ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಬೌದ್ಧರು, ಸಿಖ್ಖರು, ಪಾರ್ಸಿಗಳು ಮತ್ತು ಆಂಗ್ಲೋ ಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಂದ ಸಿಇಟಿ, ನೀಟ್ ಮೂಲಕ ವೃತ್ತಿಪರ ಕೋರ್ಸ್‍ಗಳಿಗೆ ಪ್ರದೇಶ ಪಡೆಯಬಯಸುವ ವಿದ್ಯಾರ್ಥಿಗಳಿಗೆ ನಿಗಮದಿಂದ ಒದಗಿಸುವ ಅರಿವು ಯೋಜನೆಯಡಿ ಸಾಲ ಸೌಲಭ್ಯವನ್ನು ಒದಗಿಸಲು ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮೇ 23 ಅರ್ಜಿ ಸಲ್ಲಿಸಲು ಕೊನೆಯ ದಿನ.
ನಿಗಮದ ವೆಬ್‍ಸೈಟ್ kmdconline.karnataka.gov.in ತೆರೆದು ಲಿಂಕ್‍ಗೆ ಕ್ಲಿಕ್ ಮಾಡಬೇಕು. ನಂತರ ಅರ್ಜಿಯನ್ನು ಭರ್ತಿ ಮಾಡಿ ಪ್ರಿಂಟ್ ಕಾಪಿಯನ್ನು ಜಿಲ್ಲಾ ಕಛೇರಿಗೆ ಸಲ್ಲಿಸಬೇಕು. ಅಂತಹ ವಿದ್ಯಾರ್ಥಿಗಳು ಭರಿಸಬೇಕಾದ ಬೋಧನಾ ಶುಲ್ಕಕ್ಕಾಗಿ ನಿಗಮದಿಂದ ಮಂಜೂರು ಮಾಡುವ ಸಾಲವನ್ನು ಅವರು ವ್ಯಾಸಂಗ ಮಾಡುವ ಕಾಲೇಜಿಗೆ ಮುಂಚಿತವಾಗಿ ನೇರವಾಗಿ ಹಣಪಾವತಿ ಮಾಡಲಾಗುವುದು.
ಆನ್‍ಲೈನ್ ಅರ್ಜಿಯನ್ನು ಕಂಪ್ಯೂಟರ್ ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿಯ ಪ್ರಿಂಟೌಟನ್ನು ತೆಗೆದುಕೊಂಡು SSLC, PUC Marks Card, Adhar card, Caste & Income, ID Card, Ration Card, Student & Parents Photos, CET/ NEET All Copies & Hall Ticket, Indemnity bond with Notary ಈ ಎಲ್ಲ ದಾಖಲಾತಿಗಳನ್ನು ಮೇ 23 ರೊಳಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಿದ್ದಲ್ಲಿ ಸಾಲ ಬಿಡುಗಡೆ ಮಾಡುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ದೂರವಾಣಿ ಸಂಖ್ಯೆ 08194-226412, 8431669372 (ವಿಷಯ ನಿರ್ವಹಕರು), 8277944213 ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಜಿಲ್ಲಾ ಪಂಚಾಯತ್, ಜಿಲ್ಲಾ ವ್ಯವಸ್ಥಾಪಕರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.