ಬೆಂಗಳೂರು: ರಾಜ್ಯದಲ್ಲಿ ಮದುವೆಯಾದಂತ ನವ ದಂಪತಿಗಳು ವಿವಾಹ ನೋಂದಣಿಗಾಗಿ ಸಬ್ ರಿಜಿಸ್ಟಾರ್ ಕಚೇರಿಗೆ ತೆರಳಬೇಕಾಗಿತ್ತು. ಆದ್ರೇ ಈ ಪ್ರಕ್ರಿಯೆಗೆ ಇನ್ಮುಂದೆ ಬ್ರೇಕ್ ಹಾಕಲಾಗುತ್ತಿದೆ. ಇನ್ನೂ ಏನಿದ್ದರೂ ಆನ್ ಲೈನ್ ಮೂಲಕವೇ ವಿವಾಹ ನೋಂದಣಿ ಮಾಡಬಹುದಾಗಿದೆ.
ಈ ಸಂಬಂಧದ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂದೂ ಮ್ಯಾರೇಜ್ ಆ್ಯಕ್ಟ್ ಕಾಯ್ದೆಗೆ ತಿದ್ದುಪಡಿ ತರೋದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ವಿವಾಹ ಸರಳೀಕರಣಕ್ಕೆ ಸರ್ಕಾರದ ಸಮ್ಮತಿ ನೀಡಲಾಗಿದೆ. ಹಿಂದೂ ವಿವಾಹ ನೊಂದಣಿ ಕಾಯ್ದೆ 2024 ಕ್ಕೆ ಒಪ್ಪಿಗೆ ಸೂಚಿಸಲಾಗಿದೆ.
ನೋಂದಣಿ ಹೇಗೆ.?
ಈವರೆಗೆ ವಿವಾಹ ನೋಂದಣಿಯನ್ನು ಸಬ್ ರಿಜಿಸ್ಟರ್ ಕಚೇರಿಗೆ ತೆರಳಿ ಮಾಡಬಹುದಾಗಿತ್ತು. ಅದಕ್ಕೆ ಪರ್ಯಾಯವಾಗಿ ಯಾವುದೇ ಬೇರೆ ವ್ಯವಸ್ಥೆ ಇರಲಿಲ್ಲ. ಈಗ ಇದನ್ನು ಬದಲಾವಣೆ ಮಾಡಲಾಗುತ್ತಿದೆ.
ಸಬ್ ರಿಜಿಸ್ಟರ್ ಕಚೇರಿಗೆ ತೆರಳಿ ವಿವಾಹ ನೋಂದಣಿ ಪ್ರಕ್ರಿಯೆಗೆ ತಿಲಾಂಜಲಿ ನೀಡಲಾಗಿದೆ. ಇದರ ಬದಲಾಗಿ ಆನ್ಲೈನ್ ಮೂಲಕ ನೊಂದಣಿಗೆ ಅವಕಾಶ ನೀಡಲಾಗುತ್ತಿದೆ. ಗ್ರಾಮ ಒನ್, ಕಾವೇರಿ 2ನಲ್ಲಿ ನೊಂದಣಿ ಮಾಡಬಹುದು. ಈ ಮೂಲಕ ಸಬ್ ರಿಜಿಸ್ಟರ್ ಕಚೇರಿಗೆ ಅಲೆಯುವ ಕಾಟ ತಪ್ಪಿದಂತೆ ಆಗಿದೆ.