ಬೆಂಗಳೂರು: 2023-24ನೇ ಸಾಲಿಗೆ ಜಿಲ್ಲಾ ಮತ್ತು ಬ್ಲ್ಯಾಕ್ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ/ಗುತ್ತಿಗೆ ಸಿಬ್ಬಂದಿ ಸಂಭಾವನೆಯನ್ನು ಭರಿಸಲು ಈ ಕೆಳಕಂಡ ವಿವರಗಳಂತೆ ಐದನೇ ಕಂತಿನ ಅನುದಾನವನ್ನು ಎಂ.ಎಂ.ಎಂ.ಇ.ಆರ್ (ಆಡಳಿತಾತ್ಮಕ ವೆಚ್ಚ) ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಆದೇಶವನ್ನುಹೊರಡಿಸಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ 2023-24ನೇ ಸಾಲಿನ ಐದನೇ ಕಂತಿನ ಅನುದಾನವನ್ನು ಜಿಲ್ಲಾ ಕಛೇರಿಗಳಲ್ಲಿ ಮತ್ತು ಬ್ಲಾಕ್ ಕಛೇರಿಗಳಲ್ಲಿ (ಬಿ.ಆರ್.ಸಿ ಕೇಂದ್ರಗಳಲ್ಲಿ ಇರುವ 03 ಹೊರಗುತ್ತಿಗೆ ಹುದ್ದೆಗಳನ್ನು ಹೊರತುಪಡಿಸಿ) ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ (ಕರ್ನಾಟಕ ಕನಿಷ್ಟ ವೇತನ ಕಾಯ್ದೆ ಹಾಗು ವಲಯ 1,2,3 ರ ಅನ್ವಯ) ಮತ್ತು ಗುತ್ತಿಗೆ ಸಿಬ್ಬಂದಿಗಳ ಸಂಭಾವನೆ (ಫೆಬ್ರವರಿ-2024 ಮತ್ತು ಮಾರ್ಚ್-2024 ತಿಂಗಳಿಗೆ), ಸಾದಿಲ್ವಾರು ವೆಚ್ಚ, ಜಾಹಿರಾತು ವೆಚ್ಚ, ವಾಹನದ ಇಂಧನ/ರಿಪೇರಿ/ಬಾಡಿಗೆ ಮತ್ತು ಕಟ್ಟಡದ ಬಾಡಿಗೆ ಭರಿಸಲು ಒಟ್ಟು ರೂ. 207.78ಲಕ್ಷಗಳನ್ನು ಬಿಡುಗಡೆ ಮಾಡಿದೆ
ಹೊರಗುತ್ತಿಗೆ/ ಗುತ್ತಿಗೆ ಸಿಬ್ಬಂದಿ ಸಂಭಾವನೆ (ಫೆಬ್ರವರಿ-2024 ಮತ್ತು ಮಾರ್ಚ್-2024 ತಿಂಗಳಿಗೆ), ಸಾದಿಲ್ವಾರು ವೆಚ್ಚ, ಟೆಂಡರ್ ಜಾಹಿರಾತು ವೆಚ್ಚ ವಾಹನದ ಇಂಧನ/ರಿಪೇರಿ/ಬಾಡಿಗೆ ಮತ್ತು ಕಟ್ಟಡದ ಬಾಡಿಗೆ (ಫೆಬ್ರವರಿ-2024 ಮತ್ತು ಮಾರ್ಚ್-2024 ತಿಂಗಳಿಗೆ) ಭರಿಸಲು ಒಟ್ಟು ರೂ. 207.78ಲಕ್ಷಗಳನ್ನು (ಇನ್ನೂರ ಏಳು ಲಕ್ಷದ ಎಪ್ಪತ್ತೆಂಟು ಸಾವಿರಗಳು ಮಾತ್ರ) ಈ ಪತ್ರಕ್ಕೆ ಲಗತ್ತಿಸಿರುವ ಅನುಬಂಧ-1 ಮತ್ತು 2ರಲ್ಲಿನ ವಿವರದಂತೆ ಕೆ2-ಪಿ.ಎಫ್.ಎಂ.ಎಸ್ ಮೂಲಕ ಬಿಡುಗಡೆ ಮಾಡಲಾಗಿದೆ ಸದರಿ ವೆಚ್ಚವನ್ನು ಆಡಳಿತಾತ್ಮಕ ವೆಚ್ಚದ Component ID- F.01.31 ಮತ್ತು ಲೆಕ್ಕ ಶೀರ್ಷಿಕೆ- 2202-01-113-0- 02-059 ರಡಿ ವೆಚ್ಚವನ್ನು ಭರಿಸುವುದು.
ಆಡಳಿತಾತ್ಮಕ ವೆಚ್ಚದ ಐದನೇ ಕಂತಿನ ಅನುದಾನವನ್ನು ಈ ಕೆಳಕಂಡಂತೆ ಬಿಡುಗಡೆ ಮಾಡಿ ಆದೇಶಿಸಿದೆ ಅಂತ ತಿಳಿಸಿದೆ.