ಬೆಂಗಳೂರು: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಸರ್ಕಾರವು 1 ಕೋಟಿ ಅಪಘಾತ ವಿಮಾ ಪರಿಹಾರಕ್ಕೆ ಬ್ಯಾಂಕ್ ಜೊತೆಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ಇಂದು ಸಾರಿಗೆ ಮತ್ತು ಮುಜರಾಯಿ ಖಾತೆಯ ಸಚಿವರಾದ ರಾಮಲಿಂಗರೆಡ್ಡಿರವರ ಅಧ್ಯಕ್ಷತೆಯಲ್ಲಿ ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ರಾಚಪ್ಪ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಡಿವಿಜನಲ್ ಜನರಲ್ ಮ್ಯಾನೇಜರ್ ಮನೋಜಕುಮಾರ ಟೋಪೋ ಅವರ ಉಪಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ನೌಕರರಿಗೆ ಪ್ರೀಮಿಯಂ ರಹಿತ ವಿಮೆ ರೂ.1.00 ಕೋಟಿಗಳ ಅಪಘಾತ ವಿಮಾ ಹಾಗೂ ಇತರೇ ಸೌಲಭ್ಯಗಳ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಸದರಿ ಯೋಜನೆಯಲ್ಲಿ ನಿಗಮದ ನೌಕರರ ವೇತನ ಖಾತೆಗಳನ್ನು Corporate Salary Package” ಅಡಿಯಲ್ಲಿ ಪ್ರೀಮಿಯಂ ರಹಿತ ಅಪಘಾತ ವಿಮೆ ವೈಯಕ್ತಿಕ ಅಥವಾ ಕರ್ತವ್ಯದ ಮೇಲೆ ಅಪಘಾತದಲ್ಲಿ ನಿಧನರಾದಲ್ಲಿ ರೂ.1.00 ಕೋಟಿ ಹಾಗೂ ಸಹಜ ನಿಧನಕ್ಕೆ ರೂ.6.00 ಲಕ್ಷಗಳ “Term Insurance” ಪಾಲಿಸಿಯೊಂದಿಗೆ ಇತರೇ ಸೌಲಭ್ಯಗಳನ್ನು ಸಹ ಈ ಯೋಜನೆ ಅಡಿಯಲ್ಲಿ ಒದಗಿಸಲಾಗುವದು.
ವ್ಯವಸ್ಥಾಪಕ ನಿರ್ದೇಶಕರು ಕ.ಕ.ರ.ಸಾ.ನಿಗಮ ಮಾತನಾಡಿ, ನಿಗಮವು ನೌಕರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಅಲ್ಲದೇ ನಿಗಮದಲ್ಲಿ 13150 ನೌಕರರು ಎಸ್.ಬಿ.ಐ. ಬ್ಯಾಂಕಿನಲ್ಲಿ ವೇತನ ಖಾತೆಯನ್ನು ಹೊಂದಿರುವುದರಿಂದ ಪ್ರೀಮಿಯಂ ರಹಿತ ಅಪಘಾತ ವಿಮೆ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆಂದು ತಿಳಿಸುತ್ತಾ ಪ್ರಸ್ತುತ ನಿಗಮ ಮತ್ತು ಬ್ಯಾಂಕಿನ ನಡುವೆ ಇರುವ ಸಹಕಾರ ಇದೇ ರೀತಿಯಾಗಿ ಮುಂದುವರೆಯಲೆಂದು ತಿಳಿಸಿದರು.
ಅಪಘಾತದಲ್ಲಿ ನಿಧನರಾದ ನೌಕರರ ಅವಲಂಬಿತರಿಗೆ ಆದ್ಯತೆಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥಪಡಿಸಿ ಪರಿಹಾರ ಮೊತ್ತವನ್ನು ನಾಮನಿರ್ದೇಶಿತರಿಗೆ ಒದಗಿಸಲು ಮಾನ್ಯ ಸಚಿವರು ತಿಳಿಸಿದರು.
ಈ ವೇಳೆ ಕ.ರಾ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ಭಾ.ಆ.ಸೇ ಹಾಗೂ ಎಸ್.ಬಿ.ಐ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ವಿಜಯ್ ಕೆ ಟಿ, ಎ ಎಸ್ ಎಂ, ದೇವಕಿನಂದನ್, ಎ ಎಸ್ ಎಂ, ಸಂಜಯ್ ಕುಮಾರ್, ಎ ಎಸ್ ಎಂ, ಅಂಕಿತ್ ಸಾಹು, ಸಿ ಎಂ ಮತ್ತು ಕ.ಕ.ರಾ.ಸಾ.ನಿಗಮದ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
BREAKING NEWS: ತುಮಕೂರಲ್ಲಿ ಆಯಿಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ದುರ್ಮರಣ
ನಿಮ್ಮ ಮನೆಯಲ್ಲಿ ಜಿರಳೆ, ಹಲ್ಲಿ, ಇರುವೆಗಳ ಕಾಟವೇ? ಜಸ್ಟ್ ಹೀಗೆ ಮಾಡಿ, ನಿರ್ಮೂಲನೆ ಗ್ಯಾರಂಟಿ!