Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈಲು ಪ್ರಯಾಣಿಕರ ಗಮನಕ್ಕೆ: ಎಷ್ಟು ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದು? ಇಲ್ಲಿದೆ ಹೊಸ ನಿಯಮ!

ವಕೀಲರ ಉಡುಪಿನಲ್ಲಿ ಕೋರ್ಟ್‌ಗೆ ಬಂದ ಮಮತಾ ಬ್ಯಾನರ್ಜಿ: ದೀದಿಯ ‘ಬಾರ್ ಕೌನ್ಸಿಲ್’ ಸದಸ್ಯತ್ವದ ಬಗ್ಗೆ ಬಿಬಿಸಿಐ ಪ್ರಶ್ನೆ!

1947ರಲ್ಲಿ 79 ರೂಪಾಯಿ, 2026ರಲ್ಲಿ 1.6 ಲಕ್ಷ : ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯ ಅಚ್ಚರಿಯ ಹಾದಿ | Gold price in India

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘ಪತ್ರಕರ್ತ’ರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್: ‘ನಿವೇಶನ, ಮನೆ ಹಂಚಿಕೆ’ಯಲ್ಲಿ ಮೀಸಲು
KARNATAKA

ರಾಜ್ಯದ ‘ಪತ್ರಕರ್ತ’ರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್: ‘ನಿವೇಶನ, ಮನೆ ಹಂಚಿಕೆ’ಯಲ್ಲಿ ಮೀಸಲು

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ನಿವೇಶನ ಮತ್ತು ಮನೆ ಹಂಚಿಕೆ ಸಂದರ್ಭದಲ್ಲಿ ಪತ್ರಕರ್ತರಿಗೆ ಮೀಸಲು ನೀಡುವ ನಿಟ್ಟಿನಲ್ಲಿ ಕೂಡಲೇ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಮಂಡಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು, ಬಿಡಿಎ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಮನೆ ಹಂಚಿಕೆ ಸಂದರ್ಭದಲ್ಲಿ ಪತ್ರಕರ್ತರಿಗೆ ಶೇ.5ರಷ್ಟು ಮೀಸಲು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಸಮಾಲೋಚನೆ ನಡೆಸಿದ ಡಿಸಿಎಂ, ಕಾನೂನು ತೊಡಕುಗಳು ಏನೇನು ಇದೆ? ಯಾವ ರೀತಿಯಲ್ಲಿ ಪತ್ರಕರ್ತರಿಗೆ ಸಹಾಯ ಮಾಡಬಹುದು ಎಂದು ಚರ್ಚೆ ನಡೆಸಿದರು.

ಶೇ.5 ರಿಯಾಯಿತಿ ಕೊಡುವುದು ಕಷ್ಟವಾಗಬಹುದು. ಆದರೆ, ಕನಿಷ್ಠ ಶೇ.1 ರಿಂದ ಶೇ.2ರಷ್ಟು ರಿಯಾಯಿತಿ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಬಗ್ಗೆ ಶೀಘ್ರವೇ ಆದೇಶವನ್ನು ಹೊರಡಿಸಲು ಅಗತ್ಯವಿರುವ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಅಪರ ಮುಖ್ಯಕಾರ್ಯದರ್ಶಿ ಮತ್ತು ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್, ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್, ಡಿಸಿಎಂ ವಿಶೇಷಾಧಿಕಾರಿ ರಾಜೇಂದ್ರಪ್ರಸಾದ್ ಮತ್ತಿತರರು ಇದ್ದರು.

Share. Facebook Twitter LinkedIn WhatsApp Email

Related Posts

ರೈಲು ಪ್ರಯಾಣಿಕರ ಗಮನಕ್ಕೆ: ಎಷ್ಟು ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದು? ಇಲ್ಲಿದೆ ಹೊಸ ನಿಯಮ!

1 Min Read

BIG NEWS : ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಶೇ.15ರ ಮೀಸಲಾತಿಯಲ್ಲಿ ಹಂಚಿಕೆ : 400 ರೋಸ್ಟರ್ ಬಿಂದು ಪಾಲನೆಗೆ ಸರ್ಕಾರ ಆದೇಶ

1 Min Read

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ :ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ

1 Min Read
Recent News

ರೈಲು ಪ್ರಯಾಣಿಕರ ಗಮನಕ್ಕೆ: ಎಷ್ಟು ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದು? ಇಲ್ಲಿದೆ ಹೊಸ ನಿಯಮ!

ವಕೀಲರ ಉಡುಪಿನಲ್ಲಿ ಕೋರ್ಟ್‌ಗೆ ಬಂದ ಮಮತಾ ಬ್ಯಾನರ್ಜಿ: ದೀದಿಯ ‘ಬಾರ್ ಕೌನ್ಸಿಲ್’ ಸದಸ್ಯತ್ವದ ಬಗ್ಗೆ ಬಿಬಿಸಿಐ ಪ್ರಶ್ನೆ!

1947ರಲ್ಲಿ 79 ರೂಪಾಯಿ, 2026ರಲ್ಲಿ 1.6 ಲಕ್ಷ : ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯ ಅಚ್ಚರಿಯ ಹಾದಿ | Gold price in India

BIG NEWS : ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಶೇ.15ರ ಮೀಸಲಾತಿಯಲ್ಲಿ ಹಂಚಿಕೆ : 400 ರೋಸ್ಟರ್ ಬಿಂದು ಪಾಲನೆಗೆ ಸರ್ಕಾರ ಆದೇಶ

State News
KARNATAKA

ರೈಲು ಪ್ರಯಾಣಿಕರ ಗಮನಕ್ಕೆ: ಎಷ್ಟು ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದು? ಇಲ್ಲಿದೆ ಹೊಸ ನಿಯಮ!

By kannadanewsnow57 KARNATAKA 1 Min Read

ನೀವು ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ಟಿಕೆಟ್ ಬುಕಿಂಗ್‌ಗೆ ಸಂಬಂಧಿಸಿದ ಈ ಪ್ರಮುಖ ಬದಲಾವಣೆಯನ್ನು ನೀವು ತಿಳಿದಿರಲೇಬೇಕು. ರೈಲ್ವೆ ಇಲಾಖೆಯು…

BIG NEWS : ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಶೇ.15ರ ಮೀಸಲಾತಿಯಲ್ಲಿ ಹಂಚಿಕೆ : 400 ರೋಸ್ಟರ್ ಬಿಂದು ಪಾಲನೆಗೆ ಸರ್ಕಾರ ಆದೇಶ

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ :ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ

ರಾಜ್ಯ ಸರ್ಕಾರದಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಪೊಲೀಸ್ ಇಲಾಖೆಯಲ್ಲಿ 8,176 ಹುದ್ದೆಗಳ ಭರ್ತಿಗೆ ಚಾಲನೆ | Police Recruitment

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.