Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾತ್ರಿ ಸರಿಯಾಗಿ ‘ನಿದ್ದೆ’ ಬರ್ತಿಲ್ವಾ.? ಈ ಟೀ ಟ್ರೈ ಮಾಡಿ, ಒತ್ತಡ ಕಡಿಮೆಯಾಗಿ ನೆಮ್ಮದಿಯ ನಿದ್ದೆ ಬರುತ್ತೆ!

01/07/2025 10:11 PM

ಆರೋಗ್ಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ 4636 ವೈದ್ಯರು, ಸಿಬ್ಬಂದಿಗಳ ವರ್ಗಾವಣೆ: ಸಚಿವ ದಿನೇಶ್ ಗುಂಡೂರಾವ್

01/07/2025 9:56 PM

BREAKING : ಟ್ರಂಪ್ ಬೆಂಬಲಿತ ‘ತೆರಿಗೆ ಕಡಿತ, ಖರ್ಚು ಮಸೂದೆ’ಗೆ ‘ಅಮೆರಿಕ ಸೆನೆಟ್’ ಅಂಗೀಕಾರ

01/07/2025 9:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ : ಶೀಘ್ರವೇ 1,000 ಗ್ರಾಮ ಲೆಕ್ಕಿಗರು, 750 ಜನ ಸರ್ವೇಯರ್ ನೇಮಕಾತಿ
KARNATAKA

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ : ಶೀಘ್ರವೇ 1,000 ಗ್ರಾಮ ಲೆಕ್ಕಿಗರು, 750 ಜನ ಸರ್ವೇಯರ್ ನೇಮಕಾತಿ

By kannadanewsnow5716/07/2024 6:01 AM

ಬೆಂಗಳೂರು : ಸರ್ವೇ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿರುವುದು ನಮ್ಮ ಗಮನದಲ್ಲಿದೆ. ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಧಾನಸಭೆ ಪ್ರಶ್ನೋತ್ತರ ಅವಧಿಯ ವೇಳೆ ರಾಯಭಾಗ ಕ್ಷೇತ್ರದ ಬಿಜೆಪಿ ಶಾಸಕ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಅವರು ಸರ್ವೇ ಇಲಾಖೆ ಸಮಸ್ಯೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಸರ್ವೇ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನತಾ ದರ್ಶನ ಕಾರ್ಯಕ್ರಮದಲ್ಲೂ ಸರ್ವೇ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲೂ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಗ್ರಾಮ ಲೆಕ್ಕಿಗರು 1,000 ಹಾಗೂ 750 ಜನ ಸರ್ವೇಯರ್ ಭರ್ತಿ:

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯ ಬಗ್ಗೆ ವಿಧಾನಸಭೆಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು ಹಾಗೂ 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 100ಕ್ಕೂ ಅಧಿಕ ಪರವಾನಗಿ ಹೊಂದಿರುವ ಖಾಸಗಿ ಸರ್ವೇಯರ್‌ ಹಾಗೂ 35 ಎ.ಡಿ.ಎಲ್.ಆರ್ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಮುಂದಿನ 3 ರಿಂದ 6 ತಿಂಗಳ ಒಳಗಾಗಿ ಈ ಎಲ್ಲಾ ಹುದ್ದೆಗಳನ್ನೂ ನ್ಯಾಯಸಮ್ಮತವಾಗಿ ಭರ್ತಿ ಮಾಡುವಂತೆ ಕೆಪಿಎಸ್‌ಸಿ ಗೆ ಸೂಚಿಸಲಾಗಿ ಎಂದು ತಿಳಿಸಿದರು.

ಮುಂದುವರೆದು, “ಸರ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೆ ಸ್ವಾಭಾವಿಕವಾಗಿ ಸರ್ವೇ ಇಲಾಖೆಗೆ ಬಲ ಬರಲಿದೆ. ಈ ಹುದ್ದೆಗಳಲ್ಲದೆ, ಹೆಚ್ಚುವರಿಯಾಗಿ ಹೊಸ ಹುದ್ದೆಗಳ ಸೃಷ್ಟಿಗೂ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಿದ್ದು ಮತ್ತಷ್ಟು ಹುದ್ದೆಗಳನ್ನು ಸೃಷ್ಟಿಸಲು ಸರ್ಕಾರ ಸಿದ್ದವಾಗಿದೆ. ಇದರ ಜೊತೆಗೆ ನಮ್ಮ ಸಿಬ್ಬಂದಿಗಳ ಕೆಲಸದ ವೇಗ ಹೆಚ್ಚಾಗಲು ಮೂರು ಪಟ್ಟು ಸರ್ವೇ ಕೆಲದ ವೇಗ ಪಡೆಯಲು ಆಧುನಿಕ ಉಪಕರಣವಾದ ರೋವರ್‌ ಬಳಸಿ ಸರ್ವೇ ನಡೆಸಲೂ ಸೂಚಿಸಲಾಗಿದೆ. ಈ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಸರ್ವೇ ಇಲಾಖೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದರು.

ಅರಗ ಜ್ಞಾನೇಂದ್ರರ ಪ್ರಶ್ನೆಗೆ ಸಚಿವರ ಖಡಕ್‌ ಉತ್ತರ:

ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರಿಸುತ್ತಿದ್ದ ವೇಳೆ ಮದ್ಯಪ್ರವೇಶಿಸಿದ ಬಿಜೆಪಿ ಶಾಸಕ ಮಾಜಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು, “ಮಲೆನಾಡಿನ ರೈತರ ಸಮಸ್ಯೆ ಬೆಂಗಳೂರಿನಿಂದ ತೇರ್ಗಡೆಯಾಗಿ ಹೋದ ಸರ್ವೇಯರ್ಗೆ ಗೊತ್ತಾಗೋದೆ ಇಲ್ಲ. ಇಷ್ಟಕ್ಕೂ ಅವರು ಬೆಂಗಳೂರಿನಿಂದ ಹೊರಟು ಮಲೆನಾಡಿಗೆ ಬಂದು ತಲುಪುವುದರ ಒಳಗಾಗಿ ಡೆಪ್ಯುಟೇಷನ್ ಮೇಲೆ ಮತ್ತೆ ಬೆಂಗಳೂರಿಗೆ ಹಿಂತಿರುಗುತ್ತಾರೆ ಎಂದು ಆರೋಪಿಸಿದರು.

ಈ ಆರೋಪಕ್ಕೆ ಖಡಕ್ ಆಗಿಯೇ ಉತ್ತರ ಕೊಟ್ಟ ಸಚಿವ ಕೃಷ್ಣ ಬೈರೇಗೌಡ ಅವರು, “ಕಳೆದ ಒಂದು ವರ್ಷದಲ್ಲಿ ನಾನು ವ್ಯಯಕ್ತಿಕವಾಗಿ ಒಂದೇ ಒಂದು ಕೇಸ್ ಕೂಡ ಡೆಪ್ಯುಟೇಶನ್ ಮಾಡಿಲ್ಲ. ಡೆಪ್ಯುಟೇಷನ್ ಎನ್ನುವ ಮಾತೇ ಇಲ್ಲ. ಅಲ್ಲದೆ, ಡೆಪ್ಯಟೇಷನ್ ಮೇಲೆ ಇತರೆಡೆ ಹೋದ ಅಧಿಕಾರಿಗಳನ್ನೂ ಸಹ ಹಿಂದಕ್ಕೆ ವಾಪಸ್ ಕರೆಸಲಾಗಿದೆ” ಎಂದು ಮಾಹಿತಿ ನೀಡಿದರು.

000 Village Accountants 000 ಗ್ರಾಮ ಲೆಕ್ಕಿಗರು 750 surveyors to be recruited soon 750 ಜನ ಸರ್ವೇಯರ್ ನೇಮಕಾತಿ Good news for job seekers: 1 ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಫೆ.26-27ಕ್ಕೆ ರಾಜ್ಯ ಸರ್ಕಾರದಿಂದ 'ಬೃಹತ್ ಉದ್ಯೋಗ ಮೇಳ'
Share. Facebook Twitter LinkedIn WhatsApp Email

Related Posts

ಆರೋಗ್ಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ 4636 ವೈದ್ಯರು, ಸಿಬ್ಬಂದಿಗಳ ವರ್ಗಾವಣೆ: ಸಚಿವ ದಿನೇಶ್ ಗುಂಡೂರಾವ್

01/07/2025 9:56 PM1 Min Read

ಕೃಷಿ ಉಪಕರಣ ತಯಾರಕಾ ಸಂಸ್ಥೆಯಾದ TAFE ಸಂಸ್ಥೆಯು AGCO ಬ್ರ್ಯಾಂಡ್‌ನೊಂದಿಗೆ ಒಪ್ಪಂದಕ್ಕೆ ಸಹಿ

01/07/2025 9:51 PM1 Min Read

ಗಮನಿಸಿ: ಚಿತ್ರದುರ್ಗ-ಚಿಕ್ಕಜಾಜೂರು ನಡುವಿನ ರೈಲು ಸೇವೆಗಳ ಭಾಗಶಃ ರದ್ದು ವಿಸ್ತರಣೆ

01/07/2025 9:46 PM1 Min Read
Recent News

ರಾತ್ರಿ ಸರಿಯಾಗಿ ‘ನಿದ್ದೆ’ ಬರ್ತಿಲ್ವಾ.? ಈ ಟೀ ಟ್ರೈ ಮಾಡಿ, ಒತ್ತಡ ಕಡಿಮೆಯಾಗಿ ನೆಮ್ಮದಿಯ ನಿದ್ದೆ ಬರುತ್ತೆ!

01/07/2025 10:11 PM

ಆರೋಗ್ಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ 4636 ವೈದ್ಯರು, ಸಿಬ್ಬಂದಿಗಳ ವರ್ಗಾವಣೆ: ಸಚಿವ ದಿನೇಶ್ ಗುಂಡೂರಾವ್

01/07/2025 9:56 PM

BREAKING : ಟ್ರಂಪ್ ಬೆಂಬಲಿತ ‘ತೆರಿಗೆ ಕಡಿತ, ಖರ್ಚು ಮಸೂದೆ’ಗೆ ‘ಅಮೆರಿಕ ಸೆನೆಟ್’ ಅಂಗೀಕಾರ

01/07/2025 9:56 PM

ಕೃಷಿ ಉಪಕರಣ ತಯಾರಕಾ ಸಂಸ್ಥೆಯಾದ TAFE ಸಂಸ್ಥೆಯು AGCO ಬ್ರ್ಯಾಂಡ್‌ನೊಂದಿಗೆ ಒಪ್ಪಂದಕ್ಕೆ ಸಹಿ

01/07/2025 9:51 PM
State News
KARNATAKA

ಆರೋಗ್ಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ 4636 ವೈದ್ಯರು, ಸಿಬ್ಬಂದಿಗಳ ವರ್ಗಾವಣೆ: ಸಚಿವ ದಿನೇಶ್ ಗುಂಡೂರಾವ್

By kannadanewsnow0901/07/2025 9:56 PM KARNATAKA 1 Min Read

ಬೆಂಗಳೂರು: ದಶಕದ ಬಳಿಕ ಆರೋಗ್ಯ ಇಲಾಖೆಯಲ್ಲಿ ಪೂರ್ಣಪ್ರಮಾಣದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಯುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಆರೋಗ್ಯ ಸೌಧದಲ್ಲಿ…

ಕೃಷಿ ಉಪಕರಣ ತಯಾರಕಾ ಸಂಸ್ಥೆಯಾದ TAFE ಸಂಸ್ಥೆಯು AGCO ಬ್ರ್ಯಾಂಡ್‌ನೊಂದಿಗೆ ಒಪ್ಪಂದಕ್ಕೆ ಸಹಿ

01/07/2025 9:51 PM

ಗಮನಿಸಿ: ಚಿತ್ರದುರ್ಗ-ಚಿಕ್ಕಜಾಜೂರು ನಡುವಿನ ರೈಲು ಸೇವೆಗಳ ಭಾಗಶಃ ರದ್ದು ವಿಸ್ತರಣೆ

01/07/2025 9:46 PM

ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ

01/07/2025 9:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.