Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಜೈ ಬಾಂಗ್ಲಾ’ ಘೋಷಣೆ ಕೂಗಿದ್ದ ಮಹಿಳೆಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು !

18/03/2026 8:23 AM

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಉಚಿತ ಶೂ, ಸಾಕ್ಸ್ ವಿತರಣೆ !

18/03/2026 8:14 AM

ಭಾರತಕ್ಕೆ ಹಸ್ತಾಂತರ ತಡೆಯಲು ನೀರವ್ ಮೋದಿ ಕೊನೆಯ ಯತ್ನ: ಲಂಡನ್ ಹೈಕೋರ್ಟ್ ಮೆಟ್ಟಿಲೇರಿದ ವಜ್ರದ ವ್ಯಾಪಾರಿ

18/03/2026 8:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಉಚಿತ ಶೂ, ಸಾಕ್ಸ್ ವಿತರಣೆ !
KARNATAKA

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಉಚಿತ ಶೂ, ಸಾಕ್ಸ್ ವಿತರಣೆ !

By kannadanewsnow5718/03/2026 8:14 AM

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ವಿದ್ಯಾ ವಿಕಾಸ ಯೋಜನೆಯಡಿ 2026-27ನೇ ಸಾಲಿನಲ್ಲಿ ರಾಜ್ಯದಾದ್ಯಂತ ಇರುವ ಸುಮಾರು 36.56 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ಗಳನ್ನು ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಈ ಯೋಜನೆಗಾಗಿ ಸರ್ಕಾರ ಒಟ್ಟು ₹104 ಕೋಟಿ ವೆಚ್ಚ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ. ಪ್ರತಿ ವಿದ್ಯಾರ್ಥಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡಲಾಗುವುದು.

ಗುಣಮಟ್ಟಕ್ಕೆ ಆದ್ಯತೆ

ಉತ್ತಮ ಗುಣಮಟ್ಟದ ಕಪ್ಪು ಬಣ್ಣದ ಶೂ ಹಾಗೂ ಬಿಳಿ ಬಣ್ಣದ ಸಾಕ್ಸ್ ಖರೀದಿಸಲು ಪಾರದರ್ಶಕವಾಗಿ ಟೆಂಡರ್ ಕರೆಯಲು ಸೂಚಿಸಲಾಗಿದೆ. ಗುಣಮಟ್ಟದ ಮೇಲ್ವಿಚಾರಣೆಗಾಗಿ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಲಾಗುವುದು.

ಅಧಿಕ ಮಳೆಯಾಗುವ ಜಿಲ್ಲೆಗಳಾದ ಉತ್ತರ ಕನ್ನಡ, ಶಿರಸಿ, ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಶೈಕ್ಷಣಿಕ ಜಿಲ್ಲೆಗಳಲ್ಲಿ ಮಕ್ಕಳಿಗೆ ಶೂ ನೀಡಲಾಗುವುದಿಲ್ಲ. ಈ ಭಾಗದ ಎಸ್ಡಿಎಂಸಿಗಳು ಶೂಗಳ ಬದಲಿಗೆ ಮಳೆಗೆ ಪೂರಕವಾದ ಪಾದರಕ್ಷೆಗಳನ್ನು (Sandals/Footwear) ನೀಡುವಂತೆ ಬೇಡಿಕೆ ಇಟ್ಟಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕಟ್ಟುನಿಟ್ಟಿನ ಸೂಚನೆ
ಹಿಂದಿನ ವರ್ಷಗಳಲ್ಲಿ ಗುಣಮಟ್ಟದ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿತರಣೆ ಮಾಡಬೇಕು ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

free shoes and socks will be distributed at the beginning of the academic year! Good news for government school children in the state: This time
Share. Facebook Twitter LinkedIn WhatsApp Email

Related Posts

BREAKING : ‘ಜೈ ಬಾಂಗ್ಲಾ’ ಘೋಷಣೆ ಕೂಗಿದ್ದ ಮಹಿಳೆಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು !

18/03/2026 8:23 AM1 Min Read

Swaasa : ನಿಮ್ಮ ಕೆಮ್ಮಿನ ಶಬ್ದ ಕೇಳಿ ಅಸ್ತಮಾ, ಟಿಬಿ ಕಾಯಿಲೆ ಪತ್ತೆಹಚ್ಚುತ್ತೆ ಈ `AI’ ತಂತ್ರಜ್ಞಾನ : ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ !

18/03/2026 8:06 AM1 Min Read

ALERT : ಮಹಿಳೆಯರೇ ಎಚ್ಚರ : ಅತಿಯಾದ `ನೈಲ್ ಪಾಲಿಶ್’ ಬಳಕೆಯಿಂದ `ಕ್ಯಾನ್ಸರ್’ ಬರಬಹುದು ಹುಷಾರ್ !

18/03/2026 8:00 AM1 Min Read
Recent News

BREAKING : ‘ಜೈ ಬಾಂಗ್ಲಾ’ ಘೋಷಣೆ ಕೂಗಿದ್ದ ಮಹಿಳೆಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು !

18/03/2026 8:23 AM

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಉಚಿತ ಶೂ, ಸಾಕ್ಸ್ ವಿತರಣೆ !

18/03/2026 8:14 AM

ಭಾರತಕ್ಕೆ ಹಸ್ತಾಂತರ ತಡೆಯಲು ನೀರವ್ ಮೋದಿ ಕೊನೆಯ ಯತ್ನ: ಲಂಡನ್ ಹೈಕೋರ್ಟ್ ಮೆಟ್ಟಿಲೇರಿದ ವಜ್ರದ ವ್ಯಾಪಾರಿ

18/03/2026 8:13 AM

Swaasa : ನಿಮ್ಮ ಕೆಮ್ಮಿನ ಶಬ್ದ ಕೇಳಿ ಅಸ್ತಮಾ, ಟಿಬಿ ಕಾಯಿಲೆ ಪತ್ತೆಹಚ್ಚುತ್ತೆ ಈ `AI’ ತಂತ್ರಜ್ಞಾನ : ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ !

18/03/2026 8:06 AM
State News
KARNATAKA

BREAKING : ‘ಜೈ ಬಾಂಗ್ಲಾ’ ಘೋಷಣೆ ಕೂಗಿದ್ದ ಮಹಿಳೆಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು !

By kannadanewsnow5718/03/2026 8:23 AM KARNATAKA 1 Min Read

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಮಹಿಳೆಗೆ…

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಉಚಿತ ಶೂ, ಸಾಕ್ಸ್ ವಿತರಣೆ !

18/03/2026 8:14 AM

Swaasa : ನಿಮ್ಮ ಕೆಮ್ಮಿನ ಶಬ್ದ ಕೇಳಿ ಅಸ್ತಮಾ, ಟಿಬಿ ಕಾಯಿಲೆ ಪತ್ತೆಹಚ್ಚುತ್ತೆ ಈ `AI’ ತಂತ್ರಜ್ಞಾನ : ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ !

18/03/2026 8:06 AM

ALERT : ಮಹಿಳೆಯರೇ ಎಚ್ಚರ : ಅತಿಯಾದ `ನೈಲ್ ಪಾಲಿಶ್’ ಬಳಕೆಯಿಂದ `ಕ್ಯಾನ್ಸರ್’ ಬರಬಹುದು ಹುಷಾರ್ !

18/03/2026 8:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.