ಬೆಂಗಳೂರು: ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ, ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯಂರಂಗ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ವಿಶೇಷ ಪ್ಯಾಕೇಜ್ ಟೂರ್ ಗಳನ್ನು ಘೋಷಣೆ ಮಾಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕೆ ಎಸ್ ಆರ್ ಟಿ ಸಿಯು, ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ಯಾಕೇಜ್‌ಟೂರ್ ಸೇವೆಗಳನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ& ಭಾನುವಾರ) ರಾಜಹಂಸ ಮತ್ತುಅಶ್ವಮೇಧ ಕ್ಲಾಸಿಕ್ ಸಾರಿಗೆಗಳೊಂದಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ. (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿಊಟವನ್ನು ಹೊರತುಪಡಿಸಿ) ಸದರಿ ಪ್ಯಾಕೇಜ್‌ಟೂರ್‌ಗೆ ಸಾರ್ವಜನಿಕ ಪ್ರಯಾಣಿಕರಿಂದಉತ್ತಮ ಪ್ರೋತ್ಸಾಹದೊರೆಯುತ್ತಿದೆ. ಪ್ಯಾಕೇಜ್ ಟೂರ್‌ಗಳ ವಿವರ ಮತ್ತು ಪ್ರಯಾಣದರ ಈ ಕೆಳಗಿನಂತಿದೆ.
ಪ್ಯಾಕೇಜ್ ಟೂರ್‌ಗಳ ವಿವರ ಮತ್ತು ಪ್ರಯಾಣದರ
- ಬೆಂಗಳೂರು-ಗಗನಚುಕ್ಕಿ ಪ್ಯಾಕೇಜ್ ಟೂರ್ ನಲ್ಲಿ ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ಪ್ರವಾಸಿ ತಾಣಗಳನ್ನು ರಾಜಹಂಸ ಬಸ್ ಮೂಲಕ ನೋಡಬಹುದಾಗಿದೆ. ವಯಸ್ಕರಿಗೆ ರೂ.750 ಹಾಗೂ ಮಕ್ಕಳಿಗೆ ರೂ.600 ಟಿಕೆಟ್ ದರ ನಿಗದಿ ಪಡಿಸಲಾಗಿದೆ.
- ಬೆಂಗಳೂರು-ಗಗನಚುಕ್ಕಿ ಪ್ಯಾಕೇಜ್ ಟೂರಿನಲ್ಲಿ ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ನೋಡಬಹುದಾಗಿದೆ. ಅಶ್ವಮೇಧ ಕ್ಲಾಸಿಕ್ ಬಸ್ಸಿನ ಪ್ರಯಾಣಕ್ಕೆ ವಯಸ್ಕರಿಗೆ ರೂ.600, ಮಕ್ಕಳಿಗೆ ರೂ.450 ಟಿಕೆಟ್ ದರ ನಿಗದಿ ಪಡಿಸಲಾಗಿದೆ.
- ಬೆಂಗಳೂರು-ಚಿಕ್ಕತಿರುಪತಿ ಪ್ಯಾಕೇಜ್ ಟೂರಲ್ಲಿ ಚಿಕ್ಕತಿರುಪತಿ-ಕೋಟಿಲಿಂಗೇಶ್ವರ-ಬಂಗಾರುತಿರುಪತಿ-ಆವಣಿ-ಮುಳಬಾಗಿಲು-ಕುರುಡುಮಲೆ-ಕೋಲಾರ ನೋಡಬಹುದಾಗಿದೆ. ಅಶ್ವಮೇಧ ಕ್ಲಾಸಿಕ್ ಬಸ್ಸಿನ ಪ್ರವಾಸಕ್ಕೆ ವಯಸ್ಕರಿಗೆ ರೂ.600, ಮಕ್ಕಳಿಗೆ ರೂ.450 ಟಿಕೆಟ್ ದರ ನಿಗದಿ ಪಡಿಸಲಾಗಿದೆ.
- ಬೆಂಗಳೂರು-ಮೇಲುಕೋಟೆ ಪ್ಯಾಕೇಜ್ ಟೂರಿನಲ್ಲಿ ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆಯನ್ನು ಅಶ್ವಮೇಧ ಕ್ಲಾಸಿಕ್ ಬಸ್ಸಿನಲ್ಲಿ ನೋಡಬಹುದಾಗಿದೆ. ಇದಕ್ಕಾಗಿ ದೊಡ್ಡವರಿಗೆ ರೂ.670 ಹಾಗೂ ಮಕ್ಕಳಿಗೆ ರೂ.500 ಟಿಕೆಟ್ ದರ ನಿಗದಿ ಪಡಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ಮೇಲೆ ತಿಳಿಸಿರುವ ಪ್ಯಾಕೇಜ್‌ಟೂರ್ ಸಾರಿಗೆ ಸೌಲಭ್ಯಕ್ಕಾಗಿ ಟಿಕೇಟ್ ಪಡೆಯಲು ಉಪಯೋಗಿಸುವ ವೆಬ್ ಸೈಟ್: www.ksrtc.in ಮತ್ತು www.ksrtc.karnataka.gov.in ಗೆ ಭೇಟಿ ನೀಡಿ ಮುಂಗಡವಾಗಿ ಬುಕ್ ಮಾಡಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ :080-26252625 /7760990100 /7760990560/ 7760990287 ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್: ಪಿಸಿಯಿಂದ, ASI ದರ್ಜೆಯ ಸಿಬ್ಬಂದಿಗೆ ವಿಶೇಷ ರಜೆ
BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!








