Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣ : ಕೋರ್ಟ್ ಗೆ ಹಾಜರಾಗಿ ಸಾಕ್ಷ್ಯ ಹೇಳಿಕೆ ದಾಖಲಿಸಿದ ನಟಿ ರಮ್ಯಾ!

10/03/2026 2:27 PM

ಕೈಗಾರಿಕಾ ಬೆಳವಣಿಗೆಗೆ ಇಂಬು ನೀಡಲು ಜಂಟಿ ಸಮಾಲೋಚನಾ ಸಮಿತಿ ರಚನೆ: ಸಚಿವ ಎಂ ಬಿ ಪಾಟೀಲ

10/03/2026 2:21 PM

BREAKING : ಚಾಮರಾಜನಗರದಲ್ಲಿ ಸಿಲಿಂಡರ್ ಸ್ಪೋಟ : ಇಬ್ಬರಿಗೆ ಗಂಭೀರ ಗಾಯ!

10/03/2026 1:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ‘KKRTC ನೌಕರ’ರಿಗೆ ಗುಡ್ ನ್ಯೂಸ್: ‘1 ಕೋಟಿ ವಿಮಾ ಯೋಜನೆ’ಗೆ ಬ್ಯಾಂಕ್ ಜೊತೆಗೆ ಸಚಿವ ರಾಮಲಿಂಗಾರೆಡ್ಡಿ ಒಡಂಬಡಿಕೆ
KARNATAKA

GOOD NEWS: ‘KKRTC ನೌಕರ’ರಿಗೆ ಗುಡ್ ನ್ಯೂಸ್: ‘1 ಕೋಟಿ ವಿಮಾ ಯೋಜನೆ’ಗೆ ಬ್ಯಾಂಕ್ ಜೊತೆಗೆ ಸಚಿವ ರಾಮಲಿಂಗಾರೆಡ್ಡಿ ಒಡಂಬಡಿಕೆ

By kannadanewsnow0903/12/2024 5:47 PM

ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ 1 ಕೋಟಿ ಅಪಘಾತ ವಿಮಾ ಯೋಜನೆ ಜಾರಿಗಾಗಿ ಬ್ಯಾಂಕ್ ನೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಒಡಂಬಡಿಕೆ ಮಾಡಿಕೊಂಡರು.

ದಿನಾಂಕ:03-12-2024 ರಂದು ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಮತ್ತು ಮುಜರಾಯಿ ಖಾತೆಯ ಸಚಿವರಾದ ರಾಮಲಿಂಗಾರೆಡ್ಡಿರವರ ಅಧ್ಯಕ್ಷತೆಯಲ್ಲಿ ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ರಾಚಪ್ಪ ಮತ್ತು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿಜಯಕುಮಾರ್ ಅವರು ಒಡಂಬಡಿಕೆ ವಿನಿಮಯ ಸಾರಿಗೆ ಸಚಿವರ ಸಮ್ಮುಖದಲ್ಲಿ ಮಾಡಿಕೊಳ್ಳಲಾಯಿತು.

ಸದರಿ ಒಡಂಬಡಿಕೆಯಲ್ಲಿ ನಿಗಮದ ನೌಕರರ ವೇತನ ಖಾತೆಗಳನ್ನು ಕೆನರಾ ಬ್ಯಾಂಕಿನ “ಪೇ-ರೋಲ್ ಪ್ಯಾಕೇಜ್ ಸ್ಕೀಮ್” ಅಡಿಯಲ್ಲಿ ತೆರೆದು ಸದರಿ ವಿಮಾ ಸೌಲಭ್ಯವನ್ನು ಎಲ್ಲಾ ನೌಕರರು ಶುಲ್ಕ ರಹಿತವಾಗಿ ಪಡೆಯಬಹುದಾಗಿರುತ್ತದೆ.

ಸಚಿವ ರಾಮಲಿಂಗಾರೆಡ್ಡಿ ಅವರು ನಿಗಮದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತದಿಂದಾಗಿ ಆಗುತ್ತಿರುವ ಸಾವು-ನೋವುಗಳ ಪ್ರಮಾಣವನ್ನು ಗಮನಿಸಿ,ನಿಗಮವು ನೌಕರರ ವೈಯಕ್ತಿಕ ಮತ್ತು ಕರ್ತವ್ಯ ನಿರತ ಸಮಯದಲ್ಲಿ ಅಪಘಾತದಿಂದಾಗಿ ನೌಕರರು ನಿಧನರಾದಲ್ಲಿ ರೂ.1.00ಕೋಟಿ ಗಳ ಅಪಘಾತ ವಿಮೆಯ ಪರಿಹಾರ ಮೊತ್ತವನ್ನು ಹಾಗೂ ಡೆಬೀಟ್ ಕಾರ್ಡ ಹೊಂದಿದಲ್ಲಿ ರೂ.6.00ಲಕ್ಷ ದಿಂದ ರೂ.14.00ಲಕ್ಷ ಹಾಗೂ ಪ್ರೀಮಿಯಂ ರಹಿತ ರೂ.1.00ಲಕ್ಷ ದಿಂದ ರೂ.6.00 ಲಕ್ಷಗಳವರೆಗೆ ಉಚಿತ “Term Insurance” ಪಾಲಿಸಿಯನ್ನು ನಾಮನಿರ್ದೇಶಿತರಿಗೆ ವಿತರಿಸಲಾಗುವುದುವೆಂದು ತಿಳಿಸಿದರು.

ಅಪಘಾತದಿಂದಾಗಿ ಅಂಗನ್ಯೂನ್ಯತೆ ಉಂಟಾದಲ್ಲಿ ಗಣನೀಯ ಮೊತ್ತದಷ್ಟು ಪರಿಹಾರ ಮೊತ್ತವನ್ನು ನೌಕರರಿಗೆ ದೊರಕಿಸಿಕೊಡುವ ಯೋಜನೆಯನ್ನು ರೂಪಿಸಿರುವುದಕ್ಕೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.

ಕ.ಕ.ರ.ಸಾ.ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ, ವಿತವ್ಯಯ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ, ನೌಕರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿರುತ್ತದೆ. ನಿಗಮದಲ್ಲಿ ಈಗಾಗಲೇ ಎಸ್.ಬಿ.ಐ ಬ್ಯಾಂಕಿನಲ್ಲಿ, ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನೌಕರರು ಅಪಘಾತ ವಿಮೆಗೆ ಒಳಪಟ್ಟಿರುತ್ತಾರೆ.

ಸದರಿ ಬ್ಯಾಂಕುಗಳನ್ನು ಹೊರತುಪಡಿಸಿ ಕೆನರಾ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ಸುಮಾರು 3000 ನೌಕರರಿಗೂ ಕೂಡ ಅಪಘಾತ ವಿಮೆಯ ಸೌಲಭ್ಯವನ್ನು ವಿಸ್ತರಿಸುವುದು ಅವಶ್ಯಕತೆ ಇರುವುದನ್ನು ಮನಗಂಡು ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಗಮದ ನೌಕರರಿಗೆ ಅಪಘಾತ ವಿಮೆ ಸೌಲಭ್ಯವನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು. ಅಪಘಾತ ಹೊರತುಪಡಿಸಿ, ಇತರೇ ನೈರ್ಸಗಿಕ ಸಾವುಗಳಿಗೆ ಕೆನರಾ ಬ್ಯಾಂಕಿನವರು ಪ್ರೀಮಿಯಂ ರಹಿತ ರೂ.6.00 ಲಕ್ಷಗಳವರೆಗೆ ಉಚಿತ “Term Insurance” ಪಾಲಿಸಿಯನ್ನು ನೀಡುತ್ತಾರೆ ಅಲ್ಲದೆ ನೌಕರರ ಮಕ್ಕಳ ವಿಧ್ಯಾಬ್ಯಾಸ, ಗೃಹ ಸಾಲ ಹಾಗೂ ವೈಯಕ್ತಿಕ ಮತ್ತು ವಾಹನ ಸಾಲಗಳಲ್ಲಿ ವಿಶೇಷ ಬಡ್ಡಿ ದರವನ್ನು ನೀಡುತ್ತಾರೆಂದು ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರವರು ವಿವರಿಸಿದರು.

ಸದರಿ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಮತ್ತು ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

BIG NEWS: ಡಿ.9ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ: ಹೀಗಿದೆ ಸಿಎಂ, ಡಿಸಿಎಂ, ಸಚಿವರ ಕೊಠಡಿ ಸಂಖ್ಯೆ

BREAKING: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ

Share. Facebook Twitter LinkedIn WhatsApp Email

Related Posts

BREAKING : ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣ : ಕೋರ್ಟ್ ಗೆ ಹಾಜರಾಗಿ ಸಾಕ್ಷ್ಯ ಹೇಳಿಕೆ ದಾಖಲಿಸಿದ ನಟಿ ರಮ್ಯಾ!

10/03/2026 2:27 PM1 Min Read

ಕೈಗಾರಿಕಾ ಬೆಳವಣಿಗೆಗೆ ಇಂಬು ನೀಡಲು ಜಂಟಿ ಸಮಾಲೋಚನಾ ಸಮಿತಿ ರಚನೆ: ಸಚಿವ ಎಂ ಬಿ ಪಾಟೀಲ

10/03/2026 2:21 PM2 Mins Read

BREAKING : ಚಾಮರಾಜನಗರದಲ್ಲಿ ಸಿಲಿಂಡರ್ ಸ್ಪೋಟ : ಇಬ್ಬರಿಗೆ ಗಂಭೀರ ಗಾಯ!

10/03/2026 1:43 PM1 Min Read
Recent News

BREAKING : ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣ : ಕೋರ್ಟ್ ಗೆ ಹಾಜರಾಗಿ ಸಾಕ್ಷ್ಯ ಹೇಳಿಕೆ ದಾಖಲಿಸಿದ ನಟಿ ರಮ್ಯಾ!

10/03/2026 2:27 PM

ಕೈಗಾರಿಕಾ ಬೆಳವಣಿಗೆಗೆ ಇಂಬು ನೀಡಲು ಜಂಟಿ ಸಮಾಲೋಚನಾ ಸಮಿತಿ ರಚನೆ: ಸಚಿವ ಎಂ ಬಿ ಪಾಟೀಲ

10/03/2026 2:21 PM

BREAKING : ಚಾಮರಾಜನಗರದಲ್ಲಿ ಸಿಲಿಂಡರ್ ಸ್ಪೋಟ : ಇಬ್ಬರಿಗೆ ಗಂಭೀರ ಗಾಯ!

10/03/2026 1:43 PM

BIG NEWS : ವರ್ಗಾವಣೆಗೊಂಡ ಶಿಕ್ಷಕರ ಬಿಡುಗಡೆ & ಕರ್ತವ್ಯಕ್ಕೆ ಹಾಜರಾಗಲು ದಿನಾಂಕ ನಿಗದಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ

10/03/2026 1:34 PM
State News
KARNATAKA

BREAKING : ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣ : ಕೋರ್ಟ್ ಗೆ ಹಾಜರಾಗಿ ಸಾಕ್ಷ್ಯ ಹೇಳಿಕೆ ದಾಖಲಿಸಿದ ನಟಿ ರಮ್ಯಾ!

By kannadanewsnow0510/03/2026 2:27 PM KARNATAKA 1 Min Read

ಬೆಂಗಳೂರು : ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಸೈಬರ್ ಕ್ರೈಂ ಠಾಣೆ…

ಕೈಗಾರಿಕಾ ಬೆಳವಣಿಗೆಗೆ ಇಂಬು ನೀಡಲು ಜಂಟಿ ಸಮಾಲೋಚನಾ ಸಮಿತಿ ರಚನೆ: ಸಚಿವ ಎಂ ಬಿ ಪಾಟೀಲ

10/03/2026 2:21 PM

BREAKING : ಚಾಮರಾಜನಗರದಲ್ಲಿ ಸಿಲಿಂಡರ್ ಸ್ಪೋಟ : ಇಬ್ಬರಿಗೆ ಗಂಭೀರ ಗಾಯ!

10/03/2026 1:43 PM

BIG NEWS : ವರ್ಗಾವಣೆಗೊಂಡ ಶಿಕ್ಷಕರ ಬಿಡುಗಡೆ & ಕರ್ತವ್ಯಕ್ಕೆ ಹಾಜರಾಗಲು ದಿನಾಂಕ ನಿಗದಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ

10/03/2026 1:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.