ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಕೆಲಸ, ಅದು ಕೂಡ ಯಾವುದೇ ಲಿಖಿತ ಪರೀಕ್ಷೆಯಿಲ್ಲದೆಯೇ ಪಡೆಯಬಹುದು. ಈ ಅದ್ಭುತ ಅವಕಾಶವನ್ನ ಆಯಿಲ್ ಇಂಡಿಯಾ ಲಿಮಿಟೆಡ್ ಒದಗಿಸಿದೆ. ಈ ಕಂಪನಿಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಉದ್ಯೋಗಗಳನ್ನ ಸಂದರ್ಶನದ ಮೂಲಕ ಮಾತ್ರ ಭರ್ತಿ ಮಾಡಲಾಗುವುದು ಎಂದು ಕಂಪನಿ ಪ್ರಕಟಿಸಿದೆ.
ಆಯಿಲ್ ಇಂಡಿಯಾ ಕಂಪನಿಯು ಇಂಜಿನಿಯರ್’ಗಳ ನೇಮಕಾತಿ ಪ್ರಕ್ರಿಯೆಯನ್ನ ಭಾರಿ ಸಂಬಳದೊಂದಿಗೆ ಕೈಗೆತ್ತಿಕೊಂಡಿದೆ. ಹುದ್ದೆಗಳು ತುಂಬಾ ಕಡಿಮೆ ಇದ್ದು, ಅರ್ಹತೆ ಇರುವವರು ಈ ಕೆಲಸಕ್ಕೆ ಪ್ರಯತ್ನಿಸಬಹುದು. ಕೇವಲ ಸಂದರ್ಶನದಲ್ಲಿ ಮಿಂಚಿದರೆ ಈ ಕೆಲಸ ನಿಮ್ಮದಾಗುತ್ತದೆ.
ಅದ್ರಂತೆ, ಆಯಿಲ್ ಇಂಡಿಯಾ ಕಂಪನಿಯಲ್ಲಿ 7 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಕೆಮಿಸ್ಟ್ 2, ಡ್ರಿಲ್ಲಿಂಗ್ ಎಂಜಿನಿಯರ್ 2, ಸಿವಿಲ್ ಎಂಜಿನಿಯರ್ 1 ಮತ್ತು ಜಿಯಾಲಜಿಸ್ಟ್ 2 ಹುದ್ದೆಗಳಿವೆ. ಈ ಉದ್ಯೋಗಗಳ ಬಗ್ಗೆ ಸಂಪೂರ್ಣ ವಿವರಗಳಿಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್ www.oil-india.com ಗೆ ಭೇಟಿ ನೀಡಿ.
ಶೈಕ್ಷಣಿಕ ಅರ್ಹತೆಗಳು ಮತ್ತು ವಯಸ್ಸಿನ ಮಿತಿ.!
ರಸಾಯನಶಾಸ್ತ್ರಜ್ಞ : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಈ ಕೆಲಸಕ್ಕೆ ಅರ್ಹವಾಗಿದೆ. ಇಲ್ಲದಿದ್ದರೆ ಕೆಮಿಕಲ್, ಪೆಟ್ರೋಲಿಯಂ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿರಬೇಕು.
ಮೇಲಿನ ಶೈಕ್ಷಣಿಕ ಅರ್ಹತೆಗಳನ್ನ ಹೊಂದಿರುವ 24-50 ವರ್ಷ ವಯಸ್ಸಿನ ಅಭ್ಯರ್ಥಿಗಳು ಈ ಕೆಲಸಕ್ಕೆ ಪ್ರಯತ್ನಿಸಬಹುದು. ಈ ಕೆಲಸಕ್ಕೆ ಆಯ್ಕೆಯಾದರೆ ತಿಂಗಳಿಗೆ 70 ಸಾವಿರ ರೂಪಾಯಿ ಸಂಬಳ ಪಡೆಯಬಹುದು.
ಮೆಕ್ಯಾನಿಕಲ್ ಇಂಜಿನಿಯರ್ : ಪೆಟ್ರೋಲಿಯಂನಲ್ಲಿ ಸ್ನಾತಕೋತ್ತರ ಪದವಿ ಅಥವಾ ನಾಲ್ಕು ವರ್ಷಗಳ ಮೆಕ್ಯಾನಿಕಲ್ ಎಂಜಿನಿಯರಿಂಗ್. ಅಲ್ಲದೆ ಮೂರು ವರ್ಷಗಳ ಕಾಲ ಗ್ಯಾಸ್ ಇಂಡಸ್ಟ್ರಿ ಅಥವಾ ಆಯಿಲ್ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಇರುವವರು ಈ ಉದ್ಯೋಗಗಳಿಗೆ ಅರ್ಹರು. 20-40 ವರ್ಷದೊಳಗಿನವರು ಅರ್ಹರು. ಈ ಕೆಲಸಕ್ಕೆ ಆಯ್ಕೆಯಾದವರು ಮಾಸಿಕ ರೂ.80,000 ವೇತನ ಪಡೆಯುತ್ತಾರೆ.
ಭೂವಿಜ್ಞಾನಿ : ಭೂವಿಜ್ಞಾನದಲ್ಲಿ ಪಿಜಿ ಜೊತೆಗೆ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ಅನ್ವಯಿಕ ಭೂವಿಜ್ಞಾನವನ್ನ ಮಾಡಿರಬೇಕು. ಅಲ್ಲದೆ ಮೂರು ವರ್ಷಗಳ ಅನುಭವ ಹೊಂದಿರಬೇಕು. ಈ ಅರ್ಹತೆಗಳನ್ನು ಹೊಂದಿರುವ ವಯಸ್ಸು 24-40 ವರ್ಷಗಳ ನಡುವೆ ಇರಬೇಕು. ಈ ಕೆಲಸ ಪಡೆದವರಿಗೆ ಮಾಸಿಕ 80 ಸಾವಿರ ರೂಪಾಯಿ ವೇತನ ಸಿಗಲಿದೆ.
ಸಿವಿಲ್ ಎಂಜಿನಿಯರ್ : ಮಾನ್ಯತೆ ಪಡೆದ ಸಂಸ್ಥೆಯಿಂದ ನಾಲ್ಕು ವರ್ಷಗಳ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳಿಸಿರಬೇಕು. ಮೂರು ವರ್ಷಗಳ ಅನುಭವ ಹೊಂದಿರಬೇಕು. ವಯಸ್ಸು 24-40 ವರ್ಷಗಳ ನಡುವೆ ಇರಬೇಕು. ಈ ಹುದ್ದೆಗೆ ಆಯ್ಕೆಯಾದವರು ಮಾಸಿಕ 70 ಸಾವಿರ ರೂಪಾಯಿ ವೇತನ ಪಡೆಯುತ್ತಾರೆ.
ಸಂದರ್ಶನ : ಮೇಲೆ ತಿಳಿಸಲಾದ ವಿದ್ಯಾರ್ಹತೆಗಳನ್ನ ಹೊಂದಿರುವ ಅಭ್ಯರ್ಥಿಗಳು ಈ ತಿಂಗಳು ಅಂದರೆ ಆಗಸ್ಟ್ 16, 2024 ರಂದು ಸಂದರ್ಶನಕ್ಕೆ ಹಾಜರಾಗಬೇಕು. ಈ ಸಂದರ್ಶನವು IDCO ಟವರ್ಸ್, ಆಯಿಲ್ ಇಂಡಿಯಾ ಲಿಮಿಟೆಡ್, ಮಹಾನದಿ ಬೇಸಿನ್ ಪ್ರಾಜೆಕ್ಟ್, ಭುವನೇಶ್ವರ್, ಒಡಿಶಾದ ಮೂರನೇ ಮಹಡಿಯಲ್ಲಿ ನಡೆಯಲಿದೆ. ಶೈಕ್ಷಣಿಕ ವಿದ್ಯಾರ್ಹತೆಗಳೊಂದಿಗೆ ಅಧಿಸೂಚನೆಯಲ್ಲಿ ನಮೂದಿಸಿದ ದಾಖಲೆಗಳೊಂದಿಗೆ (ಮೂಲ) ಬೆಳಿಗ್ಗೆ 9 ರಿಂದ 11 ರವರೆಗೆ ನೋಂದಣಿ ಮಾಡಬೇಕು. ಬಳಿಕ ಸಂದರ್ಶನ ನಡೆಯಲಿದೆ.
ನ್ಯಾನೋ ತಂತ್ರಜ್ಞಾನ ಸಮ್ಮೇಳನ ಮಾದರಿಯಲ್ಲಿ ಬೆಂಗಳೂರು ಕ್ವಾಂಟಮ್ ತಂತ್ರಜ್ಞಾನ ಸಮ್ಮೇಳನ: ಡಿ.ಕೆ.ಶಿವಕುಮಾರ್
Liquor Limit : ಕಾನೂನುಬದ್ಧವಾಗಿ ಮನೆಯಲ್ಲಿ ಎಷ್ಟು ‘ಮದ್ಯ’ ಇಟ್ಟುಕೊಳ್ಬೋದು ಗೊತ್ತಾ? ರಾಜ್ಯವಾರು ‘ಮಿತಿ’ ಇಲ್ಲಿದೆ!
ಚಿತ್ರದಲ್ಲಿ ಹಾಡುಗಳನ್ನು ಬಳಸಲು ‘MRT’ ಸಂಸ್ಥೆಯವರು ಹೆಚ್ಚಿನ ಮೊತ್ತ ಕೇಳಿದ್ದರು : ನಟ ರಕ್ಷಿತ್ ಶೆಟ್ಟಿ