ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಪ್ರತಿ ತಿಂಗಳು ಖಾತೆಗೆ ಜಮಾ ಆಗುವ ಹಣವನ್ನು ಚೆಕ್ ಮಾಡಲು ಸುಲಭ ವಿಧಾನವನ್ನು ಒದಗಿಸಿದೆ.
ಹೌದು, ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿರುವುದನ್ನು ಚೆಕ್ ಮಾಡಲು ಫಲಾನುಭವಿಗಳಿಗೆ ಈಗ ಮತ್ತೊಂದು ಸುಲಭ ವಿಧಾನ ಲಭ್ಯವಾಗಿದೆ. ಪ್ರತಿ ತಿಂಗಳು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿಪಡಿಸಿರುವ ಡಿಬಿಟಿ ಕರ್ನಾಟಕ(DBT Karnataka) ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಫಲಾನುಭವಿ ಬ್ಯಾಂಕ್ ಖಾತೆಗೆ ವರ್ಗಾವಣೆ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.
ಖಾತೆಗೆ ಹಣ ಜಮಾ ಆಗಿರುವುದನ್ನು ತಿಳಿಯಲು ಈ ರೀತಿ ಚೆಕ್ ಮಾಡಿಕೊಳ್ಳಿ
ಮೊದಲಿಗೆ ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿಪಡಿಸಿರುವ ʻDBT Karnatakaʼ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.
ಮೊದಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಧಿಕೃತ DBT Karnataka mobile app ಅನ್ನು ಡೌನ್ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಬೇಕು.
ಅರ್ಜಿದಾರರು ತಮ್ಮ 12 ಅಂಕಿಯ ಆಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ ನಿಮ್ಮ ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ನಮೂದಿಸಬೇಕು.
4 ಅಂಕಿಯ ಪಾಸ್ವರ್ಡ್ ರಚನೆ ಮಾಡಿ ನಮೂದಿಸಬೇಕು.
ಬಳಿಕಕೊನೆಯ ಕಾಲಂ ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ “ಸರಿ” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.
“ಲಾಗಿನ್/Login” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ “ಪಾವತಿ ಸ್ಥಿತಿ/Payment status” ಬಟನ್ ಮೇಲೆ ಕ್ಲಿಕ್ ಮಾಡಿ “ಗೃಹಲಕ್ಷ್ಮಿ” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಯಡಿ ಪ್ರತಿ ತಿಂಗಳು ಯಾವ ಯಾವ ದಿನಾಂಕ ದಂದು ಹಣ ಜಮಾ ಅಗಿದೆ. ಯು.ಟಿ.ಆರ್ ನಂಬರ್, ಬ್ಯಾಂಕಿನ ಹೆಸರು, ಬ್ಯಾಂಕ್ ಅಕೌಂಟಿನ ಕೊನೆಯ ನಾಲ್ಕು ಸಂಖ್ಯೆ, ಬ್ಯಾಂಕ್ ಖಾತೆದಾರರ ಹೆಸರಿನ ವಿವರ ತೋರಿಸುತ್ತದೆ.