ಬೆಂಗಳೂರು : ರಾಜ್ಯ ಸರ್ಕಾರವು ಮುಜರಾತಿ ದೇವಸ್ಥಾನಗಳ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮೂಲ ವೇತನದ ಶೇ. ಶೇ.17 ರಷ್ಟು ಮಧ್ಯಂತರ ಪರಿಹಾರ ನೀಡಲು ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಕೆಲವು ಪ್ರಮುಖ ದೇವಾಲಯಗಳ ನೌಕರರಿಗೆ ಕೆಲವರಿಗೆ 6ನೇ ವೇತನ ಶ್ರೇಣಿ ಮಂಜೂರಾಗಿದ್ದು ಕೆಲವು ನೌಕರರಿಗೆ ನಿಯಮ 8 (2)ರ ಅಡಿಯಲ್ಲಿ ವೇತನ ಶ್ರೇಣಿ ಮಂಜೂರಾಗಿದೆ. ಒಂದೇ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ತಾರತಮ್ಯವಿದ್ದು ನಿಯಮ 8 (2) ಅಡಿಯಲ್ಲಿ ವೇತನ ಶ್ರೇಣಿ ಪಡೆಯುತ್ತಿರುವ ನೌಕರರು ತಮಗೂ ಸಹ 6ನೇ ವೇತನ ಶ್ರೇಣಿಯನ್ನು ಮಂಜೂರು ಮಾಡಲು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದರು.
ಇದೀಗ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ದಿನಾಂಕ 01/04/2023 ರಿಂದ ಜಾರಿಗೆ ಬರುವಂತೆ ಮೂಲವೇತನದ ಶೇ17 ರಷ್ಟು ಮಧ್ಯಂತರ ಪರಿಹಾರವನ್ನು ನಿಯಮಗಳಲ್ಲಿರುವಂತೆ, ಈಗಾಗಲೇ ಸರ್ಕಾರಿ ನೌಕರರಿಗೆ ಮಂಜೂರು ಮಾಡಿದ್ದು, ಈಗಾಗಲೇ 6ನೇ ವೇತನ ಶ್ರೇಣಿ ಪಡೆಯುತ್ತಿರುವ ದೇವಾಲಯದ ನೌಕರರಿಗೆ ದೇವಾಲಯದ ಒಟ್ಟು ಸಿಬ್ಬಂದಿ ವೆಚ್ಚವು ದೇವಾಲಯದ ವಾರ್ಷಿಕ ಆದಾಯದ ಶೇಕಡ 35% ರಷ್ಟು ಮೀರದಿದ್ದಲ್ಲಿ ಆದೇಶದಲ್ಲಿ ತಿಳಿಸಿರುವಂತೆ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಅನುಮತಿಸಿದೆ.