ಹುಬ್ಬಳ್ಳಿ: ರಾಜ್ಯದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವಂತ 357 ಸರ್ವೇಯರ್ ಸೇರಿದಂತೆ 596 ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಎಲ್ಲೆಲ್ಲಿ ಎಜೇಂಟ್ ಹಾವಳಿ ಇದೆ ಅಂತಾ ನಾವು ಪರಿಶೀಲನೆ ಮಾಡ್ತಾ ಇದ್ದೀವಿ. ಯಾವ ಯಾವ ಅಧಿಕಾರಿಗಳ ಹತ್ರ ಖಡತಾ ಎಷ್ಟು ದಿನಗಳು ಇವೆ ಅನ್ನೋದನ್ನ ತಹಶೀಲ್ದಾರ್ ಗೆ ತಿಳಿಯುವಂತೆ ಮಾಡಿದ್ದೇವೆ. ನಾನು ಇಲ್ಲಿ ಬಂದು ನಿಂತು ಎಜೇಂಟ್ ಹಾವಳಿ ತಪ್ಪಿಸಲು ಆಗಲ್ಲ. ಆದ್ರೆ ಆದಾಗದಂತೆ ಡಿಜಿಟಲೀಕರಣ ಮಾಡ್ತಾ ಇದ್ದಿವಿ ಎಂದರು.
ಸರ್ವೇ ಕೆಲಸ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಕಿ ಇವೆ. ಈಗಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯ ವೇಗ ಹೆಚ್ಚಿಸಲಿದ್ದೇವೆ. 20 ಕೋಟಿ ವೆಚ್ಚ ಮಾಡಿ ಆಧುನಿಕ ಉಪಕರಣ ಕೊಡ್ತಾ ಇದ್ದೀವೆ. 750 ಪರವಾನಿಗಿ ಸರ್ವೇ ಮಾಡುವವರಿಗೆ ಹಂಚಿಕೆ ಮಾಡ್ತಾ ಇದ್ದೀವಿ. 357 ಸರ್ವೇಸ್ ಎಡಿಎಲ್ಆರ್ ರನ್ನು ಪೋಸ್ಟ್ ಭರ್ತಿ ಮಾಡಲು ಅರ್ಜಿ ಕರೀತಾ ಇದ್ದೇವೆ. 596 ಖಾಲಿ ಹುದ್ದೆಗಳಿವೆ, ಸಿಎಂ ಅದನ್ನ ಭರ್ತಿ ಮಾಡಲು ತಿಳಿಸಿದ್ದಾರೆ. ಹೀಗಾಗಿ ಸಿಬ್ಬಂದಿ ಪೋಸ್ಟ್ ಭರ್ತಿ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಗೆ ಮುಂದಾಗಿದ್ದೇವೆ ಎಂದ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಂಗಳೂರಲ್ಲಿ ಫೆ.17 ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ : ಡಿಸಿಎಂ ಡಿಕೆ ಸ್ಪಷ್ಟನೆ
BREAKING: ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ’ರಾಗಿ ಬಿಸಿಸಿಐ ಕಾರ್ಯದರ್ಶಿ ‘ಜಯ್ ಶಾ’ ಮರು ನೇಮಕ