ಬೆಂಗಳೂರು : ಅಂತರ್ಜಾತಿ ವಿವಾಹವಾಗುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯ ಸರ್ಕಾರವು ಅಂತರ್ಜಾತಿ ವಿವಾಹವಾಗುವವರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಿದೆ.
ಪರಿಶಿಷ್ಟ ಜಾತಿಯ ಯುವಕ/ಯುವತಿಯರು ಪರಿಶಿಷ್ಟ ಜಾತಿಯ ಉಪ ಜಾತಿಗಳ ಯುವತಿ/ಯುವಕರನ್ನು ವಿವಾಹವಾದಲ್ಲಿ ಒಳ ಪಂಗಡಗಳ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯಡಿ 2 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಅರ್ಹತೆ
ದಂಪತಿಗಳು ಪರಿಶಿಷ್ಟ ಜಾತಿ(SC)ಯ ಬೇರೆ ಬೇರೆ ಉಪಜಾತಿಯವರಾಗಿರಬೇಕು.
ವಯೋಮಿತಿ – ಯುವಕ 21 ರಿಂದ 45 ವರ್ಷ ಹಾಗೂ ಯುವತಿ 18 ರಿಂದ 42 ವರ್ಷ.
ಅಂತರ್ಜಾತಿ ವಿವಾಹ/ವಿಧವಾ ಮರು ವಿವಾಹ ಪ್ರೋತ್ಸಾಹಧನ ಪಡೆದವರು ಇದಕ್ಕೆ ಅರ್ಹರಲ್ಲ
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ :
https://swdservices.karnataka.gov.in/swincentive/Intracaste/IntracasteHaHome.aspx