ಬೆಂಗಳೂರು: ಗೃಹ ಜ್ಯೋತಿ ಯೋಜನೆಯಡಿ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಶೇ.10ರ ಬದಲು ಹೆಚ್ಚುವರಿಯಾಗಿ 10 ಯೂನಿಟ್ ಉಚಿತವಾಗಿ ನೀಡಲು ಸರ್ಕಾರ ತೀರ್ಮಾನಿಸಿದೆ.
ಗೃಹ ಜ್ಯೋತಿ ಯೋಜನೆಯಡಿಯಲ್ಲಿ 48 ಯೂನಿಟ್‍ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಹೆಚ್ಚುವರಿ ಶೇ.10ರ ಬದಲಿಗೆ ಹೆಚ್ಚುವರಿ 10 ಯೂನಿಟ್‍ಗಳನ್ನು ಒದಗಿಸಲು ಸರ್ಕಾರ ನಿರ್ಧಾರ ಮಾಡಿದೆ. ಕಡಿಮೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. . ವರ್ಷದ ವಿದ್ಯುತ್ ಬಳಕೆಯ ಸರಾಸರಿ ಲೆಕ್ಕದಲ್ಲಿ ಕಡಿಮೆ ವಿದ್ಯುತ್ ಯೂನಿಟ್ ಬಳಕೆ ಮಾಡುವವರು ಹೆಚ್ಚುವರಿಯಾಗಿ ಉಚಿತವಾಗಿ 10 ಯೂನಿಟ್ ವಿದ್ಯುತ್ ಪಡೆದುಕೊಳ್ಳಲಿದ್ದಾರೆ ಅಂತ ಅವರು ಇದೇ ವೇಳೆ ತಿಳಿಸಿದರು. ಉದಾಹರಣೆಗೆ ಸರಾಸರಿ 30 ಯೂನಿಟ್ ಬಳಸುವವರು ಇನ್ನು 40 ಯೂನಿಟ್ಗಳವರೆಗೆ ಉಚಿತವಾಗಿ ಬಳಸಿಕೊಳ್ಳಲು ಅವಕಾಶ ಸಿಗಲಿದೆ.ಬೆಸ್ಕಾಂನಲ್ಲಿ 69.73 ಲಕ್ಷ ಕುಟುಂಬಗಳು 48 ಯೂನಿಟ್‍ಗಿಂತ ಕಡಿಮೆ ಬಳಕೆ ಮಾಡುತ್ತಿದ್ದು, 10 ಯೂನಿಟ್‍ಗಳ ಹೆಚ್ಚುವರಿ ಹೆಚ್ಚಳದಿಂದ ರೂ.33 ಕೋಟಿಗಳ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ.