Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: 2026-27ನೇ ಸಾಲಿಗೆ 2 ಜೊತೆ ಉಚಿತ ಸಮವಸ್ತ್ರ ವಿತರಣೆಗೆ ಸರ್ಕಾರ ಆದೇಶ
KARNATAKA

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: 2026-27ನೇ ಸಾಲಿಗೆ 2 ಜೊತೆ ಉಚಿತ ಸಮವಸ್ತ್ರ ವಿತರಣೆಗೆ ಸರ್ಕಾರ ಆದೇಶ

By kannadanewsnow57

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ‘ವಿದ್ಯಾವಿಕಾಸ ಯೋಜನೆ’ಯಡಿ ಎರಡು ಜೊತೆ ಉಚಿತ ಸಮವಸ್ತ್ರಗಳನ್ನು ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ಪೂರ್ಣಗೊಳಿಸಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.

ಎರಡು ಜೊತೆ ಸಮವಸ್ತ್ರ: ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ತಲಾ ಎರಡು ಜೊತೆ ಉಚಿತ ಸಮವಸ್ತ್ರ ಹಾಗೂ ಬಟ್ಟೆಗಳನ್ನು ಪೂರೈಸಲಾಗುವುದು.

ಪೂರೈಕೆದಾರ ಸಂಸ್ಥೆಗಳ ಆಯ್ಕೆ: ವಿವಿಧ ಜಿಲ್ಲೆಗಳಿಗೆ ಸಮವಸ್ತ್ರ ಪೂರೈಸಲು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಸೇರಿದಂತೆ ಒಟ್ಟು 7 ಪ್ರಮುಖ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಲಾಗಿದೆ.

ಸಾರಿಗೆ ವೆಚ್ಚದ ಅನುದಾನ: ಸಮವಸ್ತ್ರಗಳನ್ನು ತಾಲೂಕು ಕೇಂದ್ರಗಳಿಂದ ಶಾಲೆಗಳಿಗೆ ತಲುಪಿಸಲು ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿಗೆ 20,000 ರೂ. ಗಳ ಸಾರಿಗೆ ವೆಚ್ಚವನ್ನು ಬಿಡುಗಡೆ ಮಾಡಲಾಗಿದೆ.

ಹೊಲಿಗೆ ವೆಚ್ಚ ಪೋಷಕರ ಜವಾಬ್ದಾರಿ: ಸರ್ಕಾರವು ಕೇವಲ ಸಮವಸ್ತ್ರದ ಬಟ್ಟೆಯನ್ನು ಮಾತ್ರ ಉಚಿತವಾಗಿ ನೀಡುತ್ತಿದ್ದು, ಅದರ ಹೊಲಿಗೆ ವೆಚ್ಚವನ್ನು ಫಲಾನುಭವಿ ಮಕ್ಕಳ ಪೋಷಕರೇ ಭರಿಸಬೇಕೆಂದು ಸೂಚಿಸಲಾಗಿದೆ.

ಗುಣಮಟ್ಟಕ್ಕೆ ಆದ್ಯತೆ:
ಸಮವಸ್ತ್ರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪೂರೈಕೆಯಾದ ಎರಡು ವಾರಗಳೊಳಗೆ ಪ್ರತಿ ತಾಲೂಕಿನಿಂದ ರ್ಯಾಂಡಮ್ ಆಗಿ 6 ಮಾದರಿಗಳನ್ನು (Samples) ಪಡೆದು ಪರೀಕ್ಷೆಗೆ ಒಳಪಡಿಸಬೇಕು. ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸಂಬಂಧಪಟ್ಟ ಪೂರೈಕೆದಾರ ಸಂಸ್ಥೆಯನ್ನೇ ಹೊಣೆ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ದಾಖಲಾತಿ ಮತ್ತು ವಿತರಣೆ:
2025-26ನೇ ಸಾಲಿನ SATS (Student Achievement Tracking System) ದಾಖಲಾತಿಯ ಆಧಾರದ ಮೇಲೆ ಸಮವಸ್ತ್ರಗಳ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಶಾಲೆಗಳಿಗೆ ಸಮವಸ್ತ್ರ ತಲುಪಿದ ತಕ್ಷಣ ಮುಖ್ಯೋಪಾಧ್ಯಾಯರು ಮಕ್ಕಳಿಗೆ ವಿತರಿಸಿ, ಪೋಷಕರಿಂದ ಸ್ವೀಕೃತಿ ಪತ್ರ ಪಡೆದು ಮೂರು ದಿನದೊಳಗೆ ಇಲಾಖೆಗೆ ವರದಿ ಸಲ್ಲಿಸಬೇಕಿದೆ.

ಯಾವುದೇ ಕಾರಣಕ್ಕೂ ಸಮವಸ್ತ್ರದ ಬಟ್ಟೆಗಳು ಗೋದಾಮುಗಳಲ್ಲಿ ಉಳಿಯಬಾರದು ಮತ್ತು ವಿತರಣೆಯಲ್ಲಿ ವಿಳಂಬವಾಗಬಾರದು ಎಂದು ಶಿಕ್ಷಣ ಇಲಾಖೆಯ ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

Good news for government school children in the state: Government orders distribution of 2 sets of free uniforms for the year 2026-27
Share. Facebook Twitter LinkedIn WhatsApp Email

Related Posts

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

2 Mins Read

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

2 Mins Read

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

6 Mins Read
Recent News

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

‘ಇರಾನ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ಸಾಧಿಸಿದೆ’: ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಡುವೆ ಟ್ರಂಪ್ ಮತ್ತು ರಕ್ಷಣಾ ಕಾರ್ಯದರ್ಶಿ ಅಧಿಕೃತ ಘೋಷಣೆ!

State News
KARNATAKA

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ…

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

BIG BREAKING: ರಾಜ್ಯ ಸರ್ಕಾರದಿಂದ ‘ಶಾಲಾ-ಕಾಲೇಜು’ಗಳಲ್ಲಿ ‘ಹಿಜಾಬ್ ನಿಷೇಧ’ ಆದೇಶ ವಾಪಾಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.