹಾಗೂ ಪಿ ಎಂ ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ಮಾಧ್ಯಮದ (Bilingual Classes)ತರಗತಿಗಳಿಗೆ ಮಕ್ಕಳ ಗರಿಷ್ಟ ದಾಖಲಾತಿ ಮಿತಿಯನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಬ್ಲಿಕ್ ಶಾಲೆ (KPS) ಬೆಂಗಳೂರು ಪಬ್ಲಿಕ್ ಶಾಲೆ (BPS) ಹಾಗೂ ಪಿ ಎಂ ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ಮಾಧ್ಯಮದ (Bilingual Classes) ತರಗತಿಗಳಿಗೆ ಮಕ್ಕಳ ಗರಿಷ್ಟ ದಾಖಲಾತಿ ಮಿತಿಯನ್ನು ಈ ಕೆಳಕಂಡಂತೆ ಹೆಚ್ಚಿಸಲು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಷರತ್ತು ಬದ್ಧವಾಗಿ ಅನುಮತಿಸಿದೆ.
ಷರತ್ತುಗಳು
2025-26ನೇ ಶೈಕ್ಷಣಿಕ ಸಾಲಿನಿಂದಲೇ ಮೇಲಿನಂತೆ ಎಲ್ಲಾ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳದ ಮಿತಿಯ ನಿಯಮಗಳಂತೆ ಅನುಷ್ಠಾನಗೊಳಿಸಲು ಕ್ರಮವಹಿಸ ತಕ್ಕದ್ದು.
ಪೂರ್ವ ಪ್ರಾಥಮಿಕ ವಿಭಾಗದ ಪ್ರತಿ ತರಗತಿಯ ಶಿಕ್ಷಕ/ಶಿಕ್ಷಕಿಯ ಜೊತೆ ಒಂದು ಆಯಾ ಕಡ್ಡಾಯವಾಗಿ ಇರತಕ್ಕದ್ದು.
ಶಾಲಾ ಆವರಣದಲ್ಲಿ ಲಭ್ಯವಿರುವ ಕಟ್ಟಡಗಳನ್ನು ಹಾಗೂ ಇನ್ನಿತರ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ದಾಖಲಾತಿ ಹಾಗು ವಿದ್ಯಾಭ್ಯಾಸಕ್ಕಾಗಿ ಎಲ್ಲಾ ರೀತಿಯ ಅವಕಾಶ ಮಾಡಿ ಕೊಡುವುದು
ಉಲ್ಲೇಖಿತ ಸರ್ಕಾರದ ಆದೇಶದಂತೆ ಕರ್ನಾಟಕ ಪಬ್ಲಿಕ್ ಶಾಲೆ (KPS), ಬೆಂಗಳೂರು ಪಬ್ಲಿಕ್ ಶಾಲೆ (BPS) ಹಾಗೂ ಪಿ ಎಂ ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ಮಾಧ್ಯಮದ (Bilingual Classes)ತರಗತಿಗಳಿಗೆ ಮಕ್ಕಳ ಗರಿಷ್ಟ ದಾಖಲಾತಿ ಮಿತಿಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮತ್ತು ಸದರಿ ಶಾಲೆಗಳ ಶಾಲಾ ಮುಖ್ಯಸ್ಮರಿಗೆ ತಿಳಿಸಲಾಗಿದೆ.