ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯ್ತಿ ವಾಟರ್ ಆಪರೇಟರ್ ಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಆಪರೇಟರ್ ಗಳಿಗೆ ವಾರದ ರಜೆಯನ್ನು ನಿಗದಿಪಡಿಸಿದೆ.
ಈ ಕುರಿತಂತೆ ಆದೇಶ ಹೊರಡಿಸಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು) ನಿಯಮಗಳನ್ನು ರಚಿಸಲಾಗಿದ್ದು, ಸದರಿ ನಿಯಮಗಳ ಕ್ರ.ಸಂ.7 (i) ರಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ರಜೆ ನೀಡುವ ಬಗ್ಗೆ ವಿವರಿಸಲಾಗಿರುತ್ತದೆ. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಆಪರೇಟರ್ ಗಳಿಗೆ ವಾರದಲ್ಲಿ ಒಂದು ದಿನ ರಜೆಯನ್ನು ನಿಗದಿಪಡಿಸುವಂತೆ ಕೋರಿ ಉಲ್ಲೇಖ (2) ರಲ್ಲಿ ಸಲ್ಲಿಸಿದ ಮನವಿಯನ್ನು ಮಾನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉಲ್ಲೇಖ (3)ರ ಸಭೆಯಲ್ಲಿ ಪರಿಶೀಲಿಸಿದ್ದು, ಉಲ್ಲೇಖ(4)ರ ಆದೇಶದಂತೆ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಆಪರೇಟರ್‌ಗಳಿಗೆ ಕೆಳಕಂಡ ಷರತ್ತಿಗೊಳಪಟ್ಟು ವಾರದಲ್ಲಿ ಒಂದು ದಿನ ರಜೆಯನ್ನು ನಿಗದಿಪಡಿಸಲು ಕ್ರಮವಹಿಸುವಂತೆ ಸೂಚಿಸಿದೆ.
1. ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ನಿರ್ವಹಣೆಗೆ ಅನಾನುಕೂಲವಾಗದಂತ, ಆವರ್ತನ ಮಾದರಿಯಲ್ಲಿ (Rotation basis ವಾರದ ರಜೆಯನ್ನು ನಿಗದಿಪಡಿಸುವುದು.
2. ವಾರದ ರಜೆಯನ್ನು ನೀಡುವ ಸಂದರ್ಭದಲ್ಲಿ ರಜೆ ಪಡೆಯುವ ವಾಟರ್ ಆಪರೇಟರ್ ರವರು ನಿರ್ವಹಿಸುತ್ತಿದ್ದ ಪಕಾರ್ಯವನ್ನು ಗ್ರಾಮ ಪಂಚಾಯತಿಯ ಮತ್ತೊಬ್ಬ ವಾಟರ್ ಆಪರೇಟರ್ ಮುಖೇನ ನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು, 3. ವಾರದ ರಜೆಯನ್ನು ವಾಟರ್ ಆಪರೇಟರ್‌ಗಳು ಅವರ ಹಕ್ಕು ಎಂದು ಪರಿಗಣಿಸುವಂತಿಲ್ಲ ಹಾಗೂ ವಾರದ ನಿಗದಿತ ರಜೆಯನ್ನು ಪಡೆಯದ ಮುಂದಿನ ವಾರಕ್ಕೆ ಹಿಂಬಾಕಿ ಎಂದು ಭಾವಿಸಿ ಸತತವಾಗಿ ರಜೆ ಪಡಯಲು ಅವಕಾಶವಿರುವುದಿಲ್ಲ.
4. ಪ್ರಕೃತಿ ವಿಕೋಪ, ಸ್ಥಳೀಯ ಜಾತ್ರೆ ಸಭೆ, ಸಮಾರಂಭಗಳು, ಮತ್ತಿತರ ವಿಶೇಷ ಸಂದರ್ಭಗಳಲ್ಲಿ ವಾರದ ರಜೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸುವಂತಿಲ್ಲ. ಅದಾಗ್ಯೂ, ಇಂತಹ ಸಂದರ್ಭಗಳಲ್ಲಿ ರಜೆ ಮಂಜೂರು ಮಾಡುವುದು ಆಯಾ ಗ್ರಾಮ ಪಂಚಾಯತಿಯ ವಿವೇಚನೆಗೆ ಒಳಪಟ್ಟಿರುತ್ತದೆ ಎಂಬುದಾಗಿ ತಿಳಿಸಿದೆ.ಕಕ
BIG NEWS : ‘ಗೃಹಲಕ್ಷ್ಮಿ’ ಯೋಜನೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ರಾಜ್ಯ ಸರ್ಕಾರ