ನವದೆಹಲಿ : ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಯಾಕಂದ್ರೆ, ಕೇಂದ್ರವು ಮಾರ್ಚ್ 2024ರಲ್ಲಿ ತುಟ್ಟಿಭತ್ಯೆಯಲ್ಲಿ (DA) ಶೇಕಡಾ 4ರಷ್ಟು ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
4% ಡಿಎ ಹೆಚ್ಚಳದ ನಂತರ, ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವು ಶೇಕಡಾ 50ಕ್ಕೆ ಹೆಚ್ಚಾಗುತ್ತದೆ.
ಅಖಿಲ ಭಾರತ CPI-IW ದತ್ತಾಂಶದ ಆಧಾರದ ಮೇಲೆ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (DR) ಹೆಚ್ಚಳದ ಪ್ರಮಾಣವನ್ನ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.
ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ (CPI-IW) 12 ತಿಂಗಳ ಸರಾಸರಿ 392.83 ರಷ್ಟಿದೆ. ಇದರ ಪ್ರಕಾರ, ಡಿಎ ಮೂಲ ವೇತನದ ಶೇಕಡಾ 50.26 ಕ್ಕೆ ಬರುತ್ತಿದೆ.
ಅಂದ್ಹಾಗೆ, ಸರ್ಕಾರಿ ನೌಕರರಿಗೆ ಡಿಎ ನೀಡಲಾಗುತ್ತದೆ ಮತ್ತು ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಡಿಎ ಮತ್ತು ಡಿಆರ್’ನ್ನ ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಅದು ಕೂಡ ಜನವರಿ ಮತ್ತು ಜುಲೈನಲ್ಲಿ ನಡುವೆ.
“ಇದ್ಯಾವ ಯಾವ ರೀತಿಯ ಭಾಷೆ.?” ರಾಹುಲ್ ಗಾಂಧಿ ‘ಕಾಶಿ ಯುವಕರು ಕುಡುಕರು’ ಹೇಳಿಕೆಗೆ ‘ಪ್ರಧಾನಿ ಮೋದಿ’ ವಾಗ್ದಾಳಿ
ಬೆಂಗಳೂರಲ್ಲಿ ಫೆ. 29ರಿಂದ ‘ಸರಸ್ ಮೇಳ’ ಆಯೋಜನೆ: ಮಹಿಳೆಯರ ಉತ್ಪನ್ನಗಳ ಪ್ರದರ್ಶನ, ಮಾರಾಟ