ಬೆಂಗಳೂರು: ರಾಜ್ಯದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಎಲ್ಲಾ ಪ್ರೌಢ ಶಾಲೆಗಳಿಗೆ ಇಂಟರ್ನೆಟ್ ಒದಗಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. 200 ಕೋಟಿ ರೂ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಶಿಗ್ಗಾಂವಿ, ಹಾನಗಲ್, ಕುಂದಗೋಳದಲ್ಲಿ ಹಳ್ಳ ಹರಿಯುತ್ತದೆ. ಇದನ್ನ ನಿಯಂತ್ರಿಸುವುದಕ್ಕೆ ನೂತನ ಯೋಜನೆಗೆ ಅನುಮತಿಸಲಾಗಿದೆ. ನೀರು ಸದ್ಬಳಕೆ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. 16 ಟಿಎಂಸಿ ನೀರು ಇದರಲ್ಲಿ ವ್ಯರ್ಥವಾಗುತ್ತದೆ. ರೈತರ ದೃಷ್ಟಿಯಿಂದ ಈ ಯೋಜನೆ ತರಲಾಗುತ್ತಿದೆ.
ಪ್ರೌಢಶಾಲೆಗಳಲ್ಲಿ ಇಂಟರ್ ನೆಟ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. 74 ಆದರ್ಶ ವಿದ್ಯಾಲಯಗಳ ಮೇಲ್ದರ್ಜೆಗೇರಿಕೆಗೆ ಸಮ್ಮತಿ ನೀಡಲಾಗಿದೆ.
ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿವಿಲ್ ಸರ್ವೀಸ್ ಕೋಡ್ ಮಾಡಬೇಕು. ಹೈಕೋರ್ಟ್ ಇದನ್ನಹೇಳಿತ್ತು. ಸಿವಿಲ್ ಸರ್ವೀಸ್ ಕೋಡ್ ಬೇಕೇ ಬೇಡವೇ ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗುತ್ತಿದೆ. ಯಾರನ್ನ ನೇಮಿಸಬೇಕೆಂದು ಸಿಎಂಗೆ ಅಧಿಕಾರ ನೀಡಲಾಗಿದೆ.
ಶಿವಮೊಗ್ಗ: ಕುವೆಂಪು ವಿವಿಯಲ್ಲಿ ಮೂರು ದಿನಗಳ ‘ಸಹ್ಯಾದ್ರಿ ಸಡಗರ’ಕ್ಕೆ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಚಾಲನೆ