ಬೆಂಗಳೂರು: ದಿನಾಂಕ 19.03.2024, 25.03.2024, 29.03.2024 ಹಾಗೂ 02.04.2024 ಗಳಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ PL-2024 ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬಂದು ಹೋಗುವ ಸಾರ್ವಜನಿಕ ಪ್ರಯಾಣಿಕರಿಗೆ ಹೆಚ್ಚುವರಿ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಕುರಿತಂತೆ ಬಿಎಂಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ದಿನಾಂಕ 19.03.2024, 25.03.2024, 29.03.2024 ಹಾಗೂ 02.04.2024 ಗಳಂದು IPL-2024 ಕ್ರಿಕೆಟ್ ಪಂದ್ಯಾವಳಿಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸದರಿ ಕ್ರಿಕೆಟ್ ಪಂದ್ಯಾವಳಿಗೆ ಬಂದು-ಹೋಗುವ ವೀಕ್ಷಕರಿಗೆ ಬೇಡಿಕೆಗನುಗುಣವಾಗಿ ಬೆಂ.ಮ.ಸಾ.ಸಂಸ್ಥೆಯಿಂದ ವ್ಯವಸ್ಥಿತ ಸಾರಿಗೆಗಳನ್ನು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಬೆಂಗಳೂರು ನಗರದ ವಿವಿಧ ಭಾಗಗಳಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣ ನಡುವೆ ಕಾರ್ಯಾಚರಿಸಲಾಗುವ ಸಾರಿಗೆಗಳ ಮಾರ್ಗದ ವಿವರ ಕೆಳಕಂಡಂತಿದೆ :
ಕ್ರ
ಸಂ. |
ಮಾರ್ಗ
ಸಂಖ್ಯೆ |
ಎಲ್ಲಿಂದ | ಎಲ್ಲಿಗೆ | ಕ್ರ
ಸಂ. |
ಮಾರ್ಗ
ಸಂಖ್ಯೆ |
ಎಲ್ಲಿಂದ | ಎಲ್ಲಿಗೆ |
1. | ಎಸ್.ಬಿ. ಎಸ್-1ಕೆ | ಎಂ ಚಿನ್ನಸ್ವಾಮಿ ಕ್ರೀಡಾಂಗಣ | ಕಾಡುಗೋಡಿ ಬಸ್ ನಿಲ್ದಾಣ (ಹೆಚ್.ಎ.ಎಲ್ ರಸ್ತೆ) | 7. | ಜಿ-7 | ಎಂ ಚಿನ್ನಸ್ವಾಮಿ ಕ್ರೀಡಾಂಗಣ
|
ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ) |
2. | ಎಸ್.ಬಿ. ಎಸ್-13ಕೆ | ಕಾಡುಗೋಡಿ ಬಸ್ ನಿಲ್ದಾಣ (ಹೂಡಿ ರಸ್ತೆ) | 8. | ಜಿ-8 | ನೆಲಮಂಗಲ | ||
3. | ಜಿ-2 | ಸರ್ಜಾಪುರ | 9. | ಜಿ-9 | ಯಲಹಂಕ 5ನೇ ಹಂತ | ||
4. | ಜಿ-3 | ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ) | 10. | ಜಿ-10 | ಆರ್.ಕೆ. ಹೆಗಡೆ ನಗರ (ನಾಗವಾರ, ಟ್ಯಾನರಿ ರಸ್ತೆ) | ||
5. | ಜಿ-4 | ಬನ್ನೇರುಘಟ್ಟ ಮೃಗಾಲಯ | 11. | ಜಿ-11 | ಬಾಗಲೂರು (ಹೆಣ್ಣೂರು ರಸ್ತೆ) | ||
6. | ಜಿ-6 | ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟರ್ಸ್ (ಎಂ.ಸಿ.ಟಿ.ಸಿ-ನಾಯಂಡಹಳ್ಳಿ) | 12. | ಕೆ.ಬಿ.ಎಸ್-12ಹೆಚ್.ಕೆ | ಹೊಸಕೋಟೆ |