ನವದೆಹಲಿ: ದೇಶದ ಬೃಹತ್ ಬ್ಯಾಂಕುಗಳಲ್ಲಿ ಒಂದಾಗಿರುವಂತ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು, ಈ ವರ್ಷ ತನ್ನ ಬ್ಯಾಂಕಿನಲ್ಲಿ ಖಾರಿ ಇರುವಂತ 50,000 ಹುದ್ದೆಗಳನ್ನು ಈ ವರ್ಷ ಭರ್ತಿ ಮಾಡಿಕೊಳ್ಳಲಿದೆ.
ಹೌದು ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 50,000 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಂತ ನಿರ್ಧಾರವನ್ನು ಎಸ್ ಬಿ ಐ ಬಂದಿದೆ. ಈ ನೇಮಕಾತಿಯಲ್ಲಿ 21,000 ಅಧಿಕಾರಿಗಳ ಹುದ್ದೆಯಾಗಿದ್ದರೇ, ಇನ್ನುಳಿದಂತೆ ಕ್ಲರ್ಕ್ ಸೇರಿ ಇತರೆ ಹುದ್ದೆಗಳನ್ನು ಭರ್ತಿ ಮಾಡಲಿದೆ.
ಎಸ್ ಬಿ ಐ ಈ ವರ್ಷ ವಿಶೇಷ ಅಧಿಕಾರಿಗಳು ಸೇರಿದಂತೆ 20,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಈಗಾಗಲೇ ಈ ಪ್ರಕ್ರಿಯೆ ಶುರುವಾಗಿದ್ದು, ತನ್ನ ಗ್ರಾಹಕರ ಅನುಭವ ಉತ್ತಮ ಪಡಿಸಲು 505 ಪ್ರೊಬೇಷನರಿ ಅಧಿಕಾರಿ, 13,455 ಕಿರಿಯ ಸಹಾಯಕರನ್ನು ನೇಮಕ ಮಾಡಿಕೊಂಡಿದೆ.
ಇನ್ನೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ವರ್ಷ 5,500ಕ್ಕಿಂತ ಹೆಚ್ಚು ಹುದ್ದೆ ಭರ್ತಿ ಮಾಡಿಕೊಳ್ಳುತ್ತಿದ್ದರೇ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4000 ಸಿಬ್ಬಂದಿಗಳನ್ನು ಈ ವರ್ಷ ನೇಮಕ ಮಾಡಿಕೊಳ್ಳುವುದಾಗಿ ತಿಳಿದು ಬಂದಿದೆ.
ಖರ್ಗೆಗೆ ಖೆಡ್ಡಾ ತೋಡಿದ್ದ ಕಾಂಗ್ರೆಸ್ ಹೈಕಮಾಂಡ್ ಈಗ ಸಿದ್ಧರಾಮಯ್ಯಗೆ ತೋಡಿದೆ: ಛಲವಾದಿ ನಾರಾಯಣಸ್ವಾಮಿ