ನವದೆಹಲಿ: ದಿನೇ ದಿನೇ ಚಿನ್ನದ ಬೆಲೆ ಏರಿಕೆಯತ್ತ ಸಾಗಿತ್ತು. ಇದರ ನಡುವೆ ಈ ತಿಂಗಳಲ್ಲಿ ಗರಿಷ್ಠ ದಾಖಲೆ ಸೃಷ್ಠಿಸಿದ್ದ ಚಿನ್ನದ ದರವು ರೂ.5,620 ಇಳಿಕೆಯಾಗಿದೆ. ಹಾಗಾದ್ರೇ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವ ಬಗ್ಗೆ ಮುಂದೆ ಓದಿ.
ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಹಾವು ಏಣಿ ಆಟದ ನಡುವೆಯೂ ಚಿನ್ನದ ಬೆಲೆಯಲ್ಲಿ ರೂ 5,620 ಇಳಿಕೆ ಕಂಡಿದೆ. ಹೀಗಾಗಿ ಶುದ್ಧ ಚಿನ್ನದ ದರವು ರೂ.1,23,300ಕ್ಕೆ ತಲುಪಿದಂತೆ ಆಗಿದೆ. ನವೆಂಬರ್.13ರಂದು ಚಿನ್ನದ ಬೆಲೆಯು ಗರಿಷ್ಠ ರೂ.12,862ರಷ್ಟು ಏರಿಕೆಯಾಗಿತ್ತು. ಆದರೇ ಈಗ 1,23,300ಕ್ಕೆ ಇಳಿದು ಚಿನ್ನದ ಬೆಲೆ ರೂ.5,620 ಕಡಿಮೆಯಾದಂತೆ ಆಗಿದೆ.
ಸೋಮವಾರದ ಚಿನಿವಾರ ಸಂತೆಯ ಮಾರುಕಟ್ಟೆ ದರದಂತೆ 24 ಕ್ಯಾರೆಟ್ ಚಿನ್ನದ ಬೆಲೆಯು ಗ್ರಾಂ ಒಂದಕ್ಕೆ ರೂ.12,497 ರೂಪಾಯಿ ಆಗಿದೆ. ಇಂದು 11 ರೂ ಇಳಿಕೆಯಾಗಿ 10 ಗ್ರಾಂ ಶುದ್ಧ ಚಿನ್ನದ ಬೆಲೆಯು ರೂ.1,24,970ಕ್ಕೆ ತಲುಪಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 110 ರೂಪಾಯಿ ಕಡಿಮೆಯಾದಂತೆ ಆಗಿದೆ.
ಇನ್ನೂ 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ ರೂ.11,454 ಆಗಿದ್ದು, 10 ಗ್ರಾಂಗೆ ರೂ.1,14,550ಕ್ಕೆ ತಲುಪಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯು ರೂ.100 ಇಳಿಕೆಯಾದಂತೆ ಆಗಿದೆ.








