ಬೆಂಗಳೂರು: ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಎಟಿಎಂ ಇಲ್ಲದೇ ಹಣ ಡ್ರಾ ಮಾಡಿಕೊಳ್ಳಲು ಪರದಾಡಬೇಕಾಗಿತ್ತು. ಇದೀಗ ಈ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್.1ರಲ್ಲಿ ಎಟಿಎಂ ಸೌಲಭ್ಯ ಕಲ್ಪಿಸಲಾಗಿದೆ.
ಹೌದು. ಕೆಂಪೇಗೌಡ ಬಸ್ ನಿಲ್ದಾಣದ ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ ಯಾವುದೇ ಬ್ಯಾಂಕ್ ಎಟಿಎಂ ಸೌಲಭ್ಯವಿರಲಿಲ್ಲ. ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ತುರ್ತು ಕೆಲಸಕ್ಕಾಗಿ ಹಣಪಡೆಯಲು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಇಂದು ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ 1 ರ ಮುಖ್ಯ ರಸ್ತೆಯಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಎಟಿಎಂ ಅನ್ನು ಪ್ರಾರಂಭಿಸಲಾಗಿದೆ.
ಅಕ್ರಂಪಾಷ ಭಾಆಸೇ, ,ವ್ಯವಸ್ಥಾಪಕ ನಿರ್ದೇಶಕರು ,ಕೆ ಎಸ್ ಆರ್ ಟಿ ಸಿ ಅವರು ಸದರಿ ಶಾಖೆಯನ್ನು ಉದ್ಘಾಟಿಸಿದರು. ಉಮೇಶ ಕುಮಾರ್ ಸಿಂಗ್ ಪ್ರಾದೇಶಿಕ ಮುಖ್ಯಸ್ಥರು, ಇಂಡಿಯನ್ ಈವರ್ ಸೀಸ್ ಬ್ಯಾಂಕ್, ಬೆಂಗಳೂರು ವಲಯ, ಸಂತೋಷ ಕುಮಾರ್ ಪಾಂಡೆ, ಎಜಿಎಂ, IOB, ರವರು, ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣದ ಪರಿವೀಕ್ಷಣೆ ನಡೆಸಿದ ವ್ಯವಸ್ಥಾಪಕ ನಿರ್ದೇಶಕರು ಮುಂಗಡ ಟಿಕೇಟ್ ಕಾಯ್ದಿರಿಸುವ ಕೇಂದ್ರ, ವಾಣಿಜ್ಯ ಮಳಿಗೆಗಳು, ಒಪ್ಪಂದ ಮೇರೆಗೆ ನೀಡುವ ವಾಹನ ಕೇಂದ್ರ, ಬಸ್ ನಿಲ್ದಾಣದ ಸ್ವಚ್ಛತೆಯನ್ನು ಪರಿವೀಕ್ಷಣೆ ನಡೆಸಿದರು.
BREAKING: ಭೂ ಹಗರಣದಲ್ಲಿ ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ’ ವಿರುದ್ಧ ಖಾಸಗಿ ದೂರು ದಾಖಲು
ಬಿಎಂಟಿಸಿಯ ಮತ್ತೊಂದು ಮಹತ್ವದ ಹೆಜ್ಜೆ: ವಜ್ರ ಸಾಪ್ತಾಹಿಕ ಪಾಸು ವಿತರಣಾ ವ್ಯವಸ್ಥೆ ಪರಿಚಯ