ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿ.ಎಂ.ಆರ್.ಸಿ.ಎಲ್) ದಿನಾಂಕ 10ನೇ ಸೆಪ್ಟೆಂಬರ್ 2025 ರಿಂದ ಜಾರಿಗೆ ಬರುವಂತೆ ಹಳದಿ ಮಾರ್ಗದಲ್ಲಿ 4ನೇ ರೈಲು ಸೆಟ್ ಅನ್ನು ಕಾರ್ಯಾಚರಣೆ ಸೇರಿಸಲಾಗಿ ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಪರಿಷ್ಕರಿಸ ಲಾಗಿದೆ:
ರೈಲು ಆವರ್ತನ:
ಎಲ್ಲಾ ದಿನಗಳಲ್ಲಿ ರೈಲುಗಳು ಈಗ 19 ನಿಮಿಷಗಳ ಮಧ್ಯಂತರದಲ್ಲಿ (ಈಗಿನ 25 ನಿಮಿಷಗಳ ಮಧ್ಯಂತರದ ಬದಲಿಗೆ) ಚಲಿಸುತ್ತವೆ.
ಮೊದಲ ರೈಲು ಸಮಯ:
- ಸೋಮವಾರದಿಂದ ಶನಿವಾರದಂದು, ಮೊದಲ ವಾಣಿಜ್ಯ ಸೇವೆಯು ಬೆಳಿಗ್ಗೆ ಈಗಿನ 6.30 ಗಂಟೆಯ ಬದಲಿಗೆ ಬೆಳಿಗ್ಗೆ 06:00 ಗಂಟೆಗೆ ಪ್ರಾರಂಭವಾಗುತ್ತದೆ.
- ಭಾನುವಾರದಂದು, ಮೊದಲ ರೈಲು ಬೆಳಿಗ್ಗೆ 07:00 ಗಂಟೆಗೆ ಪ್ರಾರಂಭವಾಗಲಿದೆ.
ಕೊನೆಯ ರೈಲು ಸಮಯ:
- ಆರ್.ವಿ. ರಸ್ತೆಯಿಂದ: ರಾತ್ರಿ 11:55 (ಬದಲಾವಣೆ ಇಲ್ಲ)
- ಬೊಮ್ಮಸಂದ್ರದಿಂದ: ರಾತ್ರಿ 10:42 (ಬದಲಾವಣೆ ಇಲ್ಲ)
ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಸುಧಾರಿತ ಸೌಲಭ್ಯವನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ. ಈ ಮೂಲಕ ನಮ್ಮ ಮೆಟ್ರೋ ರೈಲ್ವೆ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಗುಡ್ ನ್ಯೂಸ್ ನೀಡಿದೆ.
ಸಿಯಾಚಿನ್ ನಲ್ಲಿ ಭೀಕರ ಹಿಮಪಾತ, ಮೂವರು ಭಾರತೀಯ ಯೋಧರು ಹುತಾತ್ಮ | Major Avalanche at Siachen
ನಾಳೆ ಮದ್ದೂರಲ್ಲಿ ಸಾಮೂಹಿಕವಾಗಿ ಗಣೇಶ ವಿಸರ್ಜನೆ: ಮುನ್ನೆಚ್ಚರಿಕೆ ಕ್ರಮಕ್ಕೆ ಸಚಿವ ಚಲುವರಾಯಸ್ವಾಮಿ ಸೂಚನೆ