ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ವತಿಯಿಂದ ರಾಷ್ಟ್ರೀಯ ವಿದ್ಯಾಲಯ ರಸ್ತೆ ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರವರೆಗೆ (ಹಳದಿ ಮಾರ್ಗ) ಮೆಟ್ರೋ ರೈಲು ಸಂಚಾರವನ್ನು 11.08.2025 ರಿಂದ ಆರಂಭಿಸಲಾಗಿದೆ. ಈ ಮಾರ್ಗದಲ್ಲಿ ರೈಲು ಸೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ ಪರಿಣಾಮವಾಗಿ, ವಿಶೇಷವಾಗಿ ಆನೇಕಲ್ ಹಾಗೂ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಗರಿಷ್ಠ ಸಮಯಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಅಂತಿಮ ಹಂತದ ಸಂಪರ್ಕವನ್ನು (Last Mile Connectivity) ಸುಧಾರಿಸುವ ಉದ್ದೇಶದಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪರಸ್ಪರ ಸಂಯೋಜನೆ ಮಾಡಿಕೊಂಡು ವಿಶೇಷ ಫೀಡರ್ ಬಸ್ ಸೇವೆಗಳನ್ನು ಪರಿಚಯಿಸಲಾಗಿದೆ.
ಈ ಯೋಜನೆಯ ಭಾಗವಾಗಿ, ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ, ಬಿಎಂಟಿಸಿ ವತಿಯಿಂದ 04 (ನಾಲ್ಕು) ವಿಶೇಷ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಸಮೀಪದ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಿಗೆ, 05.01.2026 ರಿಂದ ಆರಂಭಿಸಲಾಗಿದೆ.
ಮೆಟ್ರೋ ಫೀಡರ್ ಬಸ್ ಸೇವೆಯ ವಿವರಗಳು
ಮಾರ್ಗ:
ಆನೇಕಲ್ ಬಸ್ ನಿಲ್ದಾಣ – ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣ
(ಚಿಕ್ಕಹಗಡೆ ಕ್ರಾಸ್, ಇಗ್ಗಲೂರು ಮತ್ತು ಚಂದಾಪುರ ಮೂಲಕ)
ಆನೇಕಲ್ ಬಸ್ ನಿಲ್ದಾಣದಿಂದ ಹೊರಡುವ ಸಮಯಗಳು:
05:35, 05:55, 06:15, 06:35, 07:00, 07:20, 07:45, 08:05, 08:35, 08:55,09:10, 09:30, 09:50, 10:45, 10:55, 11:05, 12:50,14:45, 14:50, 15:10, 15:35, 15:55, 16:20, 16:40,17:20, 17:40, 18:10, 18:30, 19:05, 19:25, 19:55,20:15, 21:00, 21:20
ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯಗಳು:
05:35, 05:55, 06:15, 06:35, 07:00, 07:20, 07:45, 08:05, 08:35, 08:55, 09:30, 09:50, 10:05, 10:45, 11:05, 12:05, 14:00, 15:35, 15:50, 15:55, 16:20, 16:40, 17:20, 17:40, 18:10, 18:30, 19:05, 19:25, 19:55, 20:15, 21:00, 21:20
ಈ ಫೀಡರ್ ಬಸ್ ಸೇವೆಗಳು ದಿನಪೂರ್ತಿ ಗರಿಷ್ಠ ಹಾಗೂ ಸಾಮಾನ್ಯ ಸಮಯಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಮೆಟ್ರೋ ಪ್ರಯಾಣಿಕರಿಗೆ ಸುಗಮ ಮತ್ತು ಸುಲಭ ಸಂಪರ್ಕವನ್ನು ಒದಗಿಸುವ ಉದ್ದೇಶ ಹೊಂದಿವೆ.
ಮೆಟ್ರೋ ಪ್ರಯಾಣಿಕರು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಪ್ರಯಾಣಿಸುವಾಗ ಈ ಫೀಡರ್ ಬಸ್ ಸೇವೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿನಂತಿಸಲಾಗಿದೆ.
ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ದಾಖಲೆಗೆ ಸಿದ್ದರಾಮಯ್ಯ ಪಾತ್ರ | CM Siddaramaiah
ರಾಜ್ಯ ಸರ್ಕಾರದಿಂದ ‘ಬಳ್ಳಾರಿ ಶೂಟೌಟ್’ ಮುಚ್ಚಿ ಹಾಕಲು ಷಡ್ಯಂತ್ರ್ಯ: HDK ಗಂಭೀರ ಆರೋಪ








