ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಇಂದಿನಿಂದ ಕುಂಭಮೇಳ ಆರಂಭಗೊಂಡಿದೆ. ದೇಶ, ವಿದೇಶಗಳಿಂದ ಕೋಟ್ಯಂತರ ಜನರು ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಕರ್ನಾಟಕದಿಂದಲೂ ಅನೇಕರು ತೆರಳಿದ್ದಾರೆ. ಇಂತಹವರಿಗೆ ಗುಡ್ ನ್ಯೂಸ್ ಎನ್ನುವಂತೆ ಮಹಾ ಕುಂಭಮೇಳದಲ್ಲಿ ನಂದಿನಿ ಹಾಲಿನ ( Nandini Milk ) ಟೀ ಕೂಡ ಲಭ್ಯವಾಗಲಿದೆ.
ಹೌದು ಇದಕ್ಕಾಗಿ ಕೆಎಂಎಫ್ ಉತ್ತರ ಪ್ರದೇಶದ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಪ್ರಯಾಗರಾಜ್ ನ ಮಹಾ ಕುಂಭಮೇಳದಲ್ಲಿ ಚಹಾ ವಿತರಿಸಲು ಚಾಯ್ ಪಾಯಿಂಟ್ ತೆರೆಯುತ್ತಿದೆ. ಕುಂಭಮೇಳದಾಧ್ಯಂತ 10 ನಂದಿನಿ ಹಾಲಿನ ಚಾಯ್ ಪಾಯಿಂಟ್ ಮಳಿಗೆಯನ್ನು ಸ್ಥಾಪಿಸಲಿದೆ. ಈ ಬೂತ್ ಗಳಿಂದ ಸುಮಾರು 1 ಕೋಟಿ ಕಪ್ ಚಹಾ ವಿತರಿಸುವಂತ ಗುರಿಯನ್ನು ಕೆಎಂಎಫ್ ಹೊಂದಿದೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿನ ಮಹಾ ಕುಂಭಮೇಳದಲ್ಲಿ ಸವಿಯುವ ಪ್ರತೀ ಕಪ್ ಚಾಹ ಕೂಡ ನಂದಿನಿಯ ಶ್ರೀಮಂತ ಹಾಗೂ ಉತ್ತಮ ಗುಣಮಟ್ಟದ ಹಾಲಿನಿಂದ ತಯಾರಿಸಲಾಗುತ್ತದೆ. ಚಾಹ ಪ್ರಿಯರಿಗೆ ಸಂತೋಷದ ಅನುಭವ ನೀಡಲಿದೆ ಎಂದು ಪ್ರಕಟಣೆಯಲ್ಲಿ ಕೆಎಂಎಫ್ ಹೇಳಿದೆ.
ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ
BIG NEWS: ಬೆಂಗಳೂರಲ್ಲಿ ಅನಧಿಕೃತ ಜಾಹೀರಾತು ಅಳವಡಿಸುವವರ ಮೇಲೆ ‘FIR’ ದಾಖಲಿಸಿ: ತುಷಾರ್ ಗಿರಿನಾಥ್ ಖಡಕ್ ಸೂಚನೆ








