ಬೆಂಗಳೂರು : 2024-25 ನೇ ಸಾಲಿನ ವರ್ಗಾವಣೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆಯಂತೆ ಕೈಗೊಳ್ಳಲು ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಉಲ್ಲೇಖಿತ ಪ್ರಸ್ತಾವನೆಯನ್ನು ವರಿಶೀಲಿಸಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆಯ ನಿಯಂತ್ರಣ) ಕಾಯ್ದೆ 2011, 2013 ಮತ್ತು 2017 ರ ತಿದ್ದುಪಡಿ ಅಧಿನಿಯಮಗಳನ್ನಯ ಕಲಂ-3 ರಲ್ಲಿನ ಹುದ್ದೆಗಳನ್ನು ಹೊರತುಪಡಿಸಿ, 2024-25ನೇ ಸಾಲಿಗೆ ಆಯುಷ್ ಇಲಾಖೆಯ ಉಳಿದ ಗ್ರೂಪ್ – ಎ. ಬಿ. ಸಿ ಮತ್ತು ಡಿ ಹುದ್ದೆಗಳಿಗೆ ಸಂಬಂಧಿಸಿದಂತೆ ವೃಂದ ಬಲದ ಶೇಕಡಾವಾರು ಮೀರದಂತೆ ಸಮಾಲೋಚನ (Counseling) ಮೂಲಕ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಡಿಸಿ, ವರ್ಗಾವಣಾ ಪ್ರಕ್ರಿಯೆಯನ್ನು ಕೈಗೊಂಡು, ಆಗಸ್ಟ್ 31, 2024ರೊಳಗಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ.