ಬೆಂಗಳೂರು: ವಯನಾಡು ಭೂ ಕುಸಿತದ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ರಾಜ್ಯದ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತದಂತ ಘಟನೆ ನಡೆಯೋ ಮುನ್ನವೇ ಎಚ್ಚೆತ್ತುಕೊಂಡು, ತಡೆಯುವ ಸಲುವಾಗಿ ಗುಡ್ಡ ಕುಸಿತ ತಡೆಗೆ 300 ಕೋಟಿ ವ್ಯಯಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ರಾಜ್ಯದ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಅದನ್ನು ತಡೆಯಲು ಮುಂದಿನ ಎರಡು ವರ್ಷಗಳಲ್ಲಿ ₹300 ಕೋಟಿ ವ್ಯಯಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಶಿರೂರು ಬಳಿಯಲ್ಲಿ ಗುಡ್ಡ ಕುಸಿತದಿಂದಾಗಿ 13 ಮಂದಿ ಸಾವನ್ನಪ್ಪಿದ್ದರು. ಕೆಲವರ ಮೃತದೇಹ ಪತ್ತೆಯಾದ್ರೇ, ಮತ್ತೆ ಕೆಲವರ ಮೃತದೇಹ ಈವರೆಗೆ ಪತ್ತೆಯಾಗಿಲ್ಲ. ಈ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಗುಡ್ಡ ಕುಸಿತ ತಡೆಗೆ 300 ಕೋಟಿ ವ್ಯಯಿಸಲು ನಿರ್ಧರಿಸಲಾಗಿದೆ.
ರಾಜ್ಯದ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಅದನ್ನು ತಡೆಯಲು ಮುಂದಿನ ಎರಡು ವರ್ಷಗಳಲ್ಲಿ ₹300 ಕೋಟಿ ವ್ಯಯಿಸಲಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.#ಗುಡ್ಡಕುಸಿತ@CMofKarnataka @siddaramaiah @krishnabgowda pic.twitter.com/tw3snc3zHC
— DIPR Karnataka (@KarnatakaVarthe) August 6, 2024
‘ಶಾಲಾ ವಾಹನ ಚಾಲಕ’ರೇ ಎಚ್ಚರ.! ಮದ್ಯ ಸೇವಿಸಿದ ’72 ಚಾಲಕ’ರ ವಿರುದ್ಧ ‘FIR’ ದಾಖಲು | School Bus