ಬೆಂಗಳೂರು : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1)ರ ಏಕ ಕಡತ ಮತ್ತು ಕ್ರಮಾಂಕ (2)ರ ಪತ್ರದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2011 ರಲ್ಲಿ ರಚಿಸಲಾಗಿರುತ್ತದೆ. 2011 ರ ನಂತರ ಸರ್ಕಾರದ ಆದೇಶಗಳಲ್ಲಿ ಕಾಲಕಾಲಕ್ಕೆ ಸಂಘದ ವಸತಿ ಶಾಲೆ/ಕಾಲೇಜುಗಳ ಬೋಧಕ/ಬೋಧಕೇತರ ನೇಮಕಾತಿ, ವಿದ್ಯಾರ್ಹತೆ, ಮುಂಬಡ್ತಿ ಹೀಗೆ ಹಲವಾರು ನಿಯಮಗಳಿಗೆ ತಿದ್ದುಪಡಿ ಮಾಡಿ ಸರ್ಕಾರದ ಆದೇಶಗಳನ್ನು ಹೊರಡಿಸಲಾಗಿರುವ ಬಗ್ಗೆ ಹಾಗೂ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2011 ರ ನಿಯಮಗಳು ರಚನೆಯಾದ ನಂತರ ಸರ್ಕಾರದ ಆದೇಶಗಳಲ್ಲಿ ಮಾಡಿರುವ ನೇಮಕಾತಿ ನಿಯಮಗಳ ತಿದ್ದುಪಡಿಗಳು ಹಾಗೂ ಸರ್ಕಾರದ ಆದೇಶಗಳಲ್ಲಿ ಸಂಘದ ಕೇಂದ್ರ ಕಛೇರಿಗೆ ಹಾಗೂ ವಸತಿ ಶಾಲೆಗಳಿಗೆ ಹಲವು ಹುದ್ದೆಗಳು ಮಂಜೂರಾಗಿರುವ ಹುದ್ದೆಗಳನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಸಕಇ 210 ಎಂಡಿಎಸ್ 2021, ದಿನಾಂಕ:14.10.2022 ರಲ್ಲಿ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗಳು 2021 ರಲ್ಲಿ ಸೇರ್ಪಡೆ ಮಾಡಿ ಪರಿಷ್ಕರಿಸಿ ಆದೇಶಿಸಲಾಗಿರುತ್ತದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗಳು 2021 ರನ್ವಯ ಸರ್ಕಾರದ ಆದೇಶ ಸಂಖ್ಯೆ:ಸಕಇ 32 ಮೊದೇಶಾ 2019(1), ದಿನಾಂಕ:08.02.2019 ರಲ್ಲಿ ಭಾರತ ಸಂವಿಧಾನ ಅನುಚ್ಛೇಧ 371(ಜೆ)ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್- ಆರ್ಭಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013 ರನ್ನಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕೇಂದ್ರ ಕಛೇರಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ / ‘ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಶ್ರೀಮತಿ ಇಂದಿರಾಗಾಂದಿ/ ಡಾ||ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಹಾಗೂ 84 ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ/ಕಾಲೇಜುಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ರಾಜ್ಯ ಮಟ್ಟದ ಸ್ಥಳೀಯ ಮತ್ತು ವೃಂದ ಪ್ರಾದೇಶಿಕ ಶೇಕಡಾವಾರು ಹುದ್ದೆಗಳನ್ನು ಮೀಸಲಿರಿಸಿ ದಿನಾಂಕ 22.03.2022 ಪತ್ರದಲ್ಲಿ ಖಾಲಿ ಸ್ಥಳೀಯ ವೃಂದಗಳನ್ನು ರಚಿಸಿ ಅಧಿಸೂಚಿಸಲಾಗಿರುತ್ತದೆ. ಅದರಂತೆ ಇರುವ ಹುದ್ದೆಗಳನ್ನು ಭರ್ತಿ ಮಾಡಲು ದಿನಾಂಕ:07.09.2022 ರ ಪತ್ರದಲ್ಲಿ ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿಗೆ ಕ್ರಮ ಕೈಗೊಂಡು, ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಮೋದನೆಗಾಗಿ ಸಲ್ಲಿಸುವಂತೆ ಸೂಚಿಸಲಾಗಿರುತ್ತದೆ. ಅದರಂತೆ ಮೀಸಲಾತಿವಾರು ಹುದ್ದೆಗಳನ್ನು ನಿಗದಿಪಡಿಸಿ ಮೀಸಲಾತಿಗೆ ಸಂಬಂಧಿಸಿದಂತೆ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರಿಂದ ಧೃಡೀಕರಣ ಪಡೆಯಲು ಕ್ರಮವಹಿಸಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗಳು 2021 ಹಾಗೂ ಹೈದ್ರಾಬಾದ್ ಕರ್ನಾಟಕ ಮೀಸಲಾತಿ ಅಧಿಸೂಚನೆಯಂತ ಸಂಘದ ಅಧೀನದ ವಸತಿ ಶಾಲೆಗಳಲ್ಲಿ ಈಗಾಗಲೇ ಮಂಜೂರಾಗಿ ಖಾಲಿ ಇರುವ ಹಾಗೂ ಕರ್ನಾಟಕ ಲೋಕಾಸೇವಾ ಆಯೋಗದಿಂದ ಹೆಚ್ಚುವರಿ ಆಯ್ಕೆ ಪಟ್ಟಿಗೆ ಸಲ್ಲಿಸಿರುವ ಪ್ರಮಾಣವನ್ನು ಹೊರತುಪಡಿಸಿ, ಉಳಿದ ಈ ಕೆಳಕಂಡ “ಸಿ” ವೃಂದದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ವಿವರ ಈ ಕೆಳಕಂಡಂತಿದೆ.