ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ ಎನ್ನುವಂತೆ ನಾಗಸಂದ್ರದಿಂದ ಮಾದಾವರ ಮಧ್ಯ ಮೆಟ್ರೋ ರೈಲು ಪರೀಕ್ಷಾ ಸಂಚಾರ ಆರಂಭಗೊಂಡಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ – ಮಾದಾವರ ಮಧ್ಯೆ ಮೆಟ್ರೋ ರೈಲು ಪರೀಕ್ಷಾ ಸಂಚಾರ ಆರಂಭವಾಗಿದೆ. ಗಂಟೆಗೆ ಕನಿಷ್ಟ 5 ಕಿ.ಮೀ ನಿಂದ ಗರಿಷ್ಠ 35 ಕಿ.ಮೀ. ವೇಗದವರೆಗೆ ರೈಲು ಸಂಚರಿಸಿತು ಎಂದಿದೆ.
ಪ್ರಾಥಮಿಕ ಹಂತದ ಪರೀಕ್ಷೆ ಆರಂಭವಾಗಿದೆ. ಸುಮಾರು 15 ದಿನ ಈ ಪರೀಕ್ಷೆ ನಡೆದ ಬಳಿಕ 45 ದಿನಗಳು ಸಿಗ್ನಲಿಂಗ್, ದೂರಸಂಪರ್ಕ, ವಿದ್ಯುತ್ ಸರಬರಾಜು ವ್ಯವಸ್ಥೆಗಳೊಂದಿಗೆ ಸಿಸ್ಟಂ ಸಂಯೋಜನೆ, ಸಾಮರ್ಥ್ಯ ಪರಿಶೀಲನೆ ಸಹಿತ ಪ್ರಮುಖ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಈ ಬಳಿಕ ಗುಣಮಟ್ಟ ತಪಾಸಣಾ ಸಂಸ್ಥೆಗಳು ಸುರಕ್ಷತಾ ಪರೀಕ್ಷೆ ನಡೆಸಿ ವರದಿ ನೀಡಲಿವೆ. ವರದಿ ಸ್ವೀಕರಿಸಿ ರೈಲ್ವೆ ಮಂಡಳಿಯು ಅನುಮತಿ ನೀಡಿದ ಮೇಲೆ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ಈ ವರ್ಷದ ಅಂತ್ಯದೊಳಗೆ ವಾಣಿಜ್ಯ ಸಂಚಾರ ಶುರುವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೀಚ್-3ರ ಎತ್ತರಿಸಿದ ಮಾರ್ಗದಲ್ಲಿನ -ನಾಗಸಂದ್ರದಿಂದ ಮಾದವರದ -3.14 ಕಿ.ಮೀ ನಡುವೆ (ರೋಲ್ಲಿಂಗ್ ಸ್ಟಾಕ್) ಮೆಟ್ರೋ ರೈಲು ಮೂಲಕ ಮೊದಲ ಪರೀಕ್ಷಾರ್ಥ ಸಂಚಾರ. ಕನಿಷ್ಠ 5ಕಿ.ಮೀ ಮತ್ತು ಗರಿಷ್ಠ 35 ಕಿ.ಮೀ ವೇಗದಲ್ಲಿ ದಿನಾಂಕ 17.08.2024 ರಂದು ನಡೆಸಲಾಯಿತು pic.twitter.com/gKRisrlfuC
— ನಮ್ಮ ಮೆಟ್ರೋ (@OfficialBMRCL) August 18, 2024
ಶಿವಮೊಗ್ಗ: NHM ವೈದ್ಯಕೀಯ, ಅರೆವೈದ್ಯಕೀಯ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
BREAKING : ಹಾವೇರಿಯಲ್ಲಿ ಭೀಕರ ಅಪಘಾತ : ‘NWKRTC’ ಬಸ್ ಪಲ್ಟಿಯಾಗಿ 13 ಪ್ರಯಾಣಿಕರಿಗೆ ಗಂಭೀರ ಗಾಯ!